Asianet Suvarna News Asianet Suvarna News

ಮತ್ತೆ ಭೂಮಿಗೆ ಬಂದ ಚಂದ್ರಯಾನ-3 ರಾಕೆಟ್‌: ಪೆಸಿಫಿಕ್‌ ಸಾಗರಕ್ಕೆ ಬಿದ್ದ ಅವಶೇಷ

ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ಎಲ್‌ಎಂವಿ3 ಎಂ4 ರಾಕೆಟ್‌ನ ಅವಶೇಷಗಳು ಬುಧವಾರ ಮಧ್ಯಾಹ್ನ ಅನಿಯಂತ್ರಿತವಾಗಿ ಭೂಮಿಗೆ ಬಿದ್ದಿವೆ ಎಂದು ಇಸ್ರೋ ಹೇಳಿದೆ.

The remains of the LMV3 M4 rocket which successfully launched the Chandrayaan3 into orbit, fell to earth on Wednesday afternoon ISRO said akb
Author
First Published Nov 16, 2023, 7:05 AM IST

ಬೆಂಗಳೂರು: ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ಎಲ್‌ಎಂವಿ3 ಎಂ4 ರಾಕೆಟ್‌ನ ಅವಶೇಷಗಳು ಬುಧವಾರ ಮಧ್ಯಾಹ್ನ ಅನಿಯಂತ್ರಿತವಾಗಿ ಭೂಮಿಗೆ ಬಿದ್ದಿವೆ ಎಂದು ಇಸ್ರೋ ಹೇಳಿದೆ.

ಜು.14ರಂದು ಚಂದ್ರಯಾನ-3 ನೌಕೆಯನ್ನು ಈ ರಾಕೆಟ್‌ ಕಕ್ಷೆಗೆ ಸೇರಿಸಿತ್ತು. ಇದಾದ 124 ದಿನಗಳ ಬಳಿಕ ರಾಕೆಟ್‌ನ ಅವಶೇಷಗಳು ಭೂಮಿ ತಲುಪಿದ್ದು, ಇವು ಭಾರತದ ಮೇಲೆ ಸಾಗದೆ ಉತ್ತರ ಪೆಸಿಫಿಕ್‌ ಸಾಗರದಲ್ಲಿ ಬಿದ್ದಿವೆ. ಅಲ್ಲದೇ ಬಾಹ್ಯಾಕಾಶದಲ್ಲಿ ತ್ಯಾಜ್ಯಗಳನ್ನು ಕಡಿಮೆ ಮಾಡುವ ಹಾಗೂ ಆಕಸ್ಮಿಕ ಸ್ಫೋಟಗಳನ್ನು ತಗ್ಗಿಸುವ ದೃಷ್ಟಿಯಿಂದ ಈ ರಾಕೆಟ್‌ನಲ್ಲಿರುವ ಎಲ್ಲಾ ಇಂಧನ ಮತ್ತು ಶಕ್ತಿಯ ಮೂಲಗಳನ್ನು ತೆಗೆದುಹಾಕಲಾಗಿತ್ತು. ಇದು ಬಾಹ್ಯಾಕಾಶದಲ್ಲೂ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಿ ನಡೆದುಕೊಳ್ಳುವ ಭಾರತದ ಬದ್ದತೆಗೆ ಇದು ಸಾಕ್ಷಿಯಾಗಿದೆ ಎಂದು ಇಸ್ರೋ ಹೇಳಿದೆ.

ಭಾರತದಿಂದ ಬರುವ ಚಂದ್ರಯಾನ-3 ಮಾಹಿತಿಗಾಗಿ ರಷ್ಯಾ, ಅಮೆರಿಕ ಕಾಯುತ್ತಿದೆ: ಜೀತೇಂದ್ರ ಸಿಂಗ್‌!

ಜು.14ರಂದು ಶ್ರೀಹರಿಕೋಟಾದಿಂದ (Sriharikota) ಚಂದ್ರಯಾನ ನೌಕೆಯನ್ನು ಹೊತ್ತ ಎಲ್‌ಎಂವಿ ರಾಕೆಟ್‌ (LMV Rocket)ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ಇದಾದ ಬಳಿಕ ನೌಕೆಯನ್ನು ಅಂತಿಮ ಹಂತಕ್ಕೆ ಕೊಂಡೊಯ್ದಿದ್ದ ರಾಕೆಟ್‌ನ ಮುಂಭಾಗ ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದೀಗ ಯಾವುದೇ ನಿಯಂತ್ರಣವಿಲ್ಲದೇ ಇದು ಭೂಮಿಗೆ ಬಿದ್ದಿದೆ.

ತಾವು ಕಲಿತ ವಿದ್ಯಾಸಂಸ್ಥೆಗೆ ತಲಾ 25 ಲಕ್ಷ ರೂ ದಾನ ಮಾಡಿದ ಚಂದ್ರಯಾನ 3 ವಿಜ್ಞಾನಿಗಳು!

Follow Us:
Download App:
  • android
  • ios