Asianet Suvarna News Asianet Suvarna News

From the IAF Vault: ಭಾರತದ ಮೊದಲ ಐಎಎಫ್‌ ಚೀಫ್‌ ಆಯ್ಕೆ ಮಾಡಿದ್ದು ಹೇಗೆ?

ಭಾರತೀಯ ವಾಯುಪಡೆಯ ಮೊದಲ ಮುಖ್ಯಸ್ಥರನ್ನು ಹೇಗೆ ನಿರ್ಧರಿಸಲಾಯಿತು ಎಂಬ ಕಥೆಯನ್ನು ಐಎಎಫ್ ಇತಿಹಾಸಕಾರ ಅಂಚಿತ್ ಗುಪ್ತಾ ಇಲ್ಲಿ ವಿವರಿಸಿದ್ದಾರೆ. ಜೂನ್-ಜುಲೈ 1947 ರಲ್ಲಿ 30 ದಿನಗಳ ಅವಧಿಯಲ್ಲಿ ಎಡೆಬಿಡದೆ ನಡೆದ ಸಭೆಗಳು, ಚರ್ಚೆಗಳು ಹಾಗೂ ಮಾತುಕತೆಗಳ ನಂತರ, ಮೇಜರ್‌ ಟ್ವಿಸ್ಟ್‌ ಎನ್ನುವ ರೂಪದಲ್ಲಿ ಐಎಎಫ್‌ನ ಮೊದಲ ಭಾರತೀಯ ಮುಖ್ಯಸ್ಥರಾಗಿದ್ದ ಸುಬ್ರತೋ ಮುಖರ್ಜಿ ಅವರಿಂದ ಸಿಕ್ಕಿತ್ತು.
 

The story of how IAF first chief was picked From the IAF Vault san
Author
First Published Feb 4, 2023, 2:43 PM IST

ಮೂರು ಪ್ರಶ್ನೆಗಳಿಗೆ ಅಲ್ಲಿ ಉತ್ತರ ಬೇಕಿದ್ದವು. ಮೂರೂ ಸೇನಾಪಡೆಗಳಿಗೆ ಒಬ್ಬೊಬ್ಬ ಮುಖ್ಯಸ್ಥ ಅಥವಾ ಎಲ್ಲಕ್ಕೂ ಸೇರಿ ಒಬ್ಬ ಕಮಾಂಡರ್‌ ಇನ್‌ ಚೀಫ್‌? ಈ ಹುದ್ದೆಯಲ್ಲಿರುವ ವ್ಯಕ್ತಿಗೆ ಇರುವ ಸೇನಾ ಶ್ರೇಣಿ ಯಾವುದು? ಹಾಗೂ ಆ ಅಧಿಕಾರಿ ಯಾರು?  ಈ ಎಲ್ಲಾ ಪ್ರಶ್ನೆಗಳಿಗೆ ಏಕಕಾಲದಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಲಾಗುತ್ತಿತ್ತು. ಭಾರತದ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಒಸಿ-ಇನ್-ಸಿ) ಆಗಿದ್ದ ಏರ್‌ ಮಾರ್ಷಲ್‌  ಹಗ್ ವಾಲ್ಮ್ಸ್ಲೆ ಇದೇ ವಿಚಾರವನ್ನು ಮುಂದಿಟ್ಟಿದ್ದರು.

1947ರ ಜುಲೈ 1 ರಂದು ಅವರು ತಮ್ಮ ಶಿಫಾರಸುಗಳನ್ನು ಲಾರ್ಡ್‌ ಲೂಯಿಸ್‌ ಮೌಂಟ್‌ ಬ್ಯಾಟನ್‌ಗೆ ಕಳಿಸಿದ್ದರು. ಆದರೂ, ಈ ಕುರಿತಾಗಿ ಅಂತಿಮ ನಿರ್ಧಾರ ಮಾಡುವ ಅಧಿಕಾರ ನೆಹರು ಹಾಗೂ ಜಿನ್ನಾ ಅವರ ಮೇಲಿತ್ತು. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಪ್ರಮುಖ ಪ್ರಭಾವ ಬೀರಿದ ವ್ಯಕ್ತಿ ಆಗ ಭಾರತೀಯ ಸೇನೆಯ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಕ್ಲೌಡ್ ಆಚಿನ್ಲೆಕ್.

ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮ್‌ಹಿರ್ಸ್ಟ್ ಅವರ ಹೆಸರನ್ನು ಪಾಕಿಸ್ತಾನ್ ಏರ್ ಫೋರ್ಸ್‌ಗೆ ಸೇರಿಸೋದು ಜನರಲ್ ಆಚಿನ್‌ಲೆಕ್ ಅವರ ಒತ್ತಾಯದ ಮೇರೆಗೆ ಇದ್ದಂತೆ ಕಾಣುತ್ತಿತ್ತು. ಅವರು ಶಿಫಾರಸಿನ ಮೇರೆಗೆ ನೇರವಾಗಿ ಮೌಂಟ್‌ಬ್ಯಾಟನ್‌ಗೆ ಲಗತ್ತಿಸಲಾದ ಪತ್ರವನ್ನು ಕೂಡ ಬರೆದಿದ್ದರು. ಆದರೆ, ಲಾರ್ಡ್‌ ಮೌಂಟ್‌ ಬ್ಯಾಟನ್‌ ಈ ವಿಚಾರವಾಗಿ ತಕ್ಷಣವೇ ತಮ್ಮ ಪ್ರತಿಕ್ರಿಯೆ ನೀಡಿದರು. ಥಾಮಸ್ ಎಲ್ಮ್‌ಹಿರ್ಸ್ಟ್ ಅವರನ್ನು ಪರಿಗಣಿಸಬೇಕಾದರೆ, ಭಾರತಕ್ಕೂ ಅವರನ್ನು ಪರಿಗಣನೆ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಇದು ಕೊನೆಯಲ್ಲಿ ಪ್ರಮುಖವಾದ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಅವರು ಅಂದಾಜಿಸಿದ್ದರು.

ಏರ್ ಮಾರ್ಷಲ್ ಹಗ್ ವಾಲ್ಮ್ಸ್ಲೆ ಅವರು ಇನ್ನಷ್ಟು ಚರ್ಚೆ ನಡೆಸಿದರು. 1947ರ ಜುಲೈ 10 ರಂದು ರಾಯಲ್ ಏರ್ ಫೋರ್ಸ್‌ನಿಂದ ಏರ್ ವೈಸ್ ಮಾರ್ಷಲ್ ಶ್ರೇಣಿಯ ಏರ್ ಆಫೀಸರ್ ಕಮಾಂಡಿಂಗ್ ಅಧಿಕಾರಿಯನ್ನು ಹೊಂದಲು ಭಾರತ ಮತ್ತು ಪಾಕಿಸ್ತಾನ ಎರಡೂ ಒಪ್ಪಿಕೊಂಡಿವೆ ಎಂದು ಮೌಂಟ್ ಬ್ಯಾಟನ್ ಅವರಿಗೆ ತಿಳಿಸಿದರು. ಇದು ವಾಲ್ಮ್ಸ್ಲೆ ಅವರಿಗೆ ಅಚ್ಚರಿ ನೀಡಿತ್ತು. ಹಾಗೇನಾದರೂ ಆದಲ್ಲಿ ಸುಬ್ರತೋ ಮುಖರ್ಜಿ ಸಂಪೂರ್ಣವಾಗಿ ಹೊರಬೀಳುತ್ತಾರೆ ಎನ್ನುವುದನ್ನು ಅವರು ಅಂದಾಜಿಸಿದ್ದರು.

ಹಗ್ ವಾಲ್ಮ್ಸ್ಲೆ ಈ ವಿಚಾರ ತಮಗೆ ಮಾತ್ರವಲ್ಲ, ಮುಖರ್ಜಿ ಅವರಿಗೂ ಆಘಾತ ನೀಡಬಹುದು ಎಂದು ಅವರು ಭಾವಿಸಿದ್ದರು. ಮುಖರ್ಜಿ ಅವರು ಭಾರತೀಯ ವಾಯುಪಡೆಯ ಉನ್ನತ ಹುದ್ದೆಗೆ ನೇರವಾಗಿ ಆಯ್ಕೆಯಾಗುವಷ್ಟು ಅನುಭವಿಗಳು ಎನ್ನುವುದನ್ನು ಅವರು ಆಗಲೇ ಭಾವಿಸಿದ್ದರು ಅನ್ನೋದನ್ನು ಇದು ಸೂಚಿಸುತ್ತಿತ್ತು.

