'ಅಖಂಡ ಭಾರತದ ಕನಸು ಶೀಘ್ರ ನನಸು' ಯುವ ಸಮೂಹಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ ಭರವಸೆ

ವಸಾಹತುಶಾಹಿ ಇಂಡಿಯಾ ಪದವನ್ನು ಭಾರತವೆಂದು ಬದಲಾಯಿಸುವ ಕುರಿತು ಪ್ರಕ್ರಿಯೆಗಳು ಆರಂಭವಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಅಖಂಡ ಭಾರತದ ಕನಸು ಕೂಡಾ ನನಸಾಗಲಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭರವಸೆ ನೀಡಿದ್ದಾರೆ.

The dream of a united India will soon come true says mohan bhagawat rav

ನಾಗಪುರ: ವಸಾಹತುಶಾಹಿ ಇಂಡಿಯಾ ಪದವನ್ನು ಭಾರತವೆಂದು ಬದಲಾಯಿಸುವ ಕುರಿತು ಪ್ರಕ್ರಿಯೆಗಳು ಆರಂಭವಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಅಖಂಡ ಭಾರತದ ಕನಸು ಕೂಡಾ ನನಸಾಗಲಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭರವಸೆ ನೀಡಿದ್ದಾರೆ.

ಇಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬ ಅಖಂಡ ಭಾರತ ಯಾವಾಗ ಅಸ್ತಿತ್ವಕ್ಕೆ ಬರಲಿದೆ ಎಂದು ಪ್ರಶ್ನಿಸಿದ್ದ. ಅದಕ್ಕೆ ಉತ್ತರಿಸಿದ ಭಾಗವತ್‌ ‘ಇಂಥದ್ದೇ ದಿನ ಅಖಂಡ ಭಾರತ ಅಸ್ತಿತ್ವಕ್ಕೆ ಬರಲಿದೆ ಎಂದು ನಾನು ಹೇಳಲಾರೆ. ಆದರೆ ಆ ಬಗ್ಗೆ ನೀವು ಕಾರ್ಯತತ್ಪರಾದರೆ ನೀವು ವೃದ್ಧರಾಗುವುದರೊಳಗೆ ಆ ಕನಸು ನನಸಾಗಲಿದೆ.

ಅಖಂಡ ಭಾರತವನ್ನು ಮತ್ತೆ ಒಗ್ಗೂಡಿಸುವುದೇ ನಮ್ಮ ಗುರಿ: ವಿಹೆಚ್‌ಪಿ, ಬಜರಂಗದಳ ಸಂಕಲ್ಪ

ಏಕೆಂದರೆ, ಯಾರಾರ‍ಯರು ಭಾರತದಿಂದ ವಿಭಜನೆಯಾಗಿ ದೂರವಾದರೂ, ಅವರಿಗೆಲ್ಲಾ ನಾವು ತಪ್ಪು ಮಾಡಿದ್ದೇವೆ ಎಂಬ ಅರಿವಾಗುತ್ತಿದೆ. ಅವರೆಲ್ಲಾ ಮತ್ತೆ ನಾವು ಮತ್ತೆ ಭಾರತದೊಳಗೆ ವಿಲೀನವಾಗಬೇಕೆಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭೂಪಟದಲ್ಲಿನ ಗೆರೆಯನ್ನು ಅಳಿಸಿಹಾಕಿದಾಕ್ಷಣ ಅವರು ಭಾರತೀಯರಾಗಲು ಸಾಧ್ಯವಾಗದು. ಭಾರತೀಯರಾಗುವುದೆಂದರೆ ಭಾರತದ ಗುಣಲಕ್ಷಗಳನ್ನು ಸ್ವೀಕರಿಸುವುದು’ ಎಂದು ಹೇಳಿದರು.

ದೇವರ ಪಾಲಿಗೆ ಎಲ್ಲರೂ ಒಂದೇ; ಜಾತಿ ಸೃಷ್ಟಿ ಮಾಡಿದ್ದು ಧರ್ಮ ಗುರುಗಳು: ಮೋಹನ್‌ ಭಾಗವತ್‌

Latest Videos
Follow Us:
Download App:
  • android
  • ios