ಒಂದಲ್ಲ, ಎರಡಲ್ಲ ಛತ್ತೀಸ್‌ಗಢದ ಬಸ್ತಾರ್‌ನಲ್ಲಿನ ಈ ವೈದ್ಯಕೀಯ ಕಾಲೇಜಿನಲ್ಲಿ ಇರವ ಇಲಿಗಳಿಗೆ ಲೆಕ್ಕವಿಲ್ಲ. ಇಲಿಗಳ ಸಮಸ್ಯೆಯಿಂದ ಬೇಸತ್ತು ಹೋಗಿರುವ ಆಸ್ಪತ್ರೆಯ ಆಡಳಿತ ಮಂಡಳಿ, ಇಲಿಗಳನ್ನು ಕೊಲ್ಲಲು ಟೆಂಡರ್‌ ಕರೆದಿದೆ. ಟೆಂಡರ್‌ ತೆಗೆದುಕೊಂಡಿರುವ ಈ ಕಂಪನಿಗೆ ಪ್ರತಿ ದಿನ 50 ರಿಂದ 60 ಇಲಿಗಳನ್ನು ಕೊಲ್ಲುವ ಟಾರ್ಗೆಟ್‌ ಕೂಡ ನೀಡಲಾಗಿದೆ. 

ಬಸ್ತಾರ್‌ (ಜುಲೈ 29): ಛತ್ತೀಸ್‌ಗಢದ ಬಸ್ತಾರ್‌ ಎಂದಾಗ ಎಲ್ಲರಿಗೂ ಸರ್ವೇಸಹಜವಾಗಿ ನೆನಪಾಗುವುದು ನಕ್ಸಲರ ಉಪಟಳದಿಂದ. ಆದರೆ, ಈಗ ಬಸ್ತಾರ್‌ ವಿಶೇಷ ಕಾರಣಕ್ಕೆ ಸುದ್ದಿಯಲ್ಲಿದೆ. ಬಸ್ತಾರ್‌ನ ವೈದ್ಯಕೀಯ ಕಾಲೇಜನ್ನು ಅಂದಾಜು 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಇಡೀ ವೈದ್ಯಕೀಯ ಕಾಲೇಜಿಗೆ ಸಮಸ್ಯೆಯಾಗಿ ಕಾಡಿರುವುದು ಇಲಿಗಳು. ಇತ್ತೀಚೆಗೆ, ಇಲಿಗಳು ಆಸ್ಪತ್ರೆಯಲ್ಲಿದ್ದ ಸಿಟಿ ಸ್ಕ್ಯಾನ್‌ ಯಂತ್ರದ ಪ್ರಮುಖ ವೈರ್‌ ಅನ್ನು ಕತ್ತರಿಸಿತ್ತು. ಇದರಿಂದಾಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಯಾವ ರೋಗಿಗಳ ಸಿಟಿ ಸ್ಕ್ಯಾನ್‌ ಮಾಡಲು ಸಾಧ್ಯವಾಗಿರಲಿಲ್ಲ. ಇನ್ನು ರೋಗಿಗಳಿ ಕೊಡುತ್ತಿರುವ ಗೋಳನ್ನು ಹೇಳೋಕೆ ಸಾಧ್ಯವಿಲ್ಲ. ರೋಗಿಗೆ ಗ್ಲುಕೋಸ್‌ ಇಂಜೆಕ್ಟ್‌ ಮಾಡಿ ಹೋಗಿದ್ದರೆ, ಅದು ರೋಗಿಯ ದೇಹಕ್ಕಿಂತ ಇಲಿಯ ಹೊಟ್ಟೆಗೆ ಹೋಗುತ್ತಿದ್ದವು. ಈವರೆಗೂ ಬರೋಬ್ಬರಿ 1500 ಇಲಿಗಳನ್ನು ಕೊಲ್ಲಲಾಗಿದೆಯಂತೆ. ಹಾಗಂತ, ಇಲ್ಲಿನ ಸಿಬ್ಬಂದಿಗಳು ಇವುಗಳನ್ನು ಕೊಂದಿದ್ದಲ್ಲ. ಇಲಿಗಳ ಸಮಸ್ಯೆಗೆ ಹೆದರಿ ಆಸ್ಪತ್ರೆಯ ಆಡಳಿತ ಮಂಡಳಿ ಇಲಿಗಳನ್ನು ಕೊಲ್ಲೋದಕ್ಕೆ ಟೆಂಡರ್‌ ಆಹ್ವಾನ ಮಾಡಿತ್ತು. ಇದಕ್ಕಾಗಿ 10 ರಿಂದ 12 ಲಕ್ಷ ರೂಪಾಯಿ ಟೆಂಡರ್‌ ಅನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕರೆದಿದೆ. 1500 ಇಲಿಗಳನ್ನು ಈವರೆಗೂ ಕೊಂದಿದ್ದರೂ, ಇನ್ನೂ 5-6 ಸಾವಿರ ಇಲಿಗಳು ಇದೆ ಎಂದು ಅಂದಾಜು ಮಾಡಲಾಗಿದೆ.