ಹೆಚ್ಚಿನ ಆರ್‌ಎಎಫ್‌ ಅಧಿಕಾರಿಗಳು ಹುದ್ದೆಗೆ ಏರಲು ಉತ್ಸುಕರಾಗಿಲ್ಲ ಎಂಬ ಅಂಶವನ್ನು ಒಳಗೊಂಡಂತೆ ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಿ, ವಾಲ್ಮ್ಸ್ಲೆ ಭಾರತಕ್ಕೆ ಅತ್ಯಂತ ಸೂಕ್ತವಾದ ಅಧಿಕಾರಿಯನ್ನು ಏರ್ ವೈಸ್ ಮಾರ್ಷಲ್ ಪೆರ್ರಿ-ಕೀನ್ ರೂಪದಲ್ಲಿ ಕಂಡುಕೊಂಡರು (ಅವರಿಗೆ ನೀಡಲಾದ ಅಧಿಕಾರದಲ್ಲಿ). ಎವಿಎಂ ಪೆರ್ರಿ-ಕೀನ್ ಉತ್ತಮ ಆಯ್ಕೆಯಾಗಿದ್ದು, ಏಕೆಂದರೆ ಅವರು 1935 ರಿಂದ ಭಾರತದಲ್ಲಿ ಸಾಕಷ್ಟು ಸಮಯವನ್ನು ಸಾಕಷ್ಟು ಭಾಗಗಳಲ್ಲಿ ಕಳೆದಿದ್ದರು ಮತ್ತು ಭಾರತದಲ್ಲಿನ ಅಧಿಕಾರಿಗಳ ವಲಯದಲ್ಲೂ ಕೂಡ ಪರಿಚಿತರಾಗಿದ್ದರು.

1947ರ ಜುಲೈ 18 ರಂದು ವಾಲ್ಮ್ಸ್ಲಿಯವರ ಒತ್ತಾಯದ ಮೇರೆಗೆ, ಮೌಂಟ್‌ ಬ್ಯಾಟನ್‌ ಮುಖರ್ಜಿಯವರನ್ನು ಭೇಟಿಯಾದರು ಮತ್ತು ಅವರ ಅಭಿಪ್ರಾಯಗಳನ್ನು ನೋಡಿ ಆಶ್ಚರ್ಯಚಕಿತರಾದರು. ಮುಖರ್ಜಿ ಅವರು ತಮ್ಮ ಸೇವಾ ಹಿರಿತನವನ್ನು ಬದಿಗಿಟ್ಟಿದ್ದಲ್ಲದೆ, ಹಿರಿಯ ಆರ್‌ಎಎಫ್‌ ಅಧಿಕಾರಿಯನ್ನು ಮನಸಾರೆ ಬೆಂಬಲಿಸಿದ್ದರು,.  ಅವರು ಸೇನೆಯೊಂದಿಗೆ ಸಮಾನತೆಯ ಬಗ್ಗೆ ಕಾಳಜಿ ವಹಿಸಿದ್ದರು ಮತ್ತು ಎರಡು-ಮೂರು ವರ್ಷಗಳಲ್ಲಿ ಮುಖ್ಯಸ್ಥರಾಗುವ ನಿರೀಕ್ಷೆ ಹೊಂದಿದ್ದರು.   ಮುಖರ್ಜಿ ಅವರು ಮೌಂಟ್‌ಬ್ಯಾಟನ್, ವಾಲ್ಮ್ಸ್ಲೆ ಮತ್ತು ಪೆರ್ರಿ-ಕೀನ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು ಮತ್ತು 1947ರ ಜುಲೈ 22 ರಂದು ಪೆರ್ರಿ-ಕೀನ್ ಅವರು ಐಎಎಫ್‌ ಮುಖ್ಯಸ್ಥರಾಗುವ ನಿರೀಕ್ಷೆ ಇದ್ದ ನಡುವೆಯೇ ಇಡೀ ಪ್ರಕರಣಕ್ಕೆ ಒಂದು ಟ್ವಿಸ್ಟ್‌ ಸಿಕ್ಕಿತ್ತು.

ಜುಲೈ 21 ರಂದು, ನೆಹರು ಮೌಂಟ್‌ಬ್ಯಾಟನ್‌ಗೆ ಪತ್ರ ಬರೆದು ಏರ್ ಮಾರ್ಷಲ್ ಥಾಮಸ್ ಎಲ್ಮ್‌ಹಿರ್ಸ್ಟ್ ಅವರನ್ನು ಐಎಎಫ್‌ಗೆ ಪರಿಗಣಿಸುವಂತೆ ಕೇಳಿಕೊಂಡರು. ನೆಹರೂ ಅಲ್ಲದೆ, ಮೌಂಟ್‌ ಬ್ಯಾಟನ್‌ ಸರ್ಕಾರದ ರಕ್ಷಣಾ ಸಚಿವರೊಂದಿಗೆ ಕ್ಲೌಡ್‌ ಆಚಿನ್ಲೆಕ್ ಕೂಡ ಇದೇ ಅಭಿಪ್ರಾಯ ಹೊಂದಿದ್ದರೆಂದು ಕಾಣುತ್ತದೆ.

