ಸೌದಿ ರಾಜಕುಮಾರನಿಗೆ ಪಾಕ್’ನಿಂದ ಚಿನ್ನದ ರೈಫಲ್ ಉಡುಗೊರೆ..!
ಸೌದಿ ಅರೇಬಿಯಾದ ರಕ್ಷಣಾ ಸಚಿವರೂ ಆಗಿರುವ ಸಲ್ಮಾನ್, ಮೊದಲ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನದ ಸಂಸತ್ ನಿಯೋಗ ಸಲ್ಮಾನ್ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಒಂದು ಭಾವಚಿತ್ರ ಹಾಗೂ ಚಿನ್ನ ಲೇಪಿತ ಗನ್ ನೀಡಿದೆ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಇಸ್ಲಾಮಾಬಾದ್[ಫೆ.22]: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಕಾರಣಕ್ಕಾಗಿ ಜಾಗತಿಕ ಒತ್ತಡಕ್ಕೆ ಸಿಲುಕಿರುವ ಹಾಗೂ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪಾಕಿಸ್ತಾನ, ಇತ್ತೀಚೆಗೆ ತನ್ನ ದೇಶಕ್ಕೆ ಭೇಟಿ ನೀಡಿದ್ದ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್‌ಗೆ ಚಿನ್ನ ಲೇಪಿತ ರೈಫಲ್ ಅನ್ನು ಉಡುಗೊರೆ ನೀಡಿ ಸುದ್ದಿಯಾಗಿದೆ.
ನೀವ್ ರೆಡಿ ಇದ್ರೆ ನಾವೂ ರೆಡಿ: ಇಮ್ರಾನ್ ಕೀಳು ನುಡಿ!
ಸೌದಿ ಅರೇಬಿಯಾದ ರಕ್ಷಣಾ ಸಚಿವರೂ ಆಗಿರುವ ಸಲ್ಮಾನ್, ಮೊದಲ ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನದ ಸಂಸತ್ ನಿಯೋಗ ಸಲ್ಮಾನ್ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ ಒಂದು ಭಾವಚಿತ್ರ ಹಾಗೂ ಚಿನ್ನ ಲೇಪಿತ ಗನ್ ನೀಡಿದೆ ಎಂದು ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.
ಭಾರತದಲ್ಲಿ ಸೌದಿ ರಾಜಕುಮಾರ: ಮೋದಿ ಮಾತುಕತೆ ನೇರಾನೇರ!
ಜನವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸೌದಿ ರಾಜ ಕುಮಾರ ಫಹಾದ್ ಬಿನ್ ಸುಲ್ತಾನ್ ಬಿನ್ ಅಬ್ದುಲ್ ಅಜೀನ್ ಸೌದ್ ಅವರು ಪ್ರಧಾನಿ ಇಮ್ರಾನ್ ಖಾನ್‌ಗೆ ಚಿನ್ನದ ಕಲಾಶ್ನಿಕೋವ್ ರೈಫಲ್ ಹಾಗೂ ಬುಲೆಟ್‌ಗಳನ್ನು ಉಡುಗೊರೆ ನೀಡಿದ್ದರು. ಈ ಉಡುಗೊರೆ ನೀಡಿದ್ದಕ್ಕಾಗಿ ಇಮ್ರಾನ್ ಖಾನ್ ಧನ್ಯವಾದ ಅರ್ಪಿಸಿದ್ದರು.