50-60 ಇಲಿಗಳ ಸಾವು: ಈ ಇಲಿಗಳನ್ನು ಆಸ್ಪತ್ರೆಯ ಆವರಣದಲ್ಲಿಯೇ ಸಮಾಧಿ ಮಾಡಲಾಗಿದೆ. ಒಟ್ಟಾರೆ ಆಸ್ಪತ್ರೆಯ ಮ್ಯಾನೇಜ್‌ಮೆಂಟ್ ಮಾಡಿರುವ ಅಂದಾಜಿನ ಪ್ರಕಾರ 5-6 ಸಾವಿರ ಇಲಿಗಳನ್ನು ಕೊಲ್ಲಲು ಇನ್ನೂ ಒಂದು ನಾಲ್ಕು ತಿಂಗಳು ಬೇಕಾಗಬಹುದು ಎಂದಿದ್ದಾರೆ. ಬೃಹತ್‌ ಆಗಿರುವ ಈ ಮೆಡಿಕಲ್‌ ಕಾಲೇಜಿನಲ್ಲಿ ಇಲಿಗಳನ್ನು ಕೊಲ್ಲುವ ಕೆಲಸ ಸುಲಭವಲ್ಲ. ಇಲಿಗಳನ್ನು ಟೆಂಡರ್‌ ಪಡೆದುಕೊಂಡಿರುವ ಖಾಸಗಿ ಕಂಪನಿಯೊಂದು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಆದರೆ, ದೊಡ್ಡ ಮೆಡಿಕಲ್‌ ಕಾಲೇಜು ಆಗಿರುವುದರಿಂದ ದಿನವೊಂದಕ್ಕೆ 50-60 ಇಲಿಗಳನ್ನು ಮಾತ್ರವೇ ಕೊಲ್ಲಲು ಸಾಧ್ಯವಾಗುತ್ತಿದೆ. ಇದಕ್ಕಾಗಿ 6 ಸದಸ್ಯರ ತಂಡವನ್ನು ನಿಯೋಜನೆ ಮಾಡಲಾಗಿದೆ. ಮುನ್ನೆಚ್ಚರಿಕೆ ವಹಿಸಿರುವ ಈ ತಂಡ ಸ್ಥಳದಿಂದ ಸ್ಥಳಕ್ಕೆ ತೇಪೆಗಳನ್ನು ತಯಾರಿಸಿ ಅಲ್ಲಿ ಇಲಿ ಔಷಧ ಹಾಕುತ್ತಿದೆ. ಬೇಯರ್ ಕೇಕ್, ಬಲೆ ಮತ್ತು ಬಾಕ್ಸ್, ಅಂಟು ಸಹ ಬಳಸಲಾಗುತ್ತದೆ. ಪ್ರತಿದಿನ 50-60 ಇಲಿಗಳು ಸಾಯುತ್ತಿವೆ ಎಂದು ವೈದ್ಯಕೀಯ ಕಾಲೇಜು ಅಧೀಕ್ಷಕ ಟಿಕು ಸಾಹು ತಿಳಿಸಿದ್ದಾರೆ.