1947ರ ಜುಲೈ 123 ರಂದು, ಮೌಂಟ್ ಬ್ಯಾಟನ್ ನೆಹರು ಮತ್ತು ಎಲ್ಮ್‌ಹಿರ್ಸ್ಟ್ ನಡುವೆ ಸಭೆಯನ್ನು ಏರ್ಪಡಿಸಿದರು. ಅವರ ಹುದ್ದೆಯ ಬಗ್ಗೆ ಸ್ವತಃ ನೆಹರು ಅವರೇ ಮನವರಿಕೆ ಮಾಡಲಿ ಎನ್ನುವುದು ಉದ್ದೇಶವಾಗಿತ್ತು. ಚೀಫ್‌ ಎನ್ನುವುದು ಏರ್‌ವೈಸ್‌ ಮಾರ್ಷಲ್‌ ಬದಲಿಗೆ ಐಎಎಫ್‌ಗೆ ಏರ್‌ ಮಾರ್ಷಲ್‌ ಆಗಿರಲಿದೆ ಎನ್ನುವುದನ್ನೂ ಅವರಿಗೆ ತಿಳಿಸಲಾಯಿತು. 

'ನಮ್ಮ ಪ್ಯಾಕ್‌ ಕಂಪ್ಲೀಟ್‌' ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ಎಲ್ಲಾ 36 ರಫೇಲ್‌ ಯುದ್ಧವಿಮಾನ!

ಜುಲೈ 26ರ ವೇಳೆಗೆ ನೆಹರು ಎಲ್ಮ್‌ಹಿರ್ಸ್ಟ್ ಅವರನ್ನು ಒಪ್ಪಿಸಲು ಯಶಸ್ವಿಯಾಗಿದ್ದರು. ಅವರೂ ಕೂಡ ಚೀಫ್‌ ಆಗಲು ಸಿದ್ಧರಾಗಿದ್ದರು. ಮುಖರ್ಜಿಯವರು ಸೇನೆಗೆ ಸರಿಸಮನಾಗಿ ಏರ್ ಮಾರ್ಷಲ್ ಆಗಬೇಕೆಂಬ ಅವರ ಆಸೆ ಈಡೇರಿದರೂ ಆಗ ಅವರಿಗೆ ಹುದ್ದೆಯ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಅವರು ಸ್ವತಃ ಏರ್ ಮಾರ್ಷಲ್ ಆಗಲು ಏಳು ವರ್ಷ ಕಾಯಬೇಕಾಗಿತ್ತು.

ಪಾಕ್‌ಗೆ ಭಾರತದಿಂದ ಆಕಸ್ಮಿಕವಾಗಿ ಮಿಸೈಲ್‌ ದಾಳಿ: 3 ವಾಯುಪಡೆ ಅಧಿಕಾರಿಗಳ ವಜಾ

ಇನ್ನೊಂದೆಡೆ, ಮೌಂಟ್‌ಬ್ಯಾಟನ್ ಜಿನ್ನಾ ಅವರ ಪಾಕಿಸ್ತಾನಕ್ಕೆ ಅತ್ಯಂತ ಸಮರ್ಥ ಮತ್ತು ಇಚ್ಛೆಯುಳ್ಳ ಎವಿಎಂ ಪೆರ್ರಿ-ಕೀನ್ ಪಿಎಎಫ್‌ ಮುಖ್ಯಸ್ಥರಾಗಿ ಇರಲಿದ್ದಾರೆ ಎಂದು ನಿರ್ಧರಿಸಿದ್ದರು. 1947ರ ಜುಲೈ 27 ರಂದು, ಐಎಎಫ್‌ ತನ್ನ ಮೊದಲ ಮುಖ್ಯಸ್ಥನಾಗಿ ಏರ್ ಮಾರ್ಷಲ್ ಎಲ್ಮ್‌ಹಿರ್ಸ್ಟ್ ಮತ್ತು ಏರ್ ವೈಸ್ ಮಾರ್ಷಲ್ ಪೆರ್ರಿ-ಕೀನ್ ಪಿಎಎಫ್‌ನ ನ ಮೊದಲ ಮುಖ್ಯಸ್ಥರಾಗಿ ಇರಲಿದ್ದಾರೆ ಎಂದು ಹೇಳಿದ್ದರು.
 

Follow Us:
Download App:
  • android
  • ios