ಗಂಡು ಮಗುವಿಗಾಗಿ 'ಸಮ' ಸಂಖ್ಯೆಯಂದು ಸೇರಿ ಎಂದ ಖ್ಯಾತ ಕೀರ್ತನೆಕಾರನಿಗೆ ಸಂಕಷ್ಟ

ಗಂಡು ಮಗು ಪಡೆಯಲು ಸಮಸಂಖ್ಯೆಯ ದಿನದಂದು ಪತಿ ಪತ್ನಿ ದೈಹಿಕ ಸಂಪರ್ಕ ನಡೆಸಬೇಕು ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಜನಪ್ರಿಯ ಕೀರ್ತನೆಕಾರ ನಿವೃತ್ತಿ ಮಹಾರಾಜ್‌ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.

The famous Maharashtra psalmist is in trouble for his Public speech on how to find and getting boy baby akb

ಬಾಂಬೆ:  ಗಂಡು ಮಗು ಪಡೆಯಲು ಸಮಸಂಖ್ಯೆಯ ದಿನದಂದು ಪತಿ ಪತ್ನಿ ದೈಹಿಕ ಸಂಪರ್ಕ ನಡೆಸಬೇಕು ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಜನಪ್ರಿಯ ಕೀರ್ತನೆಕಾರ ನಿವೃತ್ತಿ ಮಹಾರಾಜ್‌ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಸಾರ್ವಜನಿಕ ಪ್ರವಚನಗಳಲ್ಲಿ ಹೇಗೆ ಗಂಡು ಮಗುವನ್ನು ಪಡೆಯಬಹುದು ಎಂಬ ತಂತ್ರಗಳನ್ನು ಹೇಳುವುದು ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಆಯ್ಕೆಯ ನಿಷೇಧ  ಕಾಯಿದೆ (ಪಿಸಿಪಿಎನ್‌ಡಿಟಿ ಕಾಯಿದೆ) ಅಡಿಯಲ್ಲಿ ಅಪರಾಧವಾಗಿದ್ದು, ಇದು 'ಲಿಂಗ ಪತ್ತೆ'ಗಾಗಿ ನೀಡುವ ಜಾಹೀರಾತಿಗೆ ಸಮವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಬಾಂಬೆ ಹೈಕೋರ್ಟ್‌ನ (Bombay High Court) ಔರಂಗಾಬಾದ್ ಪೀಠದ ನ್ಯಾಯಮೂರ್ತಿ ಕಿಶೋರ್ ಸಂತ,  ಅವರು, ಈ ಭಾಷಣವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂಬ ಕೀರ್ತನೆಕಾರನ  ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು.  ಅವರು ಈ ರೀತಿಯ ಉಪನ್ಯಾಸನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು ಎಂಬ ಕಾರಣದಿಂದ ಈ ಆರೋಪಿಯ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂದು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಜೂನ್ 16ರಂದು ನೀಡಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕೀರ್ತನೆ ವೇಳೆ ಜಗಳ; ತಬಲಾ ಹೊಡೆತಕ್ಕೆ ಕೊಲೆಯಾಗಿಹೋದ!

ಶೈಕ್ಷಣಿಕ ಉದ್ದೇಶಕ್ಕಾಗಿ, ಅಧ್ಯಯನಕ್ಕಾಗಿ ಪುಸ್ತಕವನ್ನು ಬರೆಯುವುದನ್ನು ಈ ಪ್ರಕರಣದೊಂದಿಗೆ ಹೋಲಿಸಲಾಗುವುದಿಲ್ಲ, ಜ್ಞಾನವನ್ನು ಸಂರಕ್ಷಿಸುವುದು ಮತ್ತು ನೀಡುವುದು ಯಾವಾಗಲೂ ಜ್ಞಾನವನ್ನು ಪಡೆಯಲು ಆಸಕ್ತಿ ಹೊಂದಿರುವ ನಿರ್ದಿಷ್ಟ ವ್ಯಕ್ತಿಗಳಿಗೆ ನಿರ್ದಿಷ್ಟ ರೀತಿಯಲ್ಲಿ ಮಾಡಬೇಕು ಎಂದ ಬಾಂಬೆ ಹೈಕೋರ್ಟ್‌ ಕೀರ್ತನೆಕಾರ ನಿವೃತ್ತಿ ಮಹಾರಾಜ್ (Nivruthi Maharaj) ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಸೆಷನ್ಸ್ ನ್ಯಾಯಾಲಯದ (Sessions Court) ತೀರ್ಪನ್ನು ರದ್ದುಗೊಳಿಸಿತು. 