5 ರಿಂದ 6 ಸಾವಿರ ಇಲಿಗಳಲ್ಲಿ ಇರುವ 1500 ಇಲಿಗಳನ್ನು ಕೊಂದರೂ ಸಮಸ್ಯೆಗಳು ಕಡಿಮೆಯಾಗಿಲ್ಲ. ಇಲಿಗಳು ಇನ್ನೂ ರೋಗಿಗಳಿಗೆ ತೊಂದರೆ ನೀಡುತ್ತಿವೆ. ವಾರ್ಡ್‌ನಲ್ಲಿ ದಾಖಲಾದ ರೋಗಿಗಳ ಹಾಸಿಗೆಗಳನ್ನು ಕಡಿದುಹಾಕುತ್ತಿದೆ.. ಗ್ಲೂಕೋಸ್ ಬಾಟಲಿಗಳು ಸೇರಿದಂತೆ ಔಷಧಗಳು, ರೋಗಿಗಳ ಸಾಮಾನುಗಳು ಕೂಡ ಹಾಳಾಗುತ್ತಿವೆ. ಇದರ ವಿಡಿಯೋ ಕೂಡ ಹೊರಬಿದ್ದಿದೆ.

ಪುಟ್ಟ ಬಾಲಕನ ಜಾನಪದ ಹಾಡಿಗೆ ಪೊಲೀಸರು ಫಿದಾ: ವಿಡಿಯೋ ವೈರಲ್

10 ಲಕ್ಷಕ್ಕೆ ಟೆಂಡರ್‌ ಪಡೆದುಕೊಂಡ ಮಕೌ ಮ್ಯಾನೇಜ್‌ಮೆಂಟ್‌: ಸ್ಥಳೀಯ ಮಕೌ ಮ್ಯಾನೇಜ್‌ಮೆಂಟ್‌ 10 ಲಕ್ಷ ರೂಪಾಯಿಗೆ ಇದರ ಟೆಂಡರ್‌ ಅನ್ನು ಖರೀದಿ ಮಾಡಿದೆ. ಆಸ್ಪತ್ರೆಯಲ್ಲಿ ನಿಯೋಜನೆಗೊಂಡಿರುವ ವೈದ್ಯರು ಮತ್ತು ಸ್ಟಾಫ್ ನರ್ಸ್‌ಗಳಿಗೆ ಸಹಾಯವಾಣಿ ಸಂಖ್ಯೆಯನ್ನು ಸಹ ನೀಡಲಾಗಿದ್ದು, ಅದರಲ್ಲಿ ಇಲಿ ಕಂಡ ತಕ್ಷಣ ಸಹಾಯವಾಣಿಗೆ ಕರೆ ಮಾಡಬೇಕು. ಆ ಬಳಿಕ ಕೆಲವೇ ಸಮಯದಲ್ಲಿ ಟೆಂಡರ್‌ ಪಡೆದುಕೊಂಡಿರುವ ಕಂಪನಿಯ ಸಿಬ್ಬಂದಿ ಸ್ಥಳಕ್ಕೆ ಬಂದು ಇಲಿಯನ್ನು ಕೊಲ್ಲಲಿದ್ದಾರೆ. ಆಸ್ಪತ್ರೆಯ ಸೀಲಿಂಗ್‌ಗಳ ಸಮೀಪವಿರುವ ಪೈಪ್‌ಗಳ ಸಹಾಯದಿಂದ ಹತ್ತುವ ಇಲಿಗಳು, ತಮ್ಮ ಕೆಲಸ ಮುಗಿಸಿ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತವೆ.

ಎಮ್ಮೆಗಳಿಂತ ಕಡಿಮೆ ದರಕ್ಕೆ ಸಿಂಹಗಳನ್ನು ಖರೀದಿ ಮಾಡ್ಬಹುದು.. ಆಫರ್‌ ಪಾಕಿಸ್ತಾನದಲ್ಲಿ ಮಾತ್ರ!

ನಾನು ಇಲ್ಲಿಗೆ ಬಂದ ದಿನದಿಂದಲೂ ಇಲಿಗಳನ್ನು ಕೊಲ್ಲೋದೆ ನನ್ನ ಪ್ರಮುಖ ಗುರಿಯಾಗಿತ್ತು. ಸತ್ತ ಇಲಿಗಳನ್ನು ಆಸ್ಪತ್ರೆಯ ಸಮೀಪದಲ್ಲಿಯೇ ದೊಡ್ಡ ಗುಂಡಿ ಮಾಡಲಾಗಿದ್ದು, ಅಲ್ಲಿ ಸಮಾಧಿ ಮಾಡುತ್ತೇವೆ ಎಂದು ಅಧೀಕ್ಷಕ ಟಿಕು ಸಾಹು ಹೇಳಿದ್ದಾರೆ.