ಕಾರು ಚಾಲನೆ ವೇಳೆಯೇ ಚಾಲಕನಿಗೆ ತಲೆ ಚಕ್ಕರ್: ಹಲವು ಬೈಕ್‌ಗಳಿಗೆ ಡಿಕ್ಕಿ: ಮೂವರು ಬಲಿ: ವೀಡಿಯೋ
ಸಿಗ್ನಲ್‌ನಲ್ಲಿ ಕ್ರಾಸಿಂಗ್ ವೇಳೆ ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ 3ರಿಂದ 4ಕ್ಕೂ ಹೆಚ್ಚು ದ್ಚಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಷ್ಟೂ ವಾಹನಗಳು ದೂರಕ್ಕೆ ಚಿಮ್ಮಿ ಬಿದ್ದಿದ್ದು, ಈ ಅವಘಡದಲ್ಲಿ ಮೂವರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದಾರೆ.
ಕೊಲ್ಹಾಪುರ: ಸಿಗ್ನಲ್‌ನಲ್ಲಿ ಕ್ರಾಸಿಂಗ್ ವೇಳೆ ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ 3ರಿಂದ 4ಕ್ಕೂ ಹೆಚ್ಚು ದ್ಚಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಷ್ಟೂ ವಾಹನಗಳು ದೂರಕ್ಕೆ ಚಿಮ್ಮಿ ಬಿದ್ದಿದ್ದು, ಈ ಅವಘಡದಲ್ಲಿ ಮೂವರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದ ಸೈಬರ್ ಚೌಕ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕೂಡಲೇ ಸಮೀಪದ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರಂತದಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ. ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ರಸ್ತೆ ದಾಟುತ್ತಿದ್ದ ಹಲವು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಬೈಕ್‌ನಲ್ಲಿದ್ದವರೆಲ್ಲಾ ಬೈಕ್ ಸಮೇತ ದೂರ ಚಿಮ್ಮಿದ್ದಾರೆ.
ಸಿಕ್ಸ್ ಬಾರಿಸಿ ಪ್ರಾಣ ಬಿಟ್ಟ ಗಲ್ಲಿ ಕ್ರಿಕೆಟರ್: ಆಘಾತಕಾರಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಹೀಗೆ ವೇಗವಾಗಿ ಬಂದು ಮೂವರನ್ನು ಬಲಿ ಪಡೆದ ಬಿಳಿ ಬಣ್ಣದ ಕಾರನ್ನು 72 ವರ್ಷದ ವೃದ್ಧ ವಸಂತ್ ಚೌಹಾಣ್ ಎಂಬುವವರು ಚಲಾಯಿಸುತ್ತಿದ್ದು, ವಾಹನ ದಟ್ಟಣೆಯಿಂದ ಕೂಡಿದ ಇಂಟರ್‌ಸೆಕ್ಷನ್ ಸಿಗ್ನಲ್‌ನಲ್ಲಿ ಕಾರು ಅವರ ನಿಯಂತ್ರಣ ತಪ್ಪಿದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೇಳುವ ಪ್ರಕಾರ, ಕಾರು ಚಾಲಕನಿಗೆ ವಾಹನ ಚಾಲನೆಯ ವೇಳೆಯೇ ತಲೆ ತಿರುಗಿದಂತಾಗಿದ್ದು, ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತಕ್ಕೆ ಕಾರಣವಾಗುವಂತಹ ಯಾವುದಾದರೂ ವೈದ್ಯಕೀಯ ಹಿನ್ನೆಲೆಯನ್ನು 72 ವರ್ಷದ ಕಾರು ಚಾಲಕ ಚೌಹಾಣ್ ಹೊಂದಿದ್ದಾರೆಯೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯಾಹ್ನ ಊಟದ ನಂತರ ನಿದ್ದೆಗೆ ಜಾರಿದ್ದ ಕಾರ್ಮಿಕನ ಮುಖದ ಮೇಲೆ ಮೂತ್ರ ವಿಸರ್ಜನೆ
ಸೈಬರ್ ಚೌಕ್ ಸದಾ ವಾಹನಗಳಿಂದ ಗಿಜಿಗುಡುವ ಇಂಟರ್ ಸೆಕ್ಷನ್ ಸಿಗ್ನಲ್ ಆಗಿದ್ದು, ರಾಜಾರಾಂಪುರಿ, ಶಿವಾಜಿ ವಿಶ್ವವಿದ್ಯಾಲಯ ಮತ್ತು ರಾಜಾರಾಂ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಹೆಚ್ಚು ಜನಸಂಚಾರದ ಪ್ರದೇಶವಾಗಿದೆ ಜೊತೆಗೆ ಇದು ಹಲವಾರು ಶಾಲೆಗಳು ಮತ್ತು ಸೈಬರ್ ಕಾಲೇಜುಗಳಿಂದ ಸುತ್ತುವರಿದಿದೆ.
ಅಪಘಾತದ ಭಯಾನಕ ವೀಡಿಯೋ ಇಲ್ಲಿದೆ