ಜಾಗತಿಕ ಸ್ಥಿರತೆಗೆ ಭಾರತ ಸೌದಿ ಮೈತ್ರಿ ಮಹತ್ವದ್ದು: ಮೋದಿ
ಜಾಗತಿಕ ಸ್ಥಿರತೆಗೆ ಭಾರತ ಮತ್ತು ಸೌದಿ ಅರೇಬಿಯಾದ ಪಾಲುದಾರಿಕೆ ಅತ್ಯಂತ ಮಹತ್ವದ್ದು. ಭಾರತದ ಪಾಲಿಗೆ ಸೌದಿ ಅರೇಬಿಯಾ ಅತ್ಯಂತ ಆಪ್ತ ಮತ್ತು ವ್ಯೂಹಾತ್ಮಕ ಪಾಲುದಾರ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ನವದೆಹಲಿ: ಜಾಗತಿಕ ಸ್ಥಿರತೆಗೆ ಭಾರತ ಮತ್ತು ಸೌದಿ ಅರೇಬಿಯಾದ ಪಾಲುದಾರಿಕೆ ಅತ್ಯಂತ ಮಹತ್ವದ್ದು. ಭಾರತದ ಪಾಲಿಗೆ ಸೌದಿ ಅರೇಬಿಯಾ ಅತ್ಯಂತ ಆಪ್ತ ಮತ್ತು ವ್ಯೂಹಾತ್ಮಕ ಪಾಲುದಾರ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಜಿ20 ಶೃಂಗ ಸಭೆಯಲ್ಲಿ ಭಾಗಿಯಾಗಲು ಶನಿವಾರ ಭಾರತಕ್ಕೆ ಆಗಮಿಸಿದ್ದ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್, ಬಳಿಕ ಭಾರತಕ್ಕೆ ತಮ್ಮ ಅಧಿಕೃತ ದ್ವಿಪಕ್ಷೀಯ ಪ್ರವಾಸ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಅವರಿಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಬಳಿಕ ಇಲ್ಲಿನ ಹೈದ್ರಾಬಾದ್ ಹೌಸ್‌ನಲ್ಲಿ (Hyderabad House) ಪ್ರಧಾನಿ ಮೋದಿ ಮತ್ತು ದೊರೆ ಸಲ್ಮಾನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಉಭಯ ನಾಯಕರು ವ್ಯಾಪಾರ, ಆರ್ಥಿಕತೆ, ರಕ್ಷಣೆ ಮತ್ತು ಸಾಂಸ್ಕೃತಿಕ ಪಾಲುದಾರಿಕೆ (cultural partnership) ಕುರಿತು ಚರ್ಚೆ ನಡೆಸಿದರು. ಬದಲಾದ ಸಮಯಕ್ಕೆ ತಕ್ಕಂತೆ ನಾವು ನಮ್ಮ ಸಂಬಂಧಕ್ಕೆ ಹೊಸ ಆಯಾಮವನ್ನು ನೀಡುತ್ತಿದ್ದೇವೆ. ನಮ್ಮ ಆಪ್ತ ಸಹಭಾಗಿತ್ವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಕೆಲವೊಂದು ಯೋಜನೆಗಳನ್ನು ಗುರುತಿಸಿದ್ದೇವೆ ಎಂದು ಮೋದಿ ಹೇಳಿದರು.
2019ರಲ್ಲಿ ಭಾರತ ಮತ್ತು ಸೌದಿ ಅರೇಬಿಯಾ (Saudi Arabia) ರಿಯಾದ್‌ನಲ್ಲಿ (Riyadh) ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿ ಸಭೆಯಲ್ಲಿ ಉಭಯ ನಾಯಕರು ಪಾಲ್ಗೊಂಡು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.