ಕೀರ್ತನೆಕಾರರು ಪುರಾಣ, ಆಧ್ಯಾತ್ಮದ ಕತೆಗಳನ್ನು ಹಾಡು ಕತೆಗಳ ಮೂಲಕ ಜನರಿಗೆ ಹೇಳುತ್ತಾ ಜನರಿಗೆ ಆಧ್ಯಾತ್ಮದ ಜ್ಞಾನದ ಜೊತೆ ಜನರನ್ನು ರಂಜಿಸುವವರಾಗಿದ್ದು, ಗ್ರಾಮೀಣ ಹಾಗೂ ಉಪ ನಗರಗಳಲ್ಲಿ ಕೀರ್ತನೆಗಳ ಮೂಲಕ ದಾಸರ ಪದಗಳನ್ನು ಹಾಡುತ್ತಾ ಜನರನ್ನು ರಂಜಿಸುತ್ತಾರೆ.
ಅದೇ ರೀತಿ 2020ರ ಜನವರಿಯ 4 ರಂದು  ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಸಂಗಮ್ನೇರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ವೃತ್ತಿಪರ ಕೀರ್ತನಕಾರರಾದ ನಿವೃತ್ತಿ ಕಾಶಿನಾಥ್ ದೇಶಮುಖ್ ಇಂದೋರಿಕರ್ ಅವರು ಉಪನ್ಯಾಸ ನೀಡುತ್ತಿದ್ದರು.  

ಧಾರ್ಮಿಕ ಗ್ರಂಥಗಳು ಮತ್ತು ಆಯುರ್ವೇದದ ಪುಸ್ತಕಗಳ ಸಾರಗಳನ್ನು ಉಲ್ಲೇಖಿಸುವಾಗ ಅವರು ಗಂಡು ಮಗು ಪಡೆಯಲು ಹೇಗೆ ಗರ್ಭಧರಿಸುವುದು ಎಂಬುದರ ಕುರಿತು ಕರೆಯಲ್ಪಡುವ ತಂತ್ರಗಳ ಬಗ್ಗೆ ಮಾತನಾಡುತ್ತಿದ್ದರು. ಸಮ ದಿನಾಂಕಗಳಲ್ಲಿ ಪತಿ-ಪತ್ನಿ ಸಂಪರ್ಕಕ್ಕೆ ಬಂದರೆ ಗಂಡು ಮಗು ಜನಿಸುತ್ತದೆ. ಬೆಸ ದಿನಾಂಕಗಳಲ್ಲಾದರೆ ಹೆಣ್ಣು ಮಗು ಜನಿಸುತ್ತದೆ ಎಂದು ಅವರು ಹೇಳಿದ್ದರು. ಅಲ್ಲದೇ ಅಶುಭ ಸಮಯದಲ್ಲಿ ಸಂಪರ್ಕ ನಡೆದರೆ ಹುಟ್ಟುವ ಮಗು ಕುಟುಂಬದ ಹೆಸರನ್ನೇ ಕೆಡಿಸುತ್ತದೆ ಎಂದೂ ಹೇಳಿದ್ದರು.

