ಕರ್ನಾಟಕದ ಕರಾವಳಿಗೆ ಈಗ ಚಂಡಮಾರುತ ದಾಳಿ ಭೀತಿ: ಇಂದಿನಿಂದ ಕರಾವಳಿಯಲ್ಲಿ 3 ದಿನ ಮಳೆ ಸಾಧ್ಯತೆ

ಕರ್ನಾ​ಟಕ ಕರಾ​ವಳಿ ಪ್ರಕ್ಷು​ಬ್ಧ​ವಾ​ಗಿದ್ದು. ಕರ್ನಾ​ಟಕ, ಮಹಾ​ರಾಷ್ಟ್ರ, ಕೇರಳ ಹಾಗೂ ಗುಜ​ರಾತ್‌ ಕರಾ​ವ​ಳಿ​ಗ​ಳಲ್ಲಿ3 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

There is a threat of cyclone attack on the coast of Karnataka 3 days of rain is likely on the coastal Area of Karnataka from today akb
  • ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ
  •  ಚಂಡಮಾರುತ ರೂಪ. ‘ಬಿಪರ್‌ಜಾಯ್‌’ (ವಿಪತ್ತು) ಎಂಬ ಹೆಸರು
  • ನಿನ್ನೆಯಿಂದಲೇ ಕರ್ನಾಟಕದ ಸಮುದ್ರ ತೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ
  • ಇಂದಿನಿಂದ 4 ರಾಜ್ಯಗಳ ಕರಾವಳಿಯಲ್ಲಿ ಭಾರಿ ಮಳೆಯ ಸಾಧ್ಯತೆ
  •  ಸಮುದ್ರದಿಂದ ಹಿಂತಿರುಗುವಂತೆ ಮೀನುಗಾರರಿಗೆ ಸೂಚನೆ
  • ಚಂಡಮಾರುತದಿಂದ ಮುಂಗಾರು ಆಗಮನ ಮತ್ತಷ್ಟು ತಡ ಸಂಭವ

ನವದೆಹಲಿ: ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾ​ಗಿ​ದ್ದ ವಾಯುಭಾರ ಕುಸಿತ ಇದೀಗ ಚಂಡಮಾರುತದ ರೂಪ ತಾಳಿದೆ. ‘ಬಿಪರ್‌​ಜಾಯ್‌’ (ವಿ​ಪ​ತ್ತು) ಹೆಸ​ರಿನ ಚಂಡ​ಮಾ​ರುತ ಉತ್ತ​ರಾ​ಭಿ​ಮು​ಖ​ವಾ​ಗಿ ಚಲಿಸಲು ಪ್ರಾರಂಭಿಸಿದ್ದು, ಕರ್ನಾ​ಟಕ ಕರಾ​ವಳಿ  ಪ್ರಕ್ಷು​ಬ್ಧ​ವಾ​ಗಿದೆ. ಕರ್ನಾ​ಟಕ, ಮಹಾ​ರಾಷ್ಟ್ರ, ಕೇರಳ ಹಾಗೂ ಗುಜ​ರಾತ್‌ ಕರಾ​ವ​ಳಿ​ಗ​ಳಲ್ಲಿ 3 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ಚಂಡ​ಮಾ​ರು​ತ​ವು ಮುಂಗಾರು ಆಗ​ಮ​ನಕ್ಕೆ ಅಡ್ಡಿ ಮಾಡಿದೆ. ಖಾಸಗಿ ಹವಾ​ಮಾ​ನ ಸಂಸ್ಥೆ ಸ್ಕೈಮೆಟ್‌ ಪ್ರಕಾರ, ಮುಂಗಾರು ಜೂ.8 ಅಥವಾ 9ರಂದು ಕೇರಳ ಪ್ರವೇ​ಶಿ​ಸ​ಬ​ಹುದು. ಆದರೆ ಅದು ಪ್ರಬಲ ರೂಪ​ದ​ಲ್ಲಿ​ರದೇ ದುರ್ಬ​ಲ​ವಾ​ಗಿ​ರ​ಲಿದೆ ಎಂದು ಹೇಳ​ಲಾ​ಗಿ​ದೆ.

ಈ ಚಂಡಮಾರುತಕ್ಕೆ ಬಂಗಾಳಿ ಭಾಷೆ​ಯ ಬಿಪರ್‌ಜಾಯ್‌ (ವಿಪತ್ತು) ಎಂದು ಹೆಸರಿಡಲಾಗಿದ್ದು, ಬಾಂಗ್ಲಾದೇಶ (Bangladesh)ಈ ಹೆಸರನ್ನು ಸೂಚಿಸಿದೆ. ಈ ಚಂಡಮಾರುತ (cyclone) ಪ್ರಭಾವದಿಂದಾಗಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಮಳೆಯಾಗಲಿದೆ. ಈ ಚಂಡಮಾರುತ ಪಶ್ಚಿಮ ಘಟ್ಟವನ್ನು ದಾಟುವಷ್ಟುಪ್ರಬಲವಾಗಿ ಭಾರತದತ್ತ ಬೀಸುವುದಿಲ್ಲ ಎಂದು ಇಲಾಖೆ ಹೇಳಿದೆ.

ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ

ಉತ್ತ​ರಾಭಿಮುಖ​ವಾಗಿ ಲಗ್ಗೆ:

ಈ ಚಂಡಮಾರುತ ಗೋವಾದಿಂದ (Goa) ನೈಋುತ್ಯ ಭಾಗ​ಕ್ಕೆ 950 ಕಿ.ಮೀ., ಮುಂಬೈನಿಂದ 1,100 ಕಿ.ಮೀ. ಮತ್ತು ಪೋರಬಂದರಿನಿಂದ 1,490 ಕಿ.ಮೀ. ದೂರದಲ್ಲಿ ಸೃಷ್ಟಿಯಾಗಿದೆ. ಈ ಚಂಡಮಾರುತ ಉತ್ತರಾಭಿಮುಖವಾಗಿ ಚಲಿಸುತ್ತಿದ್ದು, ಜೂ.8ರಂದು ಗೋವಾ, ಮಹಾರಾಷ್ಟ್ರ (Maharashtra) ಸಮುದ್ರ ತೀರಗಳಲ್ಲಿ ಪ್ರಕ್ಷುಬ್ಧ ವಾತಾವರಣ ಇರಲಿದೆ ಎಂದು ಇಲಾಖೆ ಹೇಳಿದೆ. ವಾಯುಭಾರ ಕುಸಿತದಿಂದಾಗಿ ಮಂಗಳವಾರ ಕರ್ನಾಟಕದ ಕರಾವಳಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ಮೀನುಗಾರರಿಗೆ ದಡಕ್ಕೆ ಮರಳುವಂತೆ ಎಚ್ಚರಿಕೆ ನೀಡಲಾಗಿದೆ. ಈ ಚಂಡ​ಮಾ​ರು​ತ​ ಗುರುವಾರದ ಹೊತ್ತಿಗೆ ಮತ್ತಷ್ಟುತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಆದರೆ, ಈ ಚಂಡಮಾರುತ ವಾಯವ್ಯ ದಿಕ್ಕಿನತ್ತಲೂ ಚಲಿಸುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಭಾರತದ ಯಾವ ತೀರಕ್ಕೆ ಅಪ್ಪಳಿಸಬಹುದು ಎಂದು ಸ್ಪಷ್ಟಪಡಿಸಿಲ್ಲ. ಮುಂಗಾರು ಮಾರುತ ವಿಳಂಬವಾಗಲು ಈ ಚಂಡಮಾರುತವೂ ಕಾರಣವಾಗಿದ್ದು, ಈ ಮೊದಲು ಹವಾಮಾನ ಇಲಾಖೆ ಅಂದಾಜಿಸಿದಂತೆ ಜೂ.3ರಂದೇ ಆಗಮಿಸಬೇಕಿತ್ತು. ಇದೀಗ ಮುಂಗಾರು ಮತ್ತಷ್ಟುವಿಳಂಬವಾಗಲಿದೆ ಎಂದು ಹೇಳಲಾಗುತ್ತಿದ್ದು, ನಿಖರ ದಿನಾಂಕವನ್ನು ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿಲ್ಲ.

 ಮೋದಿ ಉದ್ಘಾಟನೆ ಮಾಡಿದ್ದ ಮಹಾಕಾಲ ಲೋಕದ ಸಪ್ತಋಷಿ ಪ್ರತಿಮೆಗಳು ಬಿರುಗಾಳಿಗೆ ನೆಲಸಮ!

Latest Videos
Follow Us:
Download App:
  • android
  • ios