9/11 ನ್ಯೂಯಾರ್ಕ್ ಭೀಕರ ಉಗ್ರ ದಾಳಿಗೆ 22 ವರ್ಷ
ನ್ಯೂಯಾರ್ಕ್: ಸುಮಾರು 3,000 ಜನರನ್ನು ಬಲಿಪಡೆದಿದ್ದ 2001ರಲ್ಲಿ ಅಮೆರಿಕದಲ್ಲಿ ನಡೆದ 9/11 ರ ಭೀಕರ (2001 9/11 terrorist attack) ದಾಳಿಯ 22ನೇ ವರ್ಷಾಚರಣೆಯನ್ನು ಹಲವೆಡೆ ನಡೆಸಲಾಯಿತು. ಇನ್ನು ಭಾರತ ಮತ್ತು ವಿಯೆಟ್ನಾಂ ಪ್ರವಾಸ ಮುಗಿಸಿ ವಾಷಿಂಗ್ಟನ್‌ಗೆ ತೆರಳುತ್ತಿದ್ದ ಅಧ್ಯಕ್ಷ ಜೋ ಬೈಡೆನ್ (President Joe Biden) ಅವರು ಆ್ಯಂಕೊರೇಜ್‌ನಲ್ಲಿರುವ ಸೇನಾನೆಲೆಯಲ್ಲಿನ ವರ್ಷಾಚರಣೆಯಲ್ಲಿ ಪಾಲ್ಗೊಂಡರು. ಇನ್ನು ನ್ಯೂಯಾರ್ಕ್, ಪೆನ್ಸಿಲ್ವೇನಿಯಾ (Pennsylvania)ಮತ್ತು ಅಲಾಸ್ಕಾ ಸೇರಿದಂತೆ ಅನೇಕ ಕಡೆ ಜನರು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸ್ಮರಿಸಿದರು. 2001ರ ಸೆ.11 ರಂದು ಅಮೆರಿಕದ ಅವಳಿ ಗೋಪುರಕ್ಕೆ ವಿಮಾನ ಡಿಕ್ಕಿ ಹೊಡೆಸಿದ್ದಉಗ್ರರು ಭಾರೀ ವಿನಾಶ ಸೃಷ್ಟಿಸಿದ್ದರು. ಇದು ಅಮೆರಿಕದ ವಿದೇಶಾಂಗ ನೀತಿಯ ಭಾರಿ ಬದಲಾವಣೆಗೆ ನಾಂದಿ ಹಾಡಿತ್ತು.
ಸೌದಿ ರಾಜಕುಮಾರನಿಗೆ ಪಾಕ್’ನಿಂದ ಚಿನ್ನದ ರೈಫಲ್ ಉಡುಗೊರೆ..!
ಮಣಿಪುರ ಗಲಭೆ: 4 ಪತ್ರಕರ್ತರ ಬಂಧನಕ್ಕೆ ಸುಪ್ರೀಂ ಮಧ್ಯಂತರ ತಡೆ
ನವದೆಹಲಿ: ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಹೊರಿಸಿ ಸಂಪಾದಕರ ಕೂಟದ 4 ಪತ್ರಕರ್ತರ ವಿರುದ್ಧ ಮಣಿಪುರ ಸರ್ಕಾರ (Manipur government) ಹಾಕಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಸೆ.15ವರೆಗೆ ಪತ್ರಕರ್ತರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ಈ ಪತ್ರಕರ್ತರ ವಿರುದ್ಧ ಸೆ.15ರವರೆಗೆ ಬಂಧನ ಸೇರಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಪೊಲೀಸರಿಗೆ ಕೋರ್ಟ್ ತಾಕೀತು ಮಾಡಿದೆ. ಮಣಿಪುರಕ್ಕೆ ಇತ್ತೀಚೆಗೆ ಹೋಗಿದ್ದ ಈ 4 ಪತ್ರಕರ್ತರು ಗಲಭೆ ಕುರಿತು ವರದಿ ಮಾಡಿದ್ದರು. ಆದರೆ ವರದಿ ಅಸತ್ಯದಿಂದ ಕೂಡಿದ್ದು, ಗಲಭೆಗೆ ಮತ್ತಷ್ಟು ಕುಮ್ಮಕ್ಕು ನೀಡುವಂತಿದೆ ಎಂದು ಮುಖ್ಯಮಂತ್ರಿ ಬೀರೇನ್ ಸಿಂಗ್ (Minister Biren Singh) ಆರೋಪಿಸಿದ್ದರು ಹಾಗೂ ಪ್ರಕರಣ ದಾಖಲಿಗೆ ಸೂಚಿಸಿದ್ದರು.