ಇದಲ್ಲದೆ, ಆರು ತಿಂಗಳ ಗರ್ಭಾವಸ್ಥೆಯ ನಂತರ, ಭ್ರೂಣವು ಬಲಭಾಗಕ್ಕೆ ತಿರುಗಿದರೆ, ಅದು ಗಂಡು ಮಗು ಮತ್ತು ಅದು ಎಡಭಾಗದಲ್ಲಿದ್ದರೆ ಅದು ಹೆಣ್ಣು ಎಂದು ಅವರು ಹೇಳಿದ್ದರು. ಇವರ ಭಾಷಣ ಯೂಟ್ಯೂಬ್‌ನಲ್ಲೂ ಅಪ್‌ಲೋಡ್ ಆಗಿತ್ತು.  ಮೂಢನಂಬಿಕೆ ವಿರೋಧಿ ಸಂಘಟನೆಯಾದ ಅಂಧಶ್ರಾದ್ಧ ನಿರ್ಮೂಲನ ಸಮಿತಿಯ ಸದಸ್ಯರಾಗಿರುವ ರಂಜನಾ ಪಗರ್-ಗಾವಂಡೆ ಅವರು ಈ ವಿವಾದಾತ್ಮಕ ಭಾಷಣದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಅಧಿಕಾರಿಗಳು ಕೀರ್ತನಕರನ ವಿರುದ್ಧ PCPNDT ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವು ಸಂಗಮ್ನೇರ್‌ನ (Sangamner) ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು, ಅದನ್ನು ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ರದ್ದುಗೊಳಿಸಿತು.

ಆದರೆ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಗವಾಂಡೆ ಅವರು ಹೈಕೋರ್ಟ್‌ಗೆ ಮತ್ತೆ ರಿಟ್ ಅರ್ಜಿಯನ್ನು ಸಲ್ಲಿಸಿದರು. ಪಿಸಿಪಿಎನ್‌ಡಿಟಿಯ ಕಾಯ್ದೆಯ ಸೆಕ್ಷನ್ 22 ರ ಅಡಿಯಲ್ಲಿ ವಿವರಿಸಿದಂತೆ ನಿವೃತ್ತಿ ಮಹಾರಾಜ್ ಮಾಡಿದ ಭಾಷಣವು ಲಿಂಗ ಪತ್ತೆಗಾಗಿ ಜಾಹೀರಾತಿನಂತಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಅಲ್ಲದೇ ಪಿಸಿಪಿಎನ್‌ಡಿಟಿ ಕಾಯಿದೆಯ ಸೆಕ್ಷನ್ 6 ಗರ್ಭಧಾರಣೆಯ ಮೊದಲು ಮತ್ತು ನಂತರ ಲಿಂಗ ಪತ್ತೆಯ ಸಂಪೂರ್ಣ ನಿಷೇಧವನ್ನು ಸ್ಪಷ್ಟವಾಗಿ ಒದಗಿಸುತ್ತದೆ ಎಂದು ಹೈಕೋರ್ಟ್ ಗಮನಿಸಿದೆ. ಆದರೆ ಇಲ್ಲಿ ಕೀರ್ತನೆಕಾರರು ಡಯಾಗ್ನೋಸ್ಟಿಕ್ ಸೆಂಟರ್, ಕ್ಲಿನಿಕ್, ಅವುಗಳಿಲ್ಲದೇ ಬೇರೆ ತಂತ್ರಗಳ ಬಳಕೆಯಿಂದ ಭ್ರೂಣದ ಲಿಂಗವನ್ನು (sex detection) ಆಯ್ಕೆ ಮಾಡಬಹುದು ಎಂಬ ಸಂದೇಶವನ್ನು ಪ್ರಚಾರ ಮಾಡುವ ಅಥವಾ ಹೇರಲು ಪ್ರಯತ್ನಿಸಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆರತಿ ವೇಳೆ ಚಪ್ಪಾಳೆ ತಟ್ಟುವುದು ಏಕೆ?: ಇಲ್ಲಿದೆ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ...

ಅಲ್ಲದೇ ತಮ್ಮ ಈ ತಂತ್ರಗಳು ವೈಜ್ಞಾನಿಕ ತಳಹದಿಯನ್ನು ಹೊಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಂತಹ ಪಠ್ಯಗಳು ಧಾರ್ಮಿಕ ಪಾವಿತ್ರ್ಯವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ಇದು ಹೀಗೆ ಉಪನ್ಯಾಸ ಮಾಡುವವರನ್ನು ಜನ ಹೆಚ್ಚು ಗಂಭೀರವಾಗಿ ನೋಡುವಂತೆ ಮಾಡಿದೆ ಎಂದು ಪೀಠವೂ ಹೇಳಿ ಅವರ ಮೇಲಿನ ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿದೆ. 

Latest Videos
Follow Us:
Download App:
  • android
  • ios