ಪಾಕ್‌ಗೆ ಭಾರತದಿಂದ ಆಕಸ್ಮಿಕವಾಗಿ ಮಿಸೈಲ್ ದಾಳಿ: 3 ವಾಯುಪಡೆ ಅಧಿಕಾರಿಗಳ ವಜಾ
ರಷ್ಯಾ - ಉಕ್ರೇನ್ ಯುದ್ದದ ಬೆನ್ನಲ್ಲೇ ಭಾರತದಿಂದ ಪಾಕ್‌ನಲ್ಲಿ ಮಿಸೈಲ್ ದಾಳಿಯಾಗಿದ್ದ ಕಾರಣ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ, ಆಕಸ್ಮಿಕವಾಗಿ ನಡೆದ ಈ ದಾಳಿಗೆ ಭಾರತ ಈಗ ಮೂವರು ವಾಯುಪಡೆ ಅಧಿಕಾರಿಗಳನ್ನು ವಜಾ ಮಾಡಿದೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಪಾಕಿಸ್ತಾನಕ್ಕೆ ಆಕಸ್ಮಿಕವಾಗಿ ಉಡಾಯಿಸಿದ ಕಾರಣಕ್ಕಾಗಿ ಮೂವರು ಭಾರತೀಯ ವಾಯುಪಡೆ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ. "ಬ್ರಹ್ಮೋಸ್ ಕ್ಷಿಪಣಿಯನ್ನು ಆಕಸ್ಮಿಕವಾಗಿ 09 ಮಾರ್ಚ್ 2022 ರಂದು ಉಡಾಯಿಸಲಾಗಿದೆ. ಘಟನೆಯ ಜವಾಬ್ದಾರಿಯನ್ನು ನಿಗದಿಪಡಿಸುವುದು ಸೇರಿದಂತೆ ಪ್ರಕರಣದ ಸತ್ಯಗಳನ್ನು ತಿಳಿದುಕೊಳ್ಳಲು ವಿಚಾರಣಾ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು. ಈ ನ್ಯಾಯಾಲಯವು ಮೂವರು ವಾಯುಪಡೆಯ ಅಧಿಕಾರಿಗಳಿಂದ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (Standard Operating Procedures) (SOP) ನಿಂದ ವಿಚಲನ ಉಂಟಾಗಿರುವುದರಿಂದ ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾವಣೆಗೆ ಕಾರಣರಾಗಿದ್ದಾರೆ’’ ಎಂದು ಭಾರತೀಯ ವಾಯುಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಈ ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಘಟನೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಅಲ್ಲದೆ, ಅವರ ಸೇವೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ವಜಾಗೊಳಿಸಿದೆ. 23 ಆಗಸ್ಟ್ 22 ರಂದು ಅಧಿಕಾರಿಗಳಿಗೆ ವಜಾಗೊಳಿಸುವ ಆದೇಶಗಳನ್ನು ನೀಡಲಾಗಿದೆ" ಎಂದೂ ವಾಯುಪಡೆಯ ಹೇಳಿಕೆಯಲ್ಲಿ ಸೇರಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಪ್ರದೇಶಕ್ಕೆ ಭಾರತದ ಕಡೆಯಿಂದ ಆಕಸ್ಮಿಕವಾಗಿ ಮಿಸೈಲ್ ದಾಳಿ ಮಾಡಲಾಗಿತ್ತು. ಈ ಘಟನೆಗೆ ರಕ್ಷಣಾ ಸಚಿವಾಲಯವು "ತೀವ್ರ ವಿಷಾದನೀಯ" ಎಂದು ಕರೆದಿತ್ತು ಮತ್ತು "ತಾಂತ್ರಿಕ ಅಸಮರ್ಪಕ" ವನ್ನು ದೂಷಿಸಿತ್ತು.
Indian missile ಪಾಕ್ ಭೂಭಾಗ ಧ್ವಂಸಗೊಳಿಸಿದ ಭಾರತದ ಕ್ಷಿಪಣಿ, ಘಟನೆಗೆ ವಿಷಾದ ವ್ಯಕ್ತಪಡಿಸಿ ತನಿಖೆಗೆ ಆದೇಶ!
