ಚಂದ್ರಯಾನ-3 ಇಳಿದ ಸ್ಥಳಕ್ಕೆ ಶಿವಶಕ್ತಿ ಹೆಸರಿಟ್ಟಿದ್ದರಲ್ಲಿ ತಪ್ಪೇನಿಲ್ಲ: ಇಸ್ರೋ ಮುಖ್ಯಸ್ಥ ಸೋಮನಾಥ್‌

‘ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ಇಳಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ‘ಶಿವಶಕ್ತಿ’ ಎಂದು ನಾಮಕರಣ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ.

There is nothing wrong with The place where Chandrayaan-3 landed is named as ShivaShakti from PM modi ISRO chief Somnath akb

ತಿರುವನಂತಪುರ: ‘ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ಇಳಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ‘ಶಿವಶಕ್ತಿ’ ಎಂದು ನಾಮಕರಣ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ.

ಇಲ್ಲಿನ ಪೌರ್ಣಮಿ ಕಾವು ಭದ್ರಕಾಳಿ ದೇಗುಲಕ್ಕೆ (Bhadrakali Temple) ಭೇಟಿ ನೀಡಿ ಮಾತನಾಡಿದ ಅವರು,‘ಈ ಹೆಸರು ಇಡುವ ಹಿಂದಿನ ಮಹತ್ವವನ್ನು ಪ್ರಧಾನಿ ಅವರು ನಮಗೆ ವಿವರಿಸಿದ್ದಾರೆ. ಹಾಗಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ. ಅಲ್ಲದೇ ಅವರು ಚಂದ್ರಯಾನ-2 ನೌಕೆ (Chandrayaan 2) ಬಿದ್ದ ಜಾಗಕ್ಕೆ ತಿರಂಗಾ ಪಾಯಿಂಟ್‌ (Tiranga point) ಎಂದು ಹೆಸರಿಟ್ಟಿದ್ದಾರೆ. ಇವರೆರಡೂ ಸಹ ಭಾರತದ ಹೆಸರುಗಳಾಗಿದೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಮಹತ್ವ ನಮಗೆ ಅರಿವಿರಬೇಕು. ದೇಶದ ಪ್ರಧಾನಿಯಾಗಿ ಅವರು ಈ ಪ್ರದೇಶಗಳಿಗೆ ಹೆಸರಿಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

Chandrayaan-3 ಯಶಸ್ಸಿನ ಬಳಿಕ ಕೇರಳದ ಭದ್ರಕಾಳಿ ದೇಗುಲದಲ್ಲಿ ಇಸ್ರೋ ಅಧ್ಯಕ್ಷರ ಪ್ರಾರ್ಥನೆ: ಸೂರ್ಯ ಶಿಕಾರಿಗೆ ರೆಡಿ!

ದೇಗುಲ ಭೇಟಿ ಬಗ್ಗೆ ಮಾತನಾಡಿದ ಅವರು,ನಾನು ಜ್ಞಾನವನ್ನು ಬಯಸುವವನು. ಹಾಗಾಗಿಯೇ ಚಂದ್ರನ ಅಧ್ಯಯನ ಮಾಡುತ್ತಿದ್ದೇನೆ. ಬಾಹ್ಯಾಕಾಶದ ಅಧ್ಯಯನ (Space Reserch) ಮಾಡುತ್ತೇನೆ. ಇದರೊಂದಿಗೆ ಆಧ್ಯಾತ್ಮವನ್ನು ಅರಿಯುವುದು ಸಹ ನನ್ನ ಪಯಣವೇ ಆಗಿದೆ. ಹೀಗೆ ಆಂತರಿಕವಾಗಿ ವಿಕಸಿತನಾಗಲು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವೆ, ಧಾರ್ಮಿಕ ಗ್ರಂಥಗಳನ್ನು ಓದುವೆ. ನಮ್ಮ ಬಗ್ಗೆ ತಿಳಿದುಕೊಳ್ಳಲು ಇದರ ಅಧ್ಯಯನ ಅಗತ್ಯವಾಗಿದೆ. ಈ ಎರಡು ವಿಷಯಗಳು ವಿಭಿನ್ನವಾದದ್ದು. ಇದನ್ನು ಬೆರೆಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇಸ್ರೋ ಆಧ್ಯಕ್ಷ ಸೋಮನಾಥ್‌ ಬೆನ್ನುತಟ್ಟಿ ಶ್ಲಾಘಿಸಿದ ಪ್ರಧಾನಿ ಮೋದಿ

Latest Videos
Follow Us:
Download App:
  • android
  • ios