ಕ್ರಿಕೆಟ್ ಆಡುತ್ತಿರುವಾಗಲೇ ಯುವಕನೋರ್ವ ಹಠಾತ್ ಕುಸಿದು ಬಿದ್ದು ಪ್ರಾಣಬಿಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಈ ದುರಂತಮಯ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಥಾಣೆ: ಕ್ರಿಕೆಟ್ ಆಡುತ್ತಿರುವಾಗಲೇ ಯುವಕನೋರ್ವ ಹಠಾತ್ ಕುಸಿದು ಬಿದ್ದು ಪ್ರಾಣಬಿಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಈ ದುರಂತಮಯ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಇದು ಲೋಕಲ್ ಕ್ರಿಕೆಟ್ ಟೂರ್ನಿಯಂತೆ ಕಾಣಿಸುತ್ತಿದ್ದು, ಹಳದಿ ಹಾಗೂ ಪಿಂಕ್ ಬಣ್ಣದ ಶರ್ಟ್ ಧರಿಸಿರುವ ಎರಡು ತಂಡಗಳು ಆಟವಾಡುತ್ತಿವೆ. ಈ ಪಿಂಕ್ ಬಣ್ಣದ ತಂಡ ಬ್ಯಾಟಿಂಗ್ ಮಾಡುತ್ತಿದ್ದರೆ ಹಳದಿ ಶರ್ಟ್ ಧರಿಸಿರುವ ತಂಡ ಫೀಲ್ಡಿಂಗ್ ಮಾಡುತ್ತಿದೆ. ಬ್ಯಾಟಿಂಗ್ ಮಾಡುತ್ತಿರುವ ಯುವಕ ಸಿಕ್ಸ್ ಬಾರಿಸಿದ ಕೆಲವೇ ಕ್ಷಣಗಳಲ್ಲಿ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ತಂಡ ಬೇಧ ಮರೆತು ಎಲ್ಲಾ ಯುವಕರು ಅಲ್ಲಿ ಸೇರಿ ಬಿದ್ದ ಯುವಕನ ಬಳಿ ಧಾವಿಸಿ ಬಂದಿದ್ದು, ಆತನನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ ಆತ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. 

ಮಹಾರಾಷ್ಟ್ರದ ಥಾಣೆಯ ಮೀರಾ ರೋಡ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಬ್ಯಾಟನ್ನು ಬೌಂಡರಿಯಿಂದ ದೂರ ಅಟ್ಟಿ ಕ್ಷಣದಲ್ಲೇ ಯುವಕ ಸಾವಿನ ಮನೆ ಸೇರಿದ್ದು, ಅಲ್ಲಿದ್ದ ಇತರ ಆಟಗಾರರಲ್ಲಿ ದಿಗ್ಭ್ರಮೆ ಮೂಡಿಸಿದೆ. ಸಿಕ್ಸ್ ಬಾರಿಸಿ ಮುಂದಿನ ಚೆಂಡಿಗಾಗಿ ಬ್ಯಾಟ್ ಹಿಡಿದು ನಿಂತಾಗಲೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಇತರ ಆಟಗಾರರು ಆತನ ಸಹಾಯಕ್ಕೆ ಧಾವಿಸಿ ಬಂದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಕ್ರಿಕೆಟ್ ಆಡುತ್ತಲೇ ಪ್ರಾಣಬಿಟ್ಟ ಯುವಕನ ಗುರುತನ್ನು ಇನ್ನು ಪತ್ತೆ ಮಾಡಿಲ್ಲ, ಪೊಲೀಸರ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಕ್ರಿಕೆಟ್ ಮೈದಾನದಲ್ಲಿ ಕುಸಿದು ಬಿದ್ದ ಕರ್ನಾಟಕ ವೇಗಿ ಕೆ ಹೊಯ್ಸಳ ಸಾವು, ತಂಡಕ್ಕೆ ಆಘಾತ!

Scroll to load tweet…

ಟಿವಿ ಲೈವ್‌ ಶೋನಲ್ಲಿ ಮಾತನಾಡುವಾಗಲೇ ಕುಸಿದು ಬಿದ್ದು ಸಾವು ಕಂಡ ಕೃಷಿ ತಜ್ಞ!