ಈ ಘಟನೆ ನಡೆದ ನಂತರ ಪಾಕಿಸ್ತಾನ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಪಾಕಿಸ್ತಾನದ ಪ್ರಕಾರ, ಕ್ಷಿಪಣಿಯು ತನ್ನ ವಾಯುಪ್ರದೇಶದೊಳಗೆ 100 ಕಿ.ಮೀ.ಗೂ ಹೆಚ್ಚು ದೂರ, 40,000 ಅಡಿ ಎತ್ತರದಲ್ಲಿ ಮತ್ತು ಅದು ಇಳಿಯುವ ಮೊದಲು ಶಬ್ದದ 3 ಪಟ್ಟು ವೇಗದಲ್ಲಿ ಹಾರಿತ್ತು. ಆದರೆ, ಕ್ಷಿಪಣಿಯಲ್ಲಿ ಯಾವುದೇ ಸಿಡಿತಲೆ ಇರಲಿಲ್ಲ, ಆದ್ದರಿಂದ ಅದು ಸ್ಫೋಟಿಸಲಿಲ್ಲ ಎಂದೂ ಹೇಳಿಕೊಂಡಿತ್ತು. ಅಲ್ಲದೆ, ತನ್ನ ವಾಯುಪ್ರದೇಶದ ಅಪ್ರಚೋದಿತ ಉಲ್ಲಂಘನೆ ಎಂದು ಪಾಕಿಸ್ತಾನ ಈ ಘಟನೆಯನ್ನು ಕರೆದಿತ್ತು. ಹಾಗೂ, ಈ ಘಟನೆಯನ್ನು ಪ್ರತಿಭಟಿಸಲು ಇಸ್ಲಾಮಾಬಾದ್‌ನಲ್ಲಿ ಭಾರತದ ಚಾರ್ಜ್ ಡಿ'ಅಫೇರ್‌ಗಳಿಗೆ ಸಮನ್ಸ್ ನೀಡಿ ಕರೆಸಲಾಗಿತ್ತು ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿತ್ತು. ಈ ಘಟನೆಯ ಬಗ್ಗೆ ತನಿಖೆಗೆ ಪಾಕಿಸ್ತಾನವು ಸಹ ಕರೆ ನೀಡಿತ್ತು. ಹಾಗೂ, ಇದು ಪ್ರಯಾಣಿಕರ ವಿಮಾನಗಳು ಮತ್ತು ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಹೇಳಿತ್ತು.
"ಇಂತಹ ನಿರ್ಲಕ್ಷ್ಯದ ಅಹಿತಕರ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳು ಮರುಕಳಿಸುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಸಹ ಪಾಕಿಸ್ತಾನವು ಭಾರತಕ್ಕೆ ಎಚ್ಚರಿಕೆ ನೀಡಿತ್ತು.
Army Chopper Crash ಇಂಡೋ-ಪಾಕ್ ಗಡಿ ಬಳಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ, ಪೈಲೆಟ್ ಸಾವು!
ಭಾರತದ ಕ್ಷಿಣಿ ದಾಳಿಯಿಂದ ಅದೃಷ್ಠವಶಾತ್ ಪಾಕಿಸ್ತಾನದಲ್ಲಿ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಇನ್ನು ಘಟನಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇದು ಉದ್ದೇಶಪೂರ್ವಕವಾಗಿ ನಡೆದಿಲ್ಲ. ಪರಿಶೀಲನೆ ಹಾಗೂ ತಾಂತ್ರಿಕ ನಿರ್ವಹಣೆ ವೇಳೆ ಅಚಾನಕ್ ಆಗಿ ಸಂಭವಿಸಿದೆ. ಆದರೆ ಘಟನೆ ಕುರಿತು ಉನ್ನತ ಮಟ್ಟದ ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಆದರೆ, ಪಾಕ್ ವಾಯುಸೇನೆ ಮಾತ್ರ ಭಾರತ ಗಡಿ ನಿಯಮ ಉಲ್ಲಂಘಿಸಿದೆ. ಪಾಕಿಸ್ತಾನದತ್ತ ಮಿಸೈಲ್ ದಾಳಿ ನಡೆಸಿದೆ ಎಂದು ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಗಡಿಯಿಂದ 124 ಕಿಲೋಮೀಟರ್ ದೂರದಲ್ಲಿನ ಮಿಯಾ ಚಾನು ಪ್ರದೇಶವನ್ನು ಧ್ವಂಸಗೊಳಿಸಿದೆ. ಭಾರತದ ಕ್ಷಿಪಣಿ ಪಾಕಿಸ್ತಾನ ವಾಯು ಪ್ರದೇಶದ ಮೂಲಕ ಸಾಗಿ ಬಂದಿದೆ. ಈ ಮೂಲಕ ಗಡಿಯಲ್ಲಿ ಆತಂಕ ವಾತಾವರಣವನ್ನು ಭಾರತ ನಿರ್ಮಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಪಾಕಿಸ್ತಾನ ವಾಯಸೇನೆ ಆಕ್ರೋಶದ ಬೆನ್ನಲ್ಲೇ ಭಾರತ ರಕ್ಷಣಾ ಸಚಿವಾಲಯ ಈ ಪ್ರಕಟಣೆಯನ್ನು ಹೊರಡಿಸಿತ್ತು.