Asianet Suvarna News Asianet Suvarna News

ಡ್ರಗ್‌ ಅಮಲಲ್ಲಿ ಆಸ್ಪತ್ರೆಯಲ್ಲೇ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ಡಾಕ್ಷರ್

ಡ್ರಗ್ ವ್ಯಸನಕ್ಕೆ ದಾಸನಾದ ವೈದ್ಯನೋರ್ವ ಸರ್ಕಾರಿ ಆಸ್ಪತ್ರೆ ಆವರಣದಲ್ಲೇ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.

The doctor who was under the influence of drugs undressed and walked naked in the hospital akb
Author
First Published Mar 11, 2024, 12:06 PM IST

ಮುಂಬೈ: ಡ್ರಗ್ ವ್ಯಸನಕ್ಕೆ ದಾಸನಾದ ವೈದ್ಯನೋರ್ವ ಸರ್ಕಾರಿ ಆಸ್ಪತ್ರೆ ಆವರಣದಲ್ಲೇ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.  ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ( ಪ್ರಸ್ತುತ ಛತ್ರಪತಿ ಸಂಭಾಜಿನಗರ ಜಿಲ್ಲೆ) ಆಸ್ಪತ್ರೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 

ಕೆಲ ಮೂಲಗಳ ಪ್ರಕಾರ,  ಡ್ರಗ್‌ ವ್ಯಸನಕ್ಕೆ ತುತ್ತಾಗಿರುವ 45 ವರ್ಷದ ವೈದ್ಯ ಬಿಡ್ಕಿನ್ ಗ್ರಾಮಾಂತರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಡ್ರಗ್‌ ವ್ಯಸನಕ್ಕೆ ತುತ್ತಾಗಿರುವ ಈತ ಡ್ರಗ್ ಸೇವಿಸಿ ಅದರ ಅಮಲಿನಲ್ಲಿ ಆಸ್ಪತ್ರೆ ಆವರಣದಲ್ಲಿ ಬೆತ್ತಲಾಗಿ ಓಡಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈ ಜಿಲ್ಲೆಯ ಆರೋಗ್ಯ ಸೇವೆಗಳ ಮುಖ್ಯಸ್ಥರೂ ಆಗಿರುವ ಜಿಲ್ಲಾ ಸಿವಿಲ್ ಸರ್ಜನ್ ಡಾಕ್ಟರ್ ದಯಾನಂದ ಮೊಟಿಪವ್ಲೆ, ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಆರೋಪಿ ತಪ್ಪಿತಸ್ಥ ಎಂದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಒಮ್ಮೆ ಡ್ರಗ್‌ ವ್ಯಸನಕ್ಕೆ ತುತ್ತಾದರೆ ಅದರಿಂದ ಹೊರ ಬರುವುದು ಬಹಳ ಕಷ್ಟದ ಕೆಲಸ. ಮೈ ಮೇಲೆ ಮನಸ್ಸಿನ ಮೇಲೆ ಸ್ವಾಧೀನ ಕಳೆದುಕೊಂಡ ಡ್ರಗ್ ವ್ಯಸನಿಗಳು ರಾಕ್ಷಸರಂತೆ ವರ್ತಿಸುತ್ತಾರೆ. ಜೊತೆಗೆ ಏನೂ ಮಾಡುವುದಕ್ಕೂ ಹೇಸುವುದಿಲ್ಲ.  ಭಾರತದಲ್ಲಿ ವೈದ್ಯಕೀಯ ಅಗತ್ಯಗಳ ಹೊರತಾಗಿ ಡ್ರಗ್ ಅನ್ನು ಸಂಗ್ರಹಿಸುವಂತಿಲ್ಲ, ಸೇವಿಸುವಂತೆಯೂ ಇಲ್ಲ, ಆದರೂ ಹಲವೆಡೆ ಡ್ರಗ್ ಮುಕ್ತವಾಗಿ ದೊರಕುತ್ತಿದ್ದೆ, ಇತ್ತೀಚೆಗೆ ವಿದ್ಯಾರ್ಥಿಯೋರ್ವ ಡ್ರಗ್ ಚಾಕೋಲೇಟ್‌ನಷ್ಟೇ ಸುಲಭವಾಗಿ ಕೆಲವೆಡೆ ಸಿಗುತ್ತಿವೆ ಎಂದು ಹೇಳಿದ ವೀಡಿಯೋವೊಂದು ವೈರಲ್ ಆಗಿತ್ತು. 

ಇತ್ತೀಚೆಗಷ್ಟೇ ಮಾದಕ ವ್ಯಸನ ನಿಗ್ರಹ ದಳವೂ ತಮಿಳುನಾಡಿನ ಸಿನಿಮಾ  ನಿರ್ಮಾಪಕ, ಡಿಎಂಕೆ ನಾಯಕ ಜಾಫರ್ ಸಾದಿಕ್‌ನನ್ನು 2000 ಕೋಟಿ ಮೊತ್ತದ ಡ್ರಗ್ ಪ್ರಕರಣದಲ್ಲಿ ಬಂಧಿಸಿದೆ. ಈತನ ವಿರುದ್ಧ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಆಗಿದ್ದು, ನ್ಯೂಜಿಲ್ಯಾಂಡ್, ಮಲೇಷ್ಯಾ ಆಸ್ಟ್ರೇಲಿಯಾಗಳಿಗೂ ಭಾರತದಿಂದ ಡ್ರಗ್ ಪೂರೈಕೆ ಮಾಡಿದ ಆರೋಪವಿದೆ. 

Follow Us:
Download App:
  • android
  • ios