Asianet Suvarna News Asianet Suvarna News

Record: ಸೂರ್ಯಂಗೆ ಟಾರ್ಚಾ? 1 ಗಂಟೆ ಸೂರ್ಯನ ದಿಟ್ಟಿಸಿ ದಾಖಲೆ ಬರೆದ 70ರ ವೃದ್ಧ

ನೀವು ಸೂರ್ಯನನ್ನು ಬರಿಗಣ್ಣಿನಿಂದ ಒಂದು ಗಂಟೆ ಕಾಲ ನೋಡಬಹುದೇ. ಖಂಡಿತ ಸಾಧ್ಯವಿಲ್ಲ ಎಂದು ಹೇಳುವಿರಿ. ಆದರೆ ಮಥುರಾದ 70 ವರ್ಷದ ವ್ಯಕ್ತಿಯೊಬ್ಬರು ಸೂರ್ಯನನ್ನು 1 ಗಂಟೆ ಕಾಲ ನೇರವಾಗಿ ದಿಟ್ಟಿಸಿ ನೋಡಿ ಸಾಧನೆ ಮಾಡಿದ್ದಾರೆ. 

The 70-year-old set the national record for 1 hour in front of the sun akb
Author
Mathura, First Published Nov 30, 2021, 6:54 PM IST

ಮಥುರಾ(ನ.30): ವಯ್ಸಸ್ಸು 70 ದಾಟುತ್ತಿದ್ದಂತೆ ಬಹುತೇಕರಿಗೆ ದೃಷ್ಟಿ ಮಂದವಾಗುವುದು, ಕಣ್ಣಿನಲ್ಲಿ ಪೊರೆ ಬರುವುದು ಕಣ್ಣು ಸಂಪೂರ್ಣ ಕಾಣಿಸದೇ ಆಗುವುದು ಮುಂತಾದ ಸಮಸ್ಯೆಯಿಂದ ಅನೇಕರು ಬಳಲುತ್ತಿರುತ್ತಾರೆ. ಆದರೆ ಇಲ್ಲೊಬ್ಬರು 70 ವರ್ಷದ ವ್ಯಕ್ತಿ ತಮ್ಮ ಈ ಇಳಿ ವಯಸ್ಸಿನಲ್ಲೂ 1 ಗಂಟೆ ಕಾಲ ಸೂರ್ಯನನ್ನು ದಿಟ್ಟಿಸಿ ನೋಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಮಥುರಾದ ಯೋಗಿರಾಜ್‌ ಕೃಷ್ಣಾ(Yogiraj Krishna) ನಗರದ ನಿವಾಸಿಯಾಗಿರುವ ಎಂ.ಎಸ್‌. ವರ್ಮಾ( MS Verma) ಎಂಬುವವರೇ ಇಂತಹ ಸಾಧನೆ ಮಾಡಿದ ವ್ಯಕ್ತಿ. ಕಳೆದ 20 ವರ್ಷಗಳಿಂದ ಅವರು ಈ ಸಾಧನೆಯನ್ನು ಮಾಡುತ್ತಿದ್ದು, ಇವರು ತಮ್ಮ ಗುರುವಿನಿಂದ ಪ್ರೇರಣೆಗೊಳಗಾಗಿದ್ದಾರಂತೆ. 

ಮಥುರಾದ ಸೇಲ್ಸ್‌ ಹಾಗೂ ವ್ಯಾಪಾರ ತೆರಿಗೆ ವಿಭಾಗದ ಡೆಪ್ಯೂಟಿ ಕಮೀಷನರ್‌(Deputy Commissioner Sales Tax) ಆಗಿ ನಿವೃತ್ತಿ ಹೊಂದಿರುವ ಎಂ.ಎಸ್‌. ವರ್ಮಾ ಅವರು  ಕಣ್ಣು ಮಿಟುಕಿಸದೇ ಸೂರ್ಯನನ್ನು ಒಂದು ಗಂಟೆ ಕಾಲ ನೋಡಬಲ್ಲರು. ಹೀಗೆ ನೋಡಿಯೂ ಅವರ ಕಣ್ಣುಗಳು ಯಾವುದೇ ಹಾನಿಗೊಳಗಾಗದೆ ಆರೋಗ್ಯಪೂರ್ಣವಾಗಿಯೇ ಇವೆ.  ಜಿಲ್ಲಾ ಆಸ್ಪತ್ರೆಯ ವೈದ್ಯ ಸಚಿನ್‌ ಶರ್ಮಾ(Sachin Sharma)ಎಂ.ಎಸ್‌. ವರ್ಮಾ ಅವರ ಕಣ್ಣುಗಳನ್ನು ತಪಾಸಣೆ ಮಾಡಿ ಆರೋಗ್ಯವಾಗಿವೆ ಎಂಬುದನ್ನು ಖಚಿತಪಡಿಸಿದ್ದಾರೆ.

