Asianet Suvarna News Asianet Suvarna News

'ನಮ್ಮ ಪ್ಯಾಕ್‌ ಕಂಪ್ಲೀಟ್‌' ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ಎಲ್ಲಾ 36 ರಫೇಲ್‌ ಯುದ್ಧವಿಮಾನ!

ಭಾರತದ ಯುದ್ಧ ಅಗತ್ಯದ ಭಾಗವಾಗಿ ಫ್ರಾನ್ಸ್‌ನಿಂದ ಸಂಪೂರ್ಣ ಶಸ್ತ್ರಸಜ್ಜಿತವಾದ 36 ರಫೇಲ್‌ ಯುದ್ಧವಿಮಾನಗಳನ್ನು ಭಾರತ ಖರೀದಿ ಮಾಡಿತ್ತು. ಚೀನಾದ ಜೊತೆಗಿನ ಚಕಮಕಿ ಸುದ್ದಿಯಾಗಿರುವ ನಡುವೆ, ಫ್ರಾನ್ಸ್‌ನಿಂದ ಈ 36 ಜೆಟ್‌ಗಳ ಪೈಕಿ ಕೊನೆಯ ಬ್ಯಾಚ್‌ ಗುರುವಾರ ಭಾರತಕ್ಕೆ ಆಗಮಿಸಿದೆ.
 

Pack is complete Tweets Indian Air Force on getting last of 36 Rafale jets from France san
Author
First Published Dec 15, 2022, 4:38 PM IST

ನವದೆಹಲಿ (ಡಿ.15): ಫ್ರಾನ್ಸ್‌ನಿಂದ ಭಾರತ ಖರೀದಿ ಮಾಡಿದ್ದ ಸಂಪೂರ್ಣ ಸಜ್ಜಿತವಾದ 36 ರಫೇಲ್‌ ಯುದ್ಧವಿಮಾನದ ಕೊನೆಯ ಬ್ಯಾಚ್‌ಅನ್ನು ಭಾರತ ಗುರುವಾರ ಸ್ವೀಕರಿಸಿದೆ. ಈ ಕುರಿತಾಗಿ ಟ್ವಿಟರ್‌ನಲ್ಲಿ ಭಾರತೀಯ ವಾಯುಸೇನೆ ಅಪ್‌ಡೇಟ್‌ ಹಂಚಿಕೊಂಡಿದೆ. ಫೀಟ್‌ ಡ್ರೈ! ನಮ್ಮ ಪ್ಯಾಕ್‌ ಈಗ ಕಂಪ್ಲೀಟ್‌!. ಎಂದು ಬರೆದುಕೊಂಡಿದೆ. 36 ರಫೇಲ್‌ ಯುದ್ಧ ವಿಮಾನಗಳಲ್ಲಿ ಕೊನೆಯ ಯುದ್ಧ ವಿಮಾನಗಳು, ಯುಎಇ ವಾಯುಪಡೆಯ ಟ್ಯಾಂಕರ್‌ನಿಂದ ತ್ವರಿತಮಾರ್ಗದಲ್ಲಿ ಸಿಪ್‌ ಮಾಡಿದ ಬಳಿಕ ಭಾರತಕ್ಕೆ ಬಂದಿಳಿದಿದೆ. ಎಂದು ಐಎಎಫ್‌ ಯುದ್ಧವಿಮಾನದ ಫೈಲ್‌ ಚಿತ್ರದೊಂದಿಗೆ ಟ್ವೀಟ್‌ ಮಾಡಿದೆ. 2020ರ ಜುಲೈನಲ್ಲಿ ಅಂಬಾಲ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಮೊದಲ ಬ್ಯಾಚ್‌ನ ಐದು ರಫೇಲ್‌ ಜೆಟ್‌ಗಳು ಭಾರತಕ್ಕೆ ಆಗಮಿಸಿದ್ದವು. ಇದು ಗೋಲ್ಡನ್‌ ಆರೋಸ್‌ ಎಂದು ಮರು ನಾಮಕರಣ ಮಾಡಲಾದ 17 ಸ್ಕ್ವಾಡ್ರನ್‌ನ ಭಾಗವಾಗಿದ್ದವು ಎಂದು ಕೇಂದ್ರ ಸರ್ಕಾರ ಆ ವೇಳೆ ನೀಡಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು. ಆಗಸ್ಟ್‌ ತಿಂಗಳಿನಲ್ಲಿಯೇ ಈ ಐದೂ ಯುದ್ಧವಿಮಾನಗಳನ್ನು ಐಎಎಫ್‌, ಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿತ್ತು.


