ಅರಣ್ಯಾಧಿಕಾರಿ, ಪೊಲೀಸರ ಮೇಲೆ ಎಗರಿಬಿದ್ದ ಚೀತಾ: ವಿಡಿಯೋ ವೈರಲ್

  • ಪಾಣಿಪತ್‌ನ ಬೆಹ್ರಂಪುರ ಗ್ರಾಮಕ್ಕೆ ನುಗ್ಗಿದ ಚಿರತೆ
  • ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ದಾಳಿ
  • ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
Leopard Enters Haryanas Panipat Village Attacks Forest and police Officials akb

ಪಾಣಿಪತ್: ಹರಿಯಾಣದ (Haryana) ಪಾಣಿಪತ್ (Panipat) ಜಿಲ್ಲೆಯ ಬಾಪೋಲಿ ಬ್ಲಾಕ್‌ನ ಬೆಹ್ರಾಂಪುರ ಗ್ರಾಮಕ್ಕೆ (Behrampur village) ಶನಿವಾರ ಚಿರತೆಯೊಂದು ನುಗ್ಗಿದ್ದು, ಪೊಲೀಸರು ಮತ್ತು ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಕೆಲವು ಗ್ರಾಮಸ್ಥರು ಗ್ರಾಮದಲ್ಲಿ ಚಿರತೆ ಇರುವುದನ್ನು ಪತ್ತೆ ಮಾಡಿದ ನಂತರ ರಕ್ಷಣಾ ತಂಡವು ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಿರತೆಯನ್ನು ಹಿಡಿಯುವ ಪ್ರಯತ್ನದಲ್ಲಿದ್ದಾದ ತಂಡದ ನೇತೃತ್ವ ವಹಿಸಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮತ್ತು ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳು  ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಚಿರತೆಯನ್ನು ಯಶಸ್ವಿಯಾಗಿ ಶಾಂತಗೊಳಿಸಿ ಸೆರೆ ಹಿಡಿಯಲಾಗಿದೆ. 

ಪಾಣಿಪತ್ ಎಸ್ಪಿ ಶಶಾಂಕ್ ಕುಮಾರ್ ಸಾವನ್ ಅವರು ಟ್ವಿಟ್ಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಯ ಶೌರ್ಯ ಮತ್ತು ಧೈರ್ಯಕ್ಕೆ  ಅಭಿನಂದನೆ ಸಲ್ಲಿಸಿದ್ದಾರೆ. "ಪೊಲೀಸ್ ಮತ್ತು ಅರಣ್ಯ ಇಲಾಖೆಯವರಿಗೆ ಕೆಲಸದಲ್ಲಿ ಕಠಿಣ ದಿನ. ಇಬ್ಬರು ಗಾಯಗೊಂಡಿದ್ದಾರೆ. ಅವರ ಶೌರ್ಯ ಮತ್ತು ಧೈರ್ಯಕ್ಕೆ ಸೆಲ್ಯೂಟ್, ಕೊನೆಗೆ, ಚಿರತೆ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ" ಎಂದು ಬರೆದು ಘಟನೆಯ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.

ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ, ಬೇಟೆಯಾಡಲು ಬಂದ ಚಿರತೆ ಬರಿಗೈಲಿ ವಾಪಸ್

ಗಾಯಗೊಂಡಿರುವ ಮೂವರು ಅಧಿಕಾರಿಗಳನ್ನು ಸನೌಲಿ ಸ್ಟೇಷನ್ ಹೌಸ್ ಆಫೀಸರ್ ಜಗಜಿತ್ ಸಿಂಗ್ (Jagjit Singh), ಪಾಣಿಪತ್ ಅರಣ್ಯ ಇಲಾಖೆಯ ರೇಂಜರ್ ವೀರೇಂದ್ರ ಗಹ್ಲ್ಯಾನ್ (Virender Gahlyan) ಮತ್ತು ಅರಣ್ಯ ಇಲಾಖೆಯ ಪಶುವೈದ್ಯ ಅಶೋಕ್ ಖಾಸಾ (Ashok Khasa) ಎಂದು ಗುರುತಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪಾಣಿಪತ್ ಡೆಪ್ಯೂಟಿ ಕಮಿಷನರ್ ಸುಶೀಲ್ ಸರ್ವಾನ್ (Sushil Sarwan) ಅವರು ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರ ಧೈರ್ಯವನ್ನು ಶ್ಲಾಘಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅಧಿಕಾರಿಗಳ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಬೇರ್ಪಟ್ಟ ಚಿರತೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ

ಎಲ್ಲಾ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸೆಲ್ಯೂಟ್. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಿದೆ. ಜಾನುವಾರುಗಳ ಹೆಚ್ಚಳ ಮತ್ತು ನೈಸರ್ಗಿಕ ಆವಾಸ ಸ್ಥಾನದ ನಾಶ ಅನಿವಾರ್ಯವಾಗಿ ಚಿರತೆಗಳು ಜಾನುವಾರುಗಳನ್ನು ಬೇಟೆಯಾಡಲು ಕಾರಣವಾಗಿದೆ ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ.
 

ಕಳೆದ ಮಾರ್ಚ್‌ನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿರುವ ವಿಸ್ತಾರವಾದ ಮರ್ಸಿಡಿಸ್ ಬೆಂಜ್ ಕಾರ್ಖಾನೆಯೊಳಗೆ ಚಿರತೆಯೊಂದು ನುಗ್ಗಿದ ಪರಿಣಾಮ ಘಟಕದಲ್ಲಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ವನ್ಯಜೀವಿ ಎಸ್‌ಒಎಸ್‌ ತಂಡದ ದೀರ್ಘ ಮತ್ತು ಕಠಿಣ ಪ್ರಯತ್ನದ ನಂತರ ಚಿರತೆಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು. ಬೆಳಗಿನ ಜಾವ ಐಷಾರಾಮಿ ಕಾರು ತಯಾರಿಕಾ ಕಾರ್ಖಾನೆ ಆವರಣದಲ್ಲಿ ಚಿರತೆಯೊಂದು ಓಡಾಡುತ್ತಿರುವುದನ್ನು ಗಮನಿಸಿದ ಪುಣೆಯ ಚಕನ್‌ನಲ್ಲಿರುವ (Chakan) ಮರ್ಸಿಡಿಸ್ ಬೆಂಜ್ ಪ್ಲಾಂಟ್‌ನ ಕಾರ್ಮಿಕರು ಗಲಿಬಿಲಿಗೊಂಡರು ಮತ್ತು ಅಲಾರಾಂ ಸೌಂಡ್‌ ಮಾಡಿ ಎಲ್ಲರನ್ನು ಎಚ್ಚರಿಸಿದರು. ಚಿರತೆಯನ್ನು ನೋಡಿ ಆರಂಭದಲ್ಲಾದ ಭೀತಿ ಕಡಿಮೆಯಾದ ನಂತರ, ಮಹಾರಾಷ್ಟ್ರ (Maharashtra) ಅರಣ್ಯ ಇಲಾಖೆಯ ತಂಡ ಸ್ಥಳಕ್ಕೆ ಆಗಮಿಸಿ 100 ಎಕರೆಯ ಈ ಕಾರ್ಖಾನೆಯಲ್ಲಿ ಶೋಧ ಕಾರ್ಯ ನಡೆಸಿದರು.

ಸುಮಾರು ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಡಾ.ಶುಭಂ ಪಾಟೀಲ್ (Shubham Patil) ಮತ್ತು ಡಾ.ನಿಖಿಲ್ ಬಂಗಾರ್ (Nikhil Bangar) ಅವರನ್ನೊಳಗೊಂಡ ತಂಡಗಳು ಕಾರ್ಖಾನೆಯ ಶೆಡ್ ಒಂದರ ಅಂಗಡಿಯ ಮಹಡಿಯಲ್ಲಿ ಅಡಗಿದ್ದ ಚಿರತೆಯನ್ನು ಪತ್ತೆ ಹಚ್ಚಿ ನಂತರ ಆ ಪ್ರದೇಶವನ್ನು ಭದ್ರಪಡಿಸಿದರು. ನಂತರ ಭಯಗೊಂಡಿದ್ದ ಚಿರತೆಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು.

Latest Videos
Follow Us:
Download App:
  • android
  • ios