ಈಜು ಚಾಂಪಿಯನ್‌ಶಿಪ್‌: ಶ್ರೀಹರಿ ನಟರಾಜ್ ಮತ್ತೆ ರಾಷ್ಟ್ರೀಯ ದಾಖಲೆ

ಎಂ.ಎಸ್‌ ವರ್ಮಾ ಅವರು ಈ ದಾಖಲೆ ನಿರ್ಮಿಸುವ ವೇಳೆ ಜಾಗತಿಕ ಸಂಶೋಧನಾ ಪ್ರತಿಷ್ಠಾನ(Global Research Foundation) ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು. ಬರಹಗಾರರು ಹಾಗೂ ರಾಜಕೀಯ ಮುಖಂಡರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವರ್ಮಾ ಅವರಿಗೆ ಶುಭಾಶಯ ತಿಳಿಸಿದರು. ವಯಸ್ಸು 70 ದಾಟುತ್ತಿದ್ದಂತೆ ಅನೇಕರಿಗೆ ದೃಷ್ಟಿ ಮಂಜಾಗಿ ಕಣ್ಣು ಕಾಣಿಸದಂತಾಗುತ್ತದೆ. ಆದರೆ ವರ್ಮಾ ಈ ಇಳಿ ವಯಸ್ಸಿನಲ್ಲಿ ಇಂತಹದೊಂದು ಸಾಧನೆ ಮಾಡಿದ್ದು, ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. 

ಪ್ರಾರಂಭದಲ್ಲಿ ಇವರು ತಮ್ಮ ಕಣ್ಣುಗಳನ್ನು ಲ್ಯಾಂಪ್‌ನ ಬೆಳಕಿಗೆ ಒಡ್ಡುತ್ತಿದ್ದರು.  ನಂತರ ಕ್ರಮೇಣ ಸೂರ್ಯನನ್ನು ಕೂಡ ಬರಿಗಣ್ಣಿನಿಂದ ನೋಡಲು ಶುರು ಮಾಡಿದರು. ಆದರೆ ಈಗ ಅವರು ಸೂರ್ಯನನ್ನು ಕೇವಲ 1 ಗಂಟೆಗಿಂತಲೂ ಹೆಚ್ಚು ಕಾಲ ಕಣ್ಣು ಮಿಟುಕಿಸದೇ ನೋಡಬಲ್ಲರು. ಭಾನುವಾರ ವರ್ಮಾ ಈ ಸಾಧನೆ ಮಾಡಿದ್ದು, ಈ ವೇಳೆ ಈ ದಾಖಲೆಯ ಮೇಲುಸ್ತುವಾರಿ ವಹಿಸಿದ್ದ ತಂಡದ ಸದಸ್ಯರೇ ಒಂದು ಗಂಟೆಯ ನಂತರ ವರ್ಮಾ  ಅವರನ್ನು ತಡೆದರು. ಇಲ್ಲದಿದ್ದರೆ ವರ್ಮಾ ಇನ್ನು ಹೆಚ್ಚು ಕಾಲ ಸೂರ್ಯನನ್ನು ನೋಡುವವರಿದ್ದರು. 

1500 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಹರ್ಮಿಲನ್‌ ಕೌರ್‌

ತಮ್ಮ ದಾಖಲೆ ಬಳಿಕ ಮಾತನಾಡಿದ ವರ್ಮಾ, ನನಗೆ ಗಿನ್ನಿಸ್‌ ದಾಖಲೆಗೆ ಸೇರುವಂತೆ ಜನ ಪ್ರೋತ್ಸಾಹಿಸಿದರು.  ಜಗತ್ತಿನಲ್ಲಿ ಯಾರು ಬೇಕಾದರೂ, ಯಾವಾಗ ಬೇಕಾದರು ನನ್ನೊಂದಿಗೆ ಸ್ಪರ್ಧಿಸಬಹುದು ಎಂದು ಸವಾಲು ಹಾಕಿದರು.  ಈ ಸಾಧನೆಯನ್ನು ಯೋಗದ ತಾಂತ್ರಿಕ ಸಾಧನೆ ಎಂದು ಬಣ್ಣಿಸಿದರು. ಅಲ್ಲದೇ ಯೋಗಿ ರಾಜ್‌ ಕೃಷ್ಣ(Yogi Raj Krishna) ಅವರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ. ಅವರು ಮಥುರಾದ ಹೆಸರನ್ನು ವಿಶ್ವಾದ್ಯಂತ ಬೆಳಗಿಸಲಿದ್ದಾರೆ  ಎಂದು ವರ್ಮಾ ಹೇಳಿದರು. 

ಇವರ ಈ ಸಾಧನೆ ಆಗುವುದಕ್ಕೂ ಮೊದಲು 2019ರಲ್ಲಿ ಪ್ರದೀಪ್‌ ಬೆಳಗಾವಿ( Pradeep Belagavi) ಎಂಬುವವರು ಸೂರ್ಯನನ್ನು ಕಣ್ಣು ಮಿಟುಕಿಸದೇ 10 ನಿಮಿಷಗಳ ಕಾಲ ದಿಟ್ಟಿಸಿ ನೋಡಿ ದಾಖಲೆ ಬರೆದಿದ್ದರು. ಆದರೆ ವರ್ಮಾ ಈಗ ಪ್ರದೀಪ್‌ ಸಾಧನೆಯನ್ನು ಮುರಿದಿದ್ದಾರೆ. 

Follow Us:
Download App:
  • android
  • ios