ಕಾಶ್ಮೀರ ಪಂಡಿತರ ನರಮೇಧ ಕುರಿತ ಚಿತ್ರ ದಿ ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಸುಳ್ಳು ಹೇಳಲಾಗಿದೆ, ಓಮರ್ ಅಬ್ದುಲ್ಲಾ ಟೀಕೆ ಮುಸ್ಲಿಂಮರು ಬಲಿಯಾಗಿದ್ದಾರೆ, ಅವರ ಬಗ್ಗೆ ಒಂದು ಮಾತಿಲ್ಲ
ಕಾಶ್ಮೀರ(ಮಾ.18): ಕಾಶ್ಮೀರ ಪಂಡಿತರ ಮೇಲೆ ನಡೆದ ನರಮೇಧದ ಕಹಿ ಸತ್ಯ ಬಿಚ್ಚಿಡುವ ಬಾಲಿವುಡ್ ವಿವೇಕ್ ಅಗ್ನಿಗೋತ್ರಿ ನಿರ್ದೇಶನದ ಚಿತ್ರ ದಿ ಕಾಶ್ಮೀರ ಫೈಲ್ಸ್ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. 1990ರಲ್ಲಿ ನಡೆದ ಘನಘೋರ ಘಟನೆ ಕುರಿತು ಬೆಳಕು ಚೆಲ್ಲುವ ಈ ಚಿತ್ರ ಇದೀಗ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಇದೀಗ ಕಾಶ್ಮೀರ ಮಾಜಿ ಸಿಎಂ ನ್ಯಾಶನಲ್ ಕಾನ್ಫೆರೆನ್ಸ್ ಪಕ್ಷದ ಅಧ್ಯಕ್ಷ ಓಮರ್ ಅಬ್ದುಲ್ಲಾ ಚಿತ್ರದಲ್ಲಿ ಸುಳ್ಳು ಹೇಳಲಾಗಿದೆ ಎಂದಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಓಮರ್ ಅಬ್ದುಲ್ಲಾ, ದಿ ಕಾಶ್ಮೀರ ಫೈಲ್ಸ್ ಚಿತ್ರ ಸಾಕ್ಷ್ಯ ಚಿತ್ರ ಅಲ್ಲ ಎಂದಿದ್ದಾರೆ. ಇದು ಸುಳ್ಳಿನ ಕಂತೆ ಎಂದಿದ್ದಾರೆ. ಕಾಶ್ಮೀರ ಪಂಡಿತರ ಎಂದು ಹೇಳಲಾಗುತ್ತಿರುವ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಆಗಿರಲಿಲ್ಲ. ಈ ವೇಳೆ ರಾಜ್ಯಪಾಲರ ಆಡಳಿತವಿತ್ತು. ಕೇಂದ್ರದಲ್ಲಿ ವಿಪಿ ಸಿಂಗ್ ಸರ್ಕಾರವಿತ್ತು. ಈ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲವಿತ್ತು. ಆದರೆ ಈ ವಿವರ ಚಿತ್ರದಲ್ಲಿ ಮರೆ ಮಾಚಲಾಗಿದೆ ಎಂದು ಅಬ್ದುಲ್ಲಾ ಹೇಳಿದ್ದರೆ.
ಪಂಡಿತರನ್ನು ಕಗ್ಗೊಲೆ ಮಾಡಿದವನಿಗೆ ಹಸ್ತಲಾಘವ ಮಾಡಿದ್ದರು ಅಂದಿನ ಪ್ರಧಾನಿ..!
1900ರಲ್ಲಿ ಕಾಶ್ಮೀರ ಪಂಡಿತರ ಮೇಲೆ ದಾಳಿಯಾಗಿದೆ ಅನ್ನುವುದು ಸತ್ಯವಾದರೆ ವಿಷಾಧಿಸುತ್ತೇನೆ. ಆದರೆ ಕಣಿವೆ ರಾಜ್ಯದಲ್ಲಿ ಮುಸ್ಲಿಂರು ಬಲಿಯಾಗಿದ್ದಾರೆ. ಅವರ ಕುರಿತ ಒಂದು ವಾಕ್ಯವೂ ಚಿತ್ರದಲ್ಲಿಲ್ಲ. ಹೀಗಾಗಿ ದಿ ಕಾಶ್ಮೀರ ಚಿತ್ರ ಸತ್ಯಕ್ಕೂ ದೂರವಾಗಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಓಮರ್ ಅಬ್ದುಲ್ಲಾಗೂ ಮೊದಲು ಚತ್ತೀಸಘಡ ಸಿಎಂ, ಕಾಂಗ್ರೆಸ್ ನಾಯಕ ಭೂಪೇಶ್ ಬಾಘೆಲ್ ದಿ ಕಾಶ್ಮೀರ ಫೈಲ್ಸ್ ಚಿತ್ರದ ವಿರುದ್ದ ಅಸಮಾಧನ ವ್ಯಕ್ತಪಡಿಸಿದ್ದರು. ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಅರ್ಧಸತ್ಯ ಹೇಳಲಾಗಿದೆ. ಇದು ಅತ್ಯಂತ ಗಂಭೀರ ತಪ್ಪು. ಕೋಮು ಸೌಹಾರ್ಧತೆ ಬದಲು ಎರಡು ಹಿಂದೂ ಹಾಗೂ ಮುಸ್ಲಿಂ ಸಮದಾಯದಲ್ಲಿ ದ್ವೇಷದ ಭಾವನೆ ಹುಟ್ಟು ಹಾಕುತ್ತಿದೆ ಎಂದು ಬಾಘೆಲ್ ಹೇಳಿದ್ದರು.
