ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ/ ದೇಶದ ಇತಿಹಾಸದಲ್ಲಿ ಹೊಸ ಶಕೆ ಆರಂಭ/ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ

ನವದೆಹಲಿ (ಆ.05) ಅಯೋಧ್ಯೆಯಲ್ಲಿ ಭವ್ಯ ರಾಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಹೊಸ ಶಕೆಯ ಆರಂಭ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಕೊರೋನಾ ಸೋಂಕಿನ ಕಾರಣ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಶಾ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇಂದು ಇಡೀ ಭಾರತವೇ ಹೆಮ್ಮೆ ಪಡುವ ದಿನ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಮಯ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಯವರ ನಾಯಕತ್ವದಿಂದ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ. ಭಾರತದ ಇತಿಹಾಸ ಮತ್ತು ಸಂಪ್ರದಾಯ ಕಾಪಾಡಲು ಮೋದಿಮಸರ್ಕಾರ ಯಾವಾಗಲೂ ಬದ್ಧವಾಗಿರುತ್ತದೆ ಎಂದಿದ್ದಾರೆ.

ಮುಸ್ಲಿಮರಿಗೆ ಭಿಕ್ಷೆ ಯಾಕೆ ಕೊಟ್ರಿ? ಆಗ GPRS ಇತ್ತಾ? ರಜಾಕ್ ವಾದ!

ಭಗವಾನ್ ಶ್ರೀ ರಾಮನ ಆದರ್ಶಗಳು ಮತ್ತು ಆಲೋಚನೆಗಳು ಭಾರತದ ಆತ್ಮದಲ್ಲಿ ನೆಲೆಸಿದೆ. ರಾಮನ ಪಾತ್ರ ಮತ್ತು ಜೀವನದ ತತ್ತ್ವ ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದೆ. ರಾಮ ದೇವಾಲಯದ ನಿರ್ಮಾಣದೊಂದಿಗೆ, ಈ ಮಂಗಳ ಪುಣ್ಯಭೂಮಿ ತನ್ನ ಸಂಪೂರ್ಣ ವೈಭವದಿಂದ ಜಗತ್ತಿನಲ್ಲಿ ಮತ್ತೆ ಕಂಗೊಳಿಸಲಿದೆ ಎಂದು ಶಾ ಹೇಳಿದ್ದಾರೆ.

ಶತಮಾನದ ಕನಸು ನನಸಾಗಿದೆ. ಸುಪ್ರೀಂ ಕೋರ್ಟ್ ತರ್ಪು ನೀಡಿದ ನಂತರ ರಾಮಮಂದಿರ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿತ್ತು. 

Scroll to load tweet…
Scroll to load tweet…