ನವದೆಹಲಿ(ಅ. 31) ಫ್ರಾನ್ಸ್ ನಲ್ಲಿ ಪದೇ ಪದೇ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ಬಗ್ಗೆ ಲೇಖಕಿ ತಸ್ಲೀಮಾ ನಸ್ರೀನ್ ಮಾತನಾಡಿದ್ದಾರೆ.

ಎರಡು ತಿಂಗಳ ಅವಧಿಯಲ್ಲಿ ಮೂರು ಸಾರಿ ಭಯೋತ್ಪಾದಕ ದಾಳಿ ಆಗಿರುವ