The Kashmir Files; ನಾನು ಮದುವೆಯಾಗಿದ್ದು ಕಾಶ್ಮೀರಿ ಪಂಡಿತನನ್ನು, ಅವರ ನೋವು ನನಗೆ ಗೊತ್ತು- ಯಾಮಿ ಗೌತಮ್
ಕಾಶ್ಮೀರದಲ್ಲಿ ಪಂಡಿತರಿಗಿಂತ ಹೆಚ್ಚು ಮುಸ್ಲಿಮರ ಸಾವು: ಕೇರಳ ಕಾಂಗ್ರೆಸ್
ಪಂಡಿತರ ಹತ್ಯೆ ಕುರಿತಾಗಿ ತಯಾರಾಗಿರುವ ದ ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತಾಗಿ ದೇಶಾದ್ಯಂತ ಚರ್ಚೆ ಆರಂಭವಾಗಿರುವ ಸಮಯದಲ್ಲೇ, 1990ರಿಂದ 2007ರವರೆಗೆ ಕಾಶ್ಮೀರದಲ್ಲಿ ಪಂಡಿತರಿಗಿಂತ ಹೆಚ್ಚು ಮುಸ್ಲಿಮರು ಹತರಾಗಿದ್ದಾರೆ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದಕ್ಕೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಟ್ವೀಟ್ ಡಿಲೀಟ್ ಮಾಡಲಾಗಿದೆ. 1990ರಿಂದ 2007ರ ಅವಧಿಯಲ್ಲಿ 399 ಕಾಶ್ಮೀರಿ ಪಂಡಿತರು ಮೃತಪಟ್ಟಿದ್ದರೆ, 15 ಸಾವಿರ ಮುಸ್ಲಿಮರು ಮೃತಪಟ್ಟಿದ್ದಾರೆ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದಕ್ಕೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಕಾಂಗ್ರೆಸ್‌ಗೆ ಇತಿಹಾಸ ತಿಳಿದಿಲ್ಲ. ಇದೊಂದು ಅಸ್ವಸ್ಥ ಮನಸ್ಥಿತಿಯ ಟ್ವೀಟ್’ ಎಂದು ಹೇಳಿತ್ತು.
100 ಕೋಟಿ ರೂಪಾಯಿ ಗಳಿಕೆಯತ್ತ ಚಿತ್ರ
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಬಿಡುಗಡೆಯಾದ 6 ದಿನಗಳಲ್ಲೇ ಭರ್ಜರಿ 80 ಕೋಟಿ ರು. ಗಳಿಕೆ ಮಾಡಿದೆ. ಇದೀಗ 100 ಕೋಟಿಯತ್ತ ದಾಪುಗಾಲಿಟ್ಟಿದೆ. ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿದ್ದ ಈ ಚಿತ್ರವು 6ನೇ ದಿನ 19 ಕೋಟಿ ರು. ಗಳಿಕೆ ಮಾಡಿದ್ದು, ಕೋವಿಡ್ ಸೋಂಕಿನ ಆರಂಭದ ನಂತರ ಅತಿ ಹೆಚ್ಚು ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಿಸಿದೆ.
ಶುಕ್ರವಾರ ತೆರೆಕಂಡ ಚಿತ್ರವು ಮೊದಲನೇ ದಿನ 4 ಕೋಟಿ ರು ಗಳಿಸಿತ್ತು. ನಂತರ ಬಾಕ್ಸಾಫೀಸ್ ಶನಿವಾರ 9 ಕೋಟಿ, ಭಾನುವಾರ 10 ಕೋಟಿ, ಸೋಮವಾರ 15 ಕೋಟಿ , ಮಂಗಳವಾರ 18 ಕೋಟಿ ಹಾಗೂ ಬುಧವಾರ 19 ಕೋಟಿ ರು ಗಳಿಕೆ ಮಾಡಿದೆ. 1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯದ ಕುರಿತ ಕಥಾಹಂದರವನ್ನು ಈ ಚಿತ್ರ ಹೊಂದಿದೆ.
