ಎಐಎಡಿಎಂಕೆಯ ಸಂಸ್ಥಾಪಕ, ತಮಿಳನಾಡು ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ ಪ್ರತಿಮೆಗೆ ಕಿಡಿಗೇಡಿಗಳು ಕೇಸರಿ ಶಾಲು ಹಾಕಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ.


ತಮಿಳನಾಡು(ಸೆ.28): ಎಐಎಡಿಎಂಕೆಯ ಸಂಸ್ಥಾಪಕ, ತಮಿಳನಾಡು ಎಂಜಿ ರಾಮಚಂದ್ರನ್ ಅವರ ಪ್ರತಿಮೆಗೆ ಕಿಡಿಗೇಡಿಗಳು ಕೇಸರಿ ಶಾಲು ಹಾಕಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ.

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸಂಸ್ಥಾಪಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿಯಾಗಿದ್ದ ಎಂಜಿಆರ್. ಗುರುವಾರ ಎಂಜಿಆರ್‌ ಪ್ರತಿಮೆಗೆ ಕಿಡಿಗೇಡಿಗಳು ಕೇಸರಿ ಶಾಲು ಹಾಕಿರುವುದು ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಎಐಎಡಿಎಂಕೆ ಸದಸ್ಯರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.ಇದೊಂದು ಕಳವಳಕಾರಿ ಘಟನೆಯಾಗಿದ್ದು ಪೊಲೀಸ್ ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಹಚ್ಚುವಂತೆ ಒತ್ತಾಯಿಸಿದರು.

ಎಂಜಿಆರ್ ಎಂದೇ ಖ್ಯಾತರಾಗಿರುವ ಮರುತೂರ್ ಗೋಪಾಲನ್ ರಾಮಚಂದ್ರನ್ ಅವರು 1977 ರಿಂದ 1987 ರಲ್ಲಿ ಅವರು ಸಾಯುವವರೆಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಅಣ್ಣಾಮಲೈಯಿಂದ ಪಕ್ಷಕ್ಕೆ ಅವಮಾನ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮೈತ್ರಿ ಮುರಿದ ಎಐಎಡಿಎಂಕೆ!

ಎಂಜಿಆರ್ ಪ್ರತಿಮೆ ಕೇಸರಿಕರಣ:

ಎಂಜಿಆರ್ ಪ್ರತಿಮೆಗೆ ಸಂಬಂಧಿಸಿದಂತೆ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಡಿಸೆಂಬರ್ 2022 ರಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಚೆನ್ನೈನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಬಳಿ ಇರುವ ಎಂಜಿಆರ್ ಪ್ರತಿಮೆಗೆ ಕೇಸರಿ ಶಾಲು ಹೊದಿಸಲಾಗಿತ್ತು. ಅದಕ್ಕೂ ಹಿಂದೆ ತಿರುವಳ್ಳುವರ್, ಅಣ್ಣಾ, ಪೆರಿಯಾರ್ ಮತ್ತು ಅಂಬೇಡ್ಕರ್ ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿದಿರುವ ಘಟನೆ ನಡೆದಿದ್ದವು. 

ಜುಲೈ 2020 ರಲ್ಲಿ ಪುದುಚೇರಿಯಲ್ಲಿ ಕೇಸರಿ ಶಾಲು ಹೊದಿಸಲಾಗಿದ್ದ ಎಂಜಿಆರ್ ಪ್ರತಿಮೆ ಪತ್ತೆಯಾಗಿತ್ತು. ಘಟನೆಯ ವಿರುದ್ಧ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಕೃತ್ಯ ಮರುಕಳಿಸಿದ್ದು, ಕೇಸರಿ ಶಾಲು ಹಾಕಿದ ಕಿಡಿಗೇಡಿಗಳು ಯಾರು? ಇದರ ಹಿಂದೆ ಯಾರಿದ್ದಾರೆ. ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಭಿನ್ನಾಭಿಪ್ರಾಯ

 ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಸಂಬಂಧ ಕಡಿದುಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ. ಸೋಮವಾರ, ಸೆಪ್ಟೆಂಬರ್ 25 ರಂದು ಎಐಎಡಿಎಂಕೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಯೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಂಡಿತ್ತು. ಎಐಎಡಿಎಂಕೆಯ ಮಾಜಿ ನಾಯಕರಿಗೆ ಸಂಬಂಧಿಸಿದಂತೆ ಅನುಚಿತ ಹೇಳಿಕೆಗಳಿಂದ ಮೈತ್ರಿ ಮುರಿದುಕೊಂಡಿತ್ತು ಇದೀಗ ಅದಕ್ಕೆ ಪ್ರತಿಯಾಗಿ ಈ ಘಟನೆ ನಡೆದಿದೆ ಎಂದು ವರದಿಗಳು ಹೇಳುತ್ತಿವೆ.

ಶಾರುಖ್‌ ಖಾನ್‌ ಕೂಡ ತಿರುಪತಿಗೆ ಹೋಗ್ಬಹುದು ಇದು ನಮ್ಮ ಸನಾತನ ಎಂದ ಅಣ್ಣಾಮಲೈ!

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಎಐಎಡಿಎಂಕೆ ಸಂಸ್ಥಾಪಕ ಅಣ್ಣಾದೊರೈ, ಮಾಜಿ ಸಿಎಂ ಜಯಲಲಿತಾ, ಸಾಹಿತಿ ಪೆರಿಯಾರ್ ಸೇರಿದಂತೆ ಹಲವರ ವಿರುದ್ಧ ಹೇಳಿಕೆ ನೀಡಿದ್ದಾರೆಂದು, ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡಿದ್ದರು. ಅಲ್ಲದೆ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೆಲ್ಲದರ ಪರಿಣಾಮವಾಗಿ ಎಂಜಿಆರ್ ಪ್ರತಿಮೆಗೆ ಕೇಸರಿ ಶಾಲು ಹೊದಿಸಲು ಕಾರಣವಾಗಿದೆ ಎಂದು ವರದಿಗಳು ಬಂದಿವೆ.