ರಕ್ಷಣಾ ಕ್ಷೇತ್ರದಲ್ಲಿ ದೇಶ ಸಂಪೂರ್ಣ ಸಶಕ್ತವಾಗಿದೆ. ಎಂತಹ ಕ್ಷೀಪಣಿ ಬಂದರೂ ಅದನ್ನು ಕೂಡಲೇ ಹೊಡೆದುರುಳಿಸುವ ಸಾಮರ್ಥ್ಯ ಭಾರತಕ್ಕಿದೆ. ನಮ್ಮ ರಕ್ಷಣಾ ತಂತ್ರಜ್ಞಾನ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಲೇ ಇದೆ ಎಂದು ಭಾರತೀಯ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರ ಡಾ. ಜಿ. ಸತೀಶ ರೆಡ್ಡಿ ತಿಳಿಸಿದರು.

ಹುಬ್ಬಳ್ಳಿ (ನ.13) : ರಕ್ಷಣಾ ಕ್ಷೇತ್ರದಲ್ಲಿ ದೇಶ ಸಂಪೂರ್ಣ ಸಶಕ್ತವಾಗಿದೆ. ಎಂತಹ ಕ್ಷೀಪಣಿ ಬಂದರೂ ಅದನ್ನು ಕೂಡಲೇ ಹೊಡೆದುರುಳಿಸುವ ಸಾಮರ್ಥ್ಯ ಭಾರತಕ್ಕಿದೆ. ನಮ್ಮ ರಕ್ಷಣಾ ತಂತ್ರಜ್ಞಾನ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಲೇ ಇದೆ ಎಂದು ಭಾರತೀಯ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರ ಡಾ. ಜಿ. ಸತೀಶ ರೆಡ್ಡಿ ತಿಳಿಸಿದರು.

ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಯೋಟೆಕ್ನಾಲಜಿ ಸಭಾಭವನದಲ್ಲಿ ಶನಿವಾರ ನಡೆದ ಡಿಫೆನ್ಸ್‌ ಟೆಕ್‌ಕನೆಕ್ಟ್ನಲ್ಲಿ ‘ಆತ್ಮನಿರ್ಭರ ಯೋಜನೆಯಡಿ ಶಸಾಸ್ತ್ರ ಉತ್ಪಾದನೆಯಲ್ಲಿ ನವೋದ್ಯಮಿಗಳು ಹಾಗೂ ಸಣ್ಣ ಕೈಗಾರಿಕೆಗಳ (ಎಂಎಸ್‌ಎಇ) ಪಾತ್ರ: ತಂತ್ರಜ್ಞಾನ ಮತ್ತು ಆವಿಷ್ಕಾರ ಕುರಿತು ಸಂವಾದದಲ್ಲಿ ಅವರು ನೀಡಿದರು. ಐಐಟಿಯಿಂದ ಹೊರಬರುವ ಶೇ.75ರಷ್ಟುವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಿದ್ದರು. ಆದರೆ ಇಂದು ವಿದ್ಯಾರ್ಥಿಗಳು ದೇಶದಲ್ಲೇ ಉಳಿದು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರು ಸ್ಟಾರ್ಚ್‌ಅಪ್‌ಗಳ ಮೂಲಕ ಇನ್ನಷ್ಟುಹೊಸ ಆವಿಷ್ಕಾರ ಮಾಡುವ ಮೂಲಕ ದೇಶ ಕಟ್ಟಬೇಕು ಎಂದು ಕರೆ ನೀಡಿದರು.

ಮೇಕ್‌ ಇನ್‌ ಇಂಡಿಯಾ: ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಮಂತ್ರ..!

ಎಲ್ಲರನ್ನೂ ಒಳಗೊಳ್ಳುವುದೇ ಆತ್ಮನಿರ್ಭರ ಭಾರತದ ಮೂಲ ಉದ್ದೇಶವಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವಾಗ ನವೋದ್ಯಮಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಇತರ ದೇಶಗಳ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಿಷ್ಕಿ್ರಯಗೊಳಿಸುವ ಸಾಮರ್ಥ್ಯ ನಮ್ಮ ಪಡೆಗಳಿಗೆ ಇದೆಯೇ?, ಶತ್ರು ದೇಶದ ಡ್ರೋನ್‌ಗಳಿಂದ ಉಂಟಾಗುವ ಅಪಾಯವನ್ನು ಎದುರಿಸುವ ಶಕ್ತಿ ಮತ್ತು ತಂತ್ರಜ್ಞಾನ ಭಾರತಕ್ಕೆ ಇದೆಯೇ? ವಿದ್ಯಾರ್ಥಿಗಳು ಹತ್ತು ಹಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಅವರು ಉತ್ತರಿಸಿದರು.

ನವೋದ್ಯಮಿಗಳು ಎಲ್ಲ ಬಗೆಯ ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗುವುದಕ್ಕೆ ಪೂರಕ ಕಾನೂನು ರೂಪಿಸಲಾಗಿದೆ. ಈಗಾಗಲೇ 75 ಸಾವಿರ ನವೋದ್ಯಮಿಗಳು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಕ್ಷಣಾ ಉತ್ಪನ್ನ ಉತ್ಪಾದಿಸುವ ನವೋದ್ಯಮಿಗಳಿಗೆ ‘ತಂತ್ರಜ್ಞಾನ ಅಭಿವೃದ್ಧಿ ಯೋಜನೆ’ಯಡಿ ಎಲ್ಲ ನೆರವು ನೀಡಲಾಗುತ್ತಿದೆ ಎಂದರು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಪ್ರಕಾಶ ತಿವಾರಿ, ಡಾ. ಬಿ.ಎಲ್‌. ದೇಸಾಯಿ, ಡಾ. ಉಮಾ ಮುದೇನಗುಡಿ ಹಾಗೂ ಶಿವಯೋಗಿ ತುಮರಿ ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

370ನೇ ವಿಧಿ ಮುಗಿದ ಅಧ್ಯಾಯ, ಗಿಲ್ಗಿಟ್‌-ಬಾಲ್ಟಿಸ್ತಾನ ಸೇರುವವರೆಗೆ ಯಾತ್ರೆ ನಿಲ್ಲೋದಿಲ್ಲ: ರಾಜನಾಥ್‌ ಸಿಂಗ್‌!

ಆಟೋಎಕ್ಸ್‌ಪೋ

ಕೆಎಲ್‌ಇ ಮೆಕ್ಯಾನಿಕಲ್‌ ವಿಭಾಗವು ತನ್ನ ಕ್ಯಾಂಪಸ್‌ನಲ್ಲಿ ಆಟೋಎಕ್ಸೊ$್ಪೕ- 2022ನ್ನು ಆಯೋಜಿಸಿತ್ತು. 50ಕ್ಕೂ ಹೆಚ್ಚು ಸುದ್ದಿ ಬ್ರ್ಯಾಂಡ್‌ ಬೈಕ್‌ ಮತ್ತು ವಿವಿಧ ತಂತ್ರಜ್ಞಾನದ 20 ಕಾರುಗಳನ್ನು ಪ್ರದರ್ಶಿಸಲಾಗಿದೆ. ನೂರಾರು ವಿದ್ಯಾರ್ಥಿಗಳು ಕುತೂಹಲದಿಂದ ಹೊಸ ವಾಹನ ವೀಕ್ಷಿಸಿದರು.