ಇಂಡಿಯಾ ಗೇಟ್: ತಿಂಡಿ ತಿನಿಸು ಪ್ರಿಯ ಅಟಲ್ ಬಿಹಾರಿ!
ಸ್ವತಃ ಅಟಲ್ ಜಿ ಹೇಳಿಕೊಂಡಿರುವ ಪ್ರಕಾರ ಸಮಯ ಸಿಕ್ಕಾಗ ಅಟಲ್ ಒಳ್ಳೆ ಅಡುಗೆ ಕೂಡ ಮಾಡಿ ಕೊಳ್ಳುತ್ತಿದ್ದರಂತೆ.
ಪ್ರಶಾಂತ್ ನಾತು, ಇಂಡಿಯಾ ಗೇಟ್
ನವದೆಹಲಿ(ಆ.16): ರಾಜಕಾರಣಿ ಆಗುವುದರ ಜೊತೆಜೊತೆಗೆ ಅಟಲ್ ಜಿ ಗೆ ಹೊಸ ಹೊಸ ತಿಂಡಿ ತಿನಿಸು ರುಚಿ ನೋಡುವುದೆಂದರೆ ಬಹಳ ಆಸಕ್ತಿ ಇತ್ತಂತೆ.ಸ್ವತಃ ಅಟಲ್ ಜಿ ಹೇಳಿಕೊಂಡಿರುವ ಪ್ರಕಾರ ಸಮಯ ಸಿಕ್ಕಾಗ ಅಟಲ್ ಒಳ್ಳೆ ಅಡುಗೆ ಕೂಡ ಮಾಡಿ ಕೊಳ್ಳುತ್ತಿದ್ದರಂತೆ.ಯಾರಾದರೂ ಹಳೆಯ ಗೆಳೆಯರು ದಿಲ್ಲಿಗೆ ಬಂದರೆ ದಿನದ ಕೆಲಸ ಮುಗಿಸಿ ರಾತ್ರಿ ಚಾಂದನಿ ಚೌಕ ಗೆ ಕರೆದು ಕೊಂಡು ಹೋಗಿ ಅಲ್ಲಿ ಗೋಲಗಪ್ಪಾ ತಿನ್ನಿಸಿ ರಸಮಲಾಯಿ ಜಿಲೇಬಿ ಹಾಲಿನ ಬರ್ಫಿ ತಿಂದು ಮಲಾಯಿ ಹಾಕಿದ ಲಸ್ಸಿ ಕುಡಿಸಿ ಸಿನೆಮಾ ಗೆ ಕರೆದು ಕೊಂಡು ಹೋಗುತ್ತಿದ್ದರಂತೆ.
ಅಜಾತಶತ್ರು ಅಟಲ್ ಪುಣ್ಯಸ್ಮರಣೆ, ಪ್ರಧಾನಿ ಮೋದಿ ಶ್ರದ್ಧಾಂಜಲಿ!
ಒಮ್ಮೆ ಇಂದೋರ್ ನಲ್ಲಿ ಬಿಜೆಪಿ ಕಾರ್ಯಕಾರಿಣಿ.ಆಗ ವಕ್ತಾರೆ ಆಗಿದ್ದ ಸುಶ್ಮಾ ಸ್ವರಾಜ್ ನಾಳೆ ಮಾಲಪೋವಾ ಸಿಹಿ ಕಾರ್ಯಕಾರಿಣಿ ಯ ಊಟದ ಮೆನು ಅಲ್ಲಿದೆ ಎಂದು ಹೇಳಿದ್ದು ಅಟಲ್ ಜಿ ಪತ್ರಿಕೆ ಗಳಲ್ಲಿ ಓದಿದ್ದರಂತೆ.ಮರು ದಿನ ಊಟಕ್ಕೆ ಕುಳಿತ ಪ್ರಧಾನಿ ಸುಶ್ಮಾ ರನ್ನು ಕರೆದು ಎಲ್ಲಿ ಮಾಲ್ ಪೊವಾ ಎಂದು ಕೇಳಿ ದಾಗ ಸ್ಥಳೀಯ ನಾಯಕರು ಸುಸ್ತೋ ಸುಸ್ತು.ಕೊನೆಗೆ ಮರು ದಿನ ವಿಶೇಷ ವಾಗಿ ತಯಾರಿಸಿ ಕೊಡಲಾಯಿತಂತೆ.
ದಶಕ ಗಳ ಹಿಂದೆ ಅಟಲ್ ಜಿ ಗ್ವಾಲಿಯರ್ ಗೆ ಹುಟ್ಟೂರಿ ಗೆ ಹೋಗಿದ್ದರಂತೆ.ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ.ಅವತ್ತು ಉಪಹಾರಕ್ಕೆ ಪೋಹಾ ಅಂದರೆ ಅವಲಕ್ಕಿ ಇತ್ತಂತೆ.ಈಗ ಕೇಂದ್ರ ಸಚಿವ ಆಗ ಜಿಲ್ಲಾ ಅಧ್ಯಕ್ಷ ಆಗಿದ್ದ ನರೇಂದ್ರ ಸಿಂಗ್ ತೋಮರ್ ರನ್ನು ಕರೆದ ಅಟಲ್ ಜಿ " ಏನ್ರೀ ತೋಮರ್ ನೀವು ನೋಡಿದರೆ ರಜಪೂತ ರು ನಿಮ್ಮ ಸಾಮ್ರಾಜ್ಯದಲ್ಲಿ ಬರೀ ಪೋಹಾ ಅಂದರೆ ಘಾಸ್ ಪೂಸ ತಿನ್ನಿಸುತ್ತೀರಾ ಎಂದು ತಮಾಷೆ ಮಾಡಿದರಂತೆ.
ಊಟವನ್ನೂ ಮಾಡದೇ ಒಂದೇ ದಿನ 18 ಕಡೆ ಭಾಷಣ ಮಾಡಿದ ಅಟಲ್!
ಮುಂಬೈ ಪುಣೆಗೆ ಹೋದಾಗ ತೀರ ಆಪ್ತರು ಇದ್ದರೆ ಅಟಲ್ ಜಿ ಪೂರಣ ಪೋಳಿ ಮಾಡಿ ಕೊಡಿ ಎಂದು ಹೇಳುತ್ತಿದ್ದರಂತೆ.ಏಪ್ರಿಲ್ ಮೇ ನಲ್ಲಿ ರತ್ನಾ ಗಿರಿ ಅಲ್ಫೋನ್ಸೋ ಹಣ್ಣು ಯಾರಾದರೂ ಮಿತ್ರರು ಅಟಲ್ ಜಿ ಗೆಂದೇ ಕಳುಹಿಸಿ ಕೊಡುತ್ತಿದ್ದರಂತೆ.