* 60ನೇ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದ ಹರ್ಮಿಲನ್‌ ಕೌರ್‌ ಬೈನ್ಸ್‌* ಹರ್ಮಿಲನ್‌ ಕೌರ್‌ ಬೈನ್ಸ್‌ 1500 ಮೀಟರ್ ಸ್ಪರ್ಧೆಯಲ್ಲಿ ದಾಖಲೆಯ ಚಿನ್ನದ ಪದಕ ಜಯಿಸಿದ್ದಾರೆ* 4:05.39 ಸೆಕೆಂಡ್‌ನಲ್ಲಿ 1500 ಮೀಟರ್ ಗುರಿ ತಲುಪಿದ ಹರ್ಮಿಲನ್‌ ಕೌರ್‌ ಬೈನ್ಸ್‌

ವಾರಂಗಲ್‌(ಸೆ.17): ಇಲ್ಲಿ ನಡೆಯುತ್ತಿರುವ 60ನೇ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ ಹರ್ಮಿಲನ್‌ ಕೌರ್‌ ಬೈನ್ಸ್‌ 1500 ಮೀಟರ್ ಓಟದ ಸ್ಪರ್ಧೆಯಲ್ಲಿ 19 ವರ್ಷ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದು, ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಗುರುವಾರ ನಡೆದ ಸ್ಪರ್ಧೆಯಲ್ಲಿ 19 ವರ್ಷದ ಕೌರ್‌ 4:05.39 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದರೊಂದಿಗೆ 2002ರ ಏಷ್ಯನ್‌ ಗೇಮ್ಸ್‌ನಲ್ಲಿ ಸುನಿತಾ ರಾಣಿ ನಿರ್ಮಿಸಿದ್ದ (4:06.03 ಸೆಕೆಂಡ್‌) ದಾಖಲೆಯನ್ನು ಮುರಿದರು. ಇದರ ಜೊತೆಗೆ 2006ರಲ್ಲಿ ಓಪಿ ಜೈಶಾ(4:11.83 ಸೆಕೆಂಡ್‌) ನಿರ್ಮಿಸಿದ್ದ ಕೂಟ ದಾಖಲೆಯನ್ನು ಕೌರ್‌ ಮುರಿದರು. ಆದರೆ 2022ರ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಲು ಕೌರ್‌ ವಿಫಲರಾದರು. ಇದಕ್ಕಾಗಿ ಅವರು 4:04.20 ನಿಮಿಷದಲ್ಲಿ ಗುರಿ ತಲುಪಬೇಕಿತ್ತು.

Scroll to load tweet…
Scroll to load tweet…

ಪುರುಷರ ವಿಭಾಗ 1500 ಮೀ. ಓಟದಲ್ಲಿ ಹರ್ಯಾಣದ ಪರ್ವೇಜ್‌ ಖಾನ್‌, 2 ಬಾರಿಯ ಏಷ್ಯಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಪದಕ ವಿಜೇತ ಅಜಯ್‌ ಕುಮಾರ್‌ರನ್ನು ಹಿಂದಿಕ್ಕಿ ಗೆಲುವು ಸಾಧಿಸಿದರು.

100 ಮೀ. ಓಟದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನರೇÍ …ಕುಮಾರ್‌ 10.30 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ದೆಹಲಿಯ ತರನ್‌ಜೀತ್‌ ಕೌರ್‌ 11.50 ಸೆಕೆಂಡ್‌ಗಳಲ್ಲಿ ಕ್ರಮಿಸಿ ಸ್ವರ್ಣ ಜಯಿಸಿದರು.