ರಫೇಲ್‌ ಒಪ್ಪಂದವು ಭಾರತದ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಗಮನಾರ್ಹ ವಿಚಾರ ಎನಿಸಿದೆ. ಇವುಗಳನ್ನು ನಮ್ಮ ಸೇನೆಗೆ ಸೇರ್ಪಡೆಗೊಳಿಸಿದ್ದು, ವಿಶ್ವಕ್ಕೆ ಖಂಡಿತಾ ಬಲಿಷ್ಠ ಸಂದೇಶ ರವಾನೆ ಮಾಡಲಿದೆ. ಅದರಲ್ಲೂ ಪ್ಮರುಖವಾಗಿ ಭಾರತದದ ಸಾರ್ಔಭೌಮತೆಗೆ ಸವಾಲೊಡ್ಡುವ ರಾಷ್ಟ್ರಗಳಿಗ ಖಂಡಿತ ಇದು ಸ್ಪಷ್ಟ ಸಂದೇಶ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆ ವೇಳೆ ಹೇಳಿದ್ದರು. ಬರೋಬ್ಬರಿ 900 ಬಿಲಿಯನ್‌ ಡಾಲರ್‌ ಮೌಲ್ಯದ ರಫೇಲ್‌ ಒಪ್ಪಂದ ಇದಾಗಿದೆ. ಐಎಎಫ್‌ಎ ಹೊಸ ಜೆಟ್‌ಗಳನ್ನು ಖರೀದಿ ಮಾಡುವ ನಿಟ್ಟನಲ್ಲಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಜೊತೆ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಕಳೆದ ಫೆಬ್ರವರಿಯಲ್ಲಿ ಭಾರತ ಕೊನೆಯ ನಾಲ್ಕು ಯುದ್ಧ ವಿಮಾನಗಳ ಬ್ಯಾಚ್‌ನಲ್ಲಿ ಮೂರನ್ನು ಸ್ವೀಕರಿಸಿತ್ತು. ಭಾರತದ ನಿರ್ದಿಷ್ಟ ಅಗತ್ಯತೆಗಳೊಂದಿಗೆ ಸಂಪೂರ್ಣವಾಗಿ ಜೆಟ್‌ಗಳು ಸಜ್ಜಾಗಿವೆ. ಮಾರ್ಸೆಲೆಯ ವಾಯುವ್ಯದಲ್ಲಿರುವ ರಫೇಲ್ ತಯಾರಕ ಡಸಾಲ್ಟ್ ಏವಿಯೇಷನ್‌ನ ಇಸ್ಟ್ರೆಸ್-ಲೆ ಟ್ಯೂಬ್ ಏರ್ ಬೇಸ್‌ನಲ್ಲಿ ಫ್ರಾನ್ಸ್ ಇವುಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

Rafale For Navy: ಅಣ್ವಸ್ತ್ರ ಸಾಮರ್ಥ್ಯದ ರಫೇಲ್-ಎಂ ಯಶಸ್ವಿ ಪರೀಕ್ಷೆ!

ಜೆಟ್‌ಗಳಲ್ಲಿನ ಭಾರತದ ಅಗತ್ಯಕ್ಕೆ ಅನುಗುಣವಾದ ಬದಲಾವಣೆಯಲ್ಲಿ ಹೆಲ್ಮೆಟ್-ಮೌಂಟೆಡ್ ಸೈಟ್‌, ರಾಡಾರ್ ವಾರ್ನಿಂಗ್‌ ರಿಸೀವರ್‌ಗಳು, 10 ಗಂಟೆಗಳ ಕಾಲ ಸಾಕಷ್ಟು ಸಂಗ್ರಹಣೆಯೊಂದಿಗೆ ಫ್ಲೈಟ್ ಡೇಟಾ ರೆಕಾರ್ಡರ್‌ಗಳು, ಇನ್‌ಫ್ರಾ-ರೆಡ್ ಸರ್ಚ್ ಮತ್ತು ಟ್ರ್ಯಾಕ್ ಸಿಸ್ಟಮ್‌ಗಳು ಮತ್ತು ಒಳಬರುವ ಕ್ಷಿಪಣಿಗಳನ್ನು ಗುರುತಿಸುವ ಡಿಕೋಯ್‌ಗಳು ಮತ್ತು ಕ್ಷಿಪಣಿ ವಿಧಾನ ಎಚ್ಚರಿಕೆ ವ್ಯವಸ್ಥೆಗಳು ಸೇರಿವೆ.  ಪ್ರತಿ ಜೆಟ್‌ನ ಬೆಲೆ ಸುಮಾರು ₹670 ಕೋಟಿ ಎಂದು ಅಂದಾಜಿಸಲಾಗಿದೆ.

Chinese J 10C Jets: ರಫೇಲ್‌ಗೆ ಸಡ್ಡು, ಚೀನಾ ನಿರ್ಮಿತ ಜೆ-10ಸಿ ವಿಮಾನ ಖರೀದಿಸಿದ ಪಾಕ್‌

ಕಳೆದ ತಿಂಗಳು, ಜೋಧ್‌ಪುರದಲ್ಲಿ ನಡೆದ 'ಗರುಡ-7' ದ್ವಿಪಕ್ಷೀಯ ಸಮರಾಭ್ಯಾಸದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಮಾರ್ಷಲ್ ವಿಆರ್ ಚೌಧರಿ ಅವರು ಐಎಎಫ್‌ನ ರಫೇಲ್ ಫೈಟರ್ ಜೆಟ್ ಹಾರಾಟ ನಡೆಸಿದ್ದರು.  ಇನ್ನೊಂದೆಡೆ ಫ್ರೆಂಚ್ ಏರ್ ಚೀಫ್ ಜನರಲ್ ಸ್ಟೀಫನ್ ಮಿಲ್ಲೆ ಅವರು ಭಾರತೀಯ ರಷ್ಯನ್ ಮೂಲದ ಸುಖೋಯ್ -30 ಯುದ್ಧ ವಿಮಾನದ ಹಾರಾಟ ಮಾಡಿದ್ದರು.'ಖಂಡಿತವಾಗಿ, ತಕ್ಷಣದ ಅವಶ್ಯಕತೆಗಳನ್ನು ಪೂರೈಸಲು ನಮಗೆ 4.5 ಭವಿಷ್ಯದ ಪೀಳಿಗೆಯ ವಿಮಾನಗಳು, ಈ ವಿಮಾನಗಳ (ರಫೇಲ್) ಐದರಿಂದ ಆರು ಸ್ಕ್ವಾಡ್ರನ್‌ಗಳ ಅಗತ್ಯವಿದೆ' ಎಂದು ಏರ್ ಚೀಫ್ ಮಾರ್ಷಲ್ ವಿಆರ್‌ ಚೌಧರಿ ಹೇಳಿದ್ದರು.

Follow Us:
Download App:
  • android
  • ios