Asianet Suvarna News Asianet Suvarna News

ಚಿರತೆಯನ್ನು ತಿನ್ನುತ್ತಿರುವ ಕಾಡುಹಂದಿಗಳು: ವಿಡಿಯೋ ವೈರಲ್

  • ಚಿರತೆಯ ಕಳೇಬರ ತಿನ್ನುತ್ತಿರುವ ಕಾಡುಹಂದಿಗಳು
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಪಳನಿ-ಕೊಡೈಕೆನಾಲ್ ಅರಣ್ಯ ಪ್ರದೇಶದಲ್ಲಿ ಘಟನೆ
     
The wild boar eats leopards corpse in kodaikanal forest Area in Tamilnadu akb
Author
Tamil Nadu, First Published May 10, 2022, 5:52 PM IST

ಅಪಘಾತವೊಂದರಲ್ಲಿ ಗಾಯಗೊಂಡು ಬಿದ್ದಿದ್ದ ಚಿರತೆಯೊಂದನ್ನು ಮೂರು ಕಾಡು ಹಂದಿಗಳು ಎಳೆದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಕಾಡು ಹಂದಿಗಳು (Wild Boar) ಚಿರತೆಯನ್ನು ತಿನ್ನುತ್ತವೆಯೇ ಎಂಬ ಸಂಶಯ ಮೂಡಿದೆ. ಚಿರತೆಗಳು ಕಾಡು ಹಂದಿಯನ್ನು ಬೇಟೆಯಾಡುವುದು ಸಾಮಾನ್ಯ. ಆದರೆ ಕಾಡು ಹಂದಿಗಳು ಚಿರತೆಯನ್ನು ಬೇಟೆಯಾಡುವುದನ್ನು ಯಾರೂ ಎಲ್ಲೋ ನೋಡಿಲ್ಲ. 

ಪ್ರಸ್ತುತ ವೈರಲ್ ಆಗಿರುವ ವಿಡಿಯೋವೋ ತಮಿಳುನಾಡಿನ (Tamilnadu) ಪಳನಿ (Palani) -ಕೊಡೈಕೆನಾಲ್ ಅರಣ್ಯ ಪ್ರದೇಶದ್ದಾಗಿದೆ. ಕಾರು ಡಿಕ್ಕಿಯಾಗಿ ಚಿರತೆ ಕೆಳಗೆ ಬೀಳುತ್ತಿದ್ದಂತೆ ಮೂರು ಕಾಡು ಹಂದಿಗಳು ಆ ಸ್ಥಳಕ್ಕೆ ಆಗಮಿಸಿ ಚಿರತೆಯ ಶವವನ್ನು ತಿನ್ನಲು ಯತ್ನಿಸುತ್ತಿವೆ. ಕೊಡೈಕೆನಾಲ್‌ (kodaikanal) ಒಂದು ಹಿಲ್‌ ಸ್ಟೇಷನ್‌ (Hill station)ಆಗಿದ್ದು, ಬೇಸಿಗೆ ಸಮಯದಲ್ಲಿ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. 

ಅರಣ್ಯಾಧಿಕಾರಿ, ಪೊಲೀಸರ ಮೇಲೆ ಎಗರಿಬಿದ್ದ ಚೀತಾ: ವಿಡಿಯೋ ವೈರಲ್

ಈ ಘಟನೆ ಬಗ್ಗೆ ಮಾತನಾಡಿದ ಡಿಎಫ್‌ಒ ಪಿ.ಕೆ. ದಿಲೀಪ್ (Dileep) , ಇದೊಂದು ಹಿಟ್ & ರನ್ ಪ್ರಕರಣವಾಗಿದೆ. ನಮ್ಮ ವಿಭಾಗವೂ ಅಪಘಾತಕ್ಕೀಡು ಮಾಡಿದ ವಾಹನವನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವು ಈ ವಾಹನವನ್ನು ಪತ್ತೆ ಮಾಡಲು ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.ಕಾಡು ಹಂದಿಗಳು ನೈಸರ್ಗಿಕವಾಗಿ ಸತ್ತ ಪ್ರಾಣಿಗಳನ್ನು ತಿನ್ನುವ ಪ್ರಾಣಿಗಳಾಗಿದ್ದು, ಸಹಜವಾಗಿ ಕಾಡಿನಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. ಹಾಗಾಗಿ ಈ ಘಟನೆ ಅಂತ ಅಚ್ಚರಿ ಏನಲ್ಲ ಎಂದು ಅವರು ಹೇಳಿದ್ದಾರೆ.

ಕಪ್ಪುಚಿರತೆ ಮರಿ ತುಂಟಾಟ ಕ್ಯಾಮೆರಾದಲ್ಲಿ ಸೆರೆ 

ತಾಯಿಯಿಂದ ಬೇರ್ಪಟ್ಟಿದ್ದ 10 ದಿನಗಳ ಪ್ರಾಯದ ಚಿರತೆ ಮರಿಯನ್ನು ಅರಣ್ಯ ಇಲಾಖೆ (Forest department) ಸಿಬ್ಬಂದಿ ಮತ್ತೆ ತಾಯಿಯೊಂದಿಗೆ ಸೇರಿಸಿದ ಘಟನೆ ಮಾರ್ಚ್ ತಿಂಗಳಲ್ಲಿ ವರದಿಯಾಗಿತ್ತು.. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರದ(Maharashtra) ನಾಸಿಕ್‌ನ (Nashik) ಸಮೀಪದ ಕಬ್ಬಿನ ಗದ್ದೆಯಲ್ಲಿ 10 ದಿನದ ಚಿರತೆ ಮರಿ ಕಾಣಿಸಿಕೊಂಡಿತ್ತು. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂಬೈ (Mumbai) ಮೂಲದ ಎನ್‌ಜಿಒ ಸಹಾಯದಿಂದ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ತಾಯಿ ಹಾಗೂ ಮಗುವಿನ ಪುನರ್ಮಿಲನವನ್ನು ಖಚಿತಪಡಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಮರಾಠಿ ಮಾಧ್ಯಮವಾದ ದೇಶ್‌ದೂತ್ ಹಂಚಿಕೊಂಡ ವೀಡಿಯೊದಲ್ಲಿ ತಾಯಿ ಬುಟ್ಟಿಯನ್ನು ತೆರೆದು ಅದರೊಳಗಿದ್ದ ಮರಿಯನ್ನು ನೋಡಿದ್ದಾಳೆ. ಕೂಡಲೇ ತಾಯಿ ಮರಿಯನ್ನು ತನ್ನ ಬಾಯಿಯಿಂದ ಕಚ್ಚಿ ಹಿಡಿದು ಬೇರೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಾಳೆ. ಚಿರತೆ ಮರಿಯೊಂದು ನಿರ್ಜನ ಪ್ರದೇಶದಲ್ಲಿ ಕ್ಯಾಮರಾ ನೋಡುತ್ತಿರುವುದನ್ನು ಮತ್ತು ತಾಯಿ ಒಂಟಿಯಾಗಿ ಕುಳಿತಿರುವ ಫೋಟೋಗಳನ್ನು ಎಎನ್‌ಐ ಟ್ವೀಟ್ ಮಾಡಿದೆ.

ನಾವು 10 ದಿನದ ಚಿರತೆ ಮರಿಯನ್ನು ಅದರ ತಾಯಿಯೊಂದಿಗೆ ಸುರಕ್ಷಿತವಾಗಿ ಮತ್ತೆ ಸೇರಿಸಿದ್ದೇವೆ. ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪತ್ತೆಯಾಗಿತ್ತು. ನಾವು ಇಕೋ-ಎಕೋ ಫೌಂಡೇಶನ್‌ನ ಸಹಾಯದಿಂದ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದೆವು ಮತ್ತು ಮರಿಯನ್ನು ಯಶಸ್ವಿಯಾಗಿ ಮತ್ತೆ ಒಂದಾಗಿಸಲಾಗಿದೆ ಎಂದು ನಾಸಿಕ್‌ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಉಮೇಶ್ ವಾವೇರ್ (Umesh Waware) ಅವರು ಹೇಳಿದ್ದನ್ನು ಟ್ವೀಟ್‌ನಲ್ಲಿ ಎಎನ್‌ಐ ಉಲ್ಲೇಖಿಸಿದೆ. ಈ ಕಾರ್ಯಾಚರಣೆಯಲ್ಲಿ ತೊಡಗಿದ ಅರಣ್ಯ ಇಲಾಖೆಯ ತಂಡದ ಪ್ರಯತ್ನಕ್ಕೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಎಲ್ಲಾ ಚೆನ್ನಾಗಿದೆ, ಆದರೆ ಸರ್ ದಯವಿಟ್ಟು ಮಗುವನ್ನು ತಾಯಿ ಚಿರತೆಯೊಂದಿಗೆ ಇರಿಸಿ'ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios