Farm Laws Repeal: ಸರ್ಕಾರ ಕದನ ವಿರಾಮ ಘೋಷಿಸಿದೆ, ನಾವಲ್ಲ : ಸಂಯುಕ್ತ ಕಿಸಾನ್‌ ಮೋರ್ಚಾ!

*ಇತರ ಬೇಡಿಕೆ ಕುರಿತು ಮಾತುಕತೆ: ಸರ್ಕಾರಕ್ಕೆ ರೈತರ ಆಗ್ರಹ
*ಗೆಜೆಟ್‌ ಘೋಷಣೆ ಬಳಿಕ ಮೋದಿ ಮಾತು ನಂಬುತ್ತೇವೆ
*ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತುಕತೆ ಪುನಾರಂಭಿಸಿ
*ನಮ್ಮ ಹೋರಾಟ ಮುಂದುವರಿಕೆ: ಕಿಸಾನ್‌ ಮೋರ್ಚಾ
*ಲಖನೌ ಕಿಸಾನ್‌ ಪಂಚಾಯತ್‌ನಲ್ಲಿ ಕೇಂದ್ರದ ವಿರುದ್ಧ ಕಿಡಿ

The agitation will not stop until many of our issues will be resolved said Rakesh Tikait mnj

ಲಖನೌ (ನ.23): ಕೇಂದ್ರ ಸರ್ಕಾರವು 3 ಕೃಷಿ ಕಾಯ್ದೆಗಳನ್ನು ರದ್ದು ಮಾಡುವ (Farm Laws Repealed) ಘೋಷಣೆ ಮಾಡಿದರೆ ಸಾಲದು. ಗೆಜೆಟ್‌ ಪ್ರಕಟಣೆ (Gazette Notification) ಆದ ನಂತರವೇ ಸರ್ಕಾರದ ಮಾತು ನಂಬುತ್ತೇವೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ (Samyukth Kisan Morcha) ತನ್ನ ಪಟ್ಟನ್ನು ಪುನರುಚ್ಚರಿಸಿದೆ. ಇದೇ ವೇಳೆ, ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ಸರ್ಕಾರ ಮಾತುಕತೆ ಪುನರಾಂಭಿಸಬೇಕು. ಒಂದು ಬೇಡಿಕೆ ಈಡೇರಿದ ಮಾತ್ರಕ್ಕೆ ಉಳಿದ ಬೇಡಿಕೆಗಳನ್ನು ಕೈಬಿಟ್ಟಂತಲ್ಲ. ಸರ್ಕಾರ ಕದನವಿರಾಮ ಘೋಷಿಸಿದೆಯೇ ವಿನಾ ನಾವಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅದು ಎಚ್ಚರಿಸಿದೆ.

ಲಖನೌನಲ್ಲಿ ಸೋಮವಾರ (ನ.22) ನಡೆದ ಕಿಸಾನ್‌ ಮಹಾಪಂಚಾಯತ್‌ನಲ್ಲಿ (Kisan Mahapanchayat) ರೈತ ನಾಯಕರಾದ ರಾಕೇಶ್‌ ಟಿಕಾಯತ್‌ (Rakesh Tikait), ಜೋಗಿಂದರ್‌ ಸಿಂಗ್‌ ಉಗಾರಹಾ, ಮೊದಲಾದವರು ಮಾತನಾಡಿದರು. ‘ಸರ್ಕಾರ ಕದನ ವಿರಾಮ ಪ್ರಕಟಿಸಿದೆ ಹೊರತು ನಾವಲ್ಲ. ಕೆಲವೇ ರೈತರು ಮಸೂದೆಗಳ ಬಗ್ಗೆ ಅಸುಂತುಷ್ಟರಾಗಿದ್ದಾರೆ ಎಂಬ ಮೋದಿ (Narendra Modi) ಹೇಳಿಕೆ ಖಂಡನೀಯ. ಇದು ರೈತರಲ್ಲಿ ಒಡಕು (Dividing Farmers) ಸೃಷ್ಟಿಸುವ ಯತ್ನ. ಮೋದಿ ಅವರು ಕನಿಷ್ಠ ಬೆಂಬಲ ಬೆಲೆ ಜಾರಿಗೆ ಕಾನೂನು ರೂಪಿಸಬೇಕು. ಖುದ್ದು ಮುಖ್ಯಮಂತ್ರಿಯಾಗಿದ್ದಾಗ ಈ ಬೇಡಿಕೆಯನ್ನು ಮೋದಿ ಇರಿಸಿದ್ದರು. ಆದರೆ ಇಂದು ದಿಲ್ಲಿಯ (Delhi) ಮಿಂಚುವ ಬಂಗಲೆಗಳಲ್ಲಿ ಕುಳಿತಿರುವವರ ಭಾಷೆಯೇ ಬೇರೆ ಇದೆ. ಕೂಡಲೇ ಸರ್ಕಾರ ಮಾತುಕತೆ ಪುನಾರಂಭಿಸಬೇಕು’ ಎಂದು ಪ್ರಧಾನಿ ಬಗ್ಗೆ ರೈತ ನಾಯಕ ರಾಕೇಶ್‌ ಟಿಕಾಯತ್‌ ಕಿಡಿಕಾರಿದರು.

Parliament ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದರೆ ₹93 ಲಕ್ಷ : ಪ್ರತ್ಯೇಕತಾವಾದಿ ಸಂಘಟನೆಯ ಆಫರ್‌!

‘ಗೆಜೆಟ್‌ ಅಧಿಸೂಚನೆ ಹೊರಬೀಳುವವರೆಗೆ ಕೃಷಿ ಕಾಯ್ದೆ ರದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯನ್ನು ನಂಬುವುದಿಲ್ಲ. ಜತೆಗೆ ರೈತರ ಮೇಲೆ ದೌರ್ಜನ್ಯ ನಡೆಸಿದ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಕೈಬಿಡಬೇಕು’ ಎಂದು ಜೋಗಿಂದರ್‌ ಆಗ್ರಹಿಸಿದರು.

Parliament ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದರೆ ₹93 ಲಕ್ಷ

ಕಳೆದ ಜ.26ರಂದು ಕೃಷಿ ಕಾಯ್ದೆ ವಿರೋಧಿ (Farm Bills Protest) ರೈತ ಹೋರಾಟದ ವೇಳೆ ಕೆಂಪುಕೋಟೆಯ (Red Fort) ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎನ್ನಲಾದ ಪ್ರತ್ಯೇಕ ಖಲಿಸ್ತಾನ (Khalistan) ಪರ ಸಂಘಟನೆಯಾದ ಸಿಖ್‌ ಫಾರ್‌ ಜಸ್ಟೀಸ್‌(Sikhs for Justice) ಇದೀಗ ಸಂಸತ್‌ ಭವನಕ್ಕೆ (Parliament) ಮುತ್ತಿಗೆ ಹಾಕುವಂತೆ ರೈತರಿಗೆ ಕರೆಕೊಟ್ಟಿದೆ. ಅಲ್ಲದೆ ನ.29ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದ (Winter Session) ಅವಧಿಯಲ್ಲಿ ಸಂಸತ್‌ ಭವನದ (Parliament) ಮೇಲೆ ಖಲಿಸ್ತಾನ ಧ್ವಜವನ್ನು ಹಾರಿಸಿದವರಿಗೆ 93 ಲಕ್ಷ ರು.(1.25 ಲಕ್ಷ ಡಾಲರ್‌) ಬಹುಮಾನ ನೀಡುವುದಾಗಿ ಘೋಷಿಸಿದೆ.

ಜಿನೆವಾದಿಂದ ವಿಡಿಯೋ ಹೇಳಿಕೆ ಬಿಡುಗಡೆ!

ಈ ಕುರಿತು ಜಿನೆವಾದಿಂದ ವಿಡಿಯೋ ಹೇಳಿಕೆ (Video statement) ಬಿಡುಗಡೆ ಮಾಡಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗುರ್‌ಪಾವಂತ್‌ ಸಿಂಗ್‌ ಪನ್ನೂನ್‌ (Gurpatwant Singh Pannun), ‘ಭಾರತದ ಸ್ವಾತಂತ್ರ್ಯಕ್ಕೆ ನಡೆದ ಹೋರಾಟದ ವೇಳೆ ಭಗತ್‌ಸಿಂಗ್‌ ಸಂಸತ್‌ ಮೇಲೆ ಬಾಂಬ್‌ ದಾಳಿ ನಡೆಸಿದ್ದರು. ಇದೀಗ ಪಂಜಾಬ್‌ನ ಸ್ವಾತಂತ್ರ್ಯಕ್ಕಾಗಿ ರೈತರು ಸಂಸತ್‌ ಭವನದ ಮೇಲೆ ಖಲಿಸ್ತಾನಿ ಧ್ವಜ ಹಾರಿಸುವಂತೆ ಕರೆ ಕೊಡುತ್ತಿದ್ದೇವೆ’ ಎಂದು ಹೇಳಿದ್ದಾನೆ. ಜೊತೆಗೆ ಸಂಸತ್‌ ಅಧಿವೇಶನದ ಮೊದಲ ದಿನ ಸಂಸತ್ತಿಗೆ ಮುತ್ತಿಗೆ ಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ರೈತ ಸಮುದಾಯಕ್ಕೆ ಕರೆ ಕೊಟ್ಟಿದ್ದಾನೆ.

Latest Videos
Follow Us:
Download App:
  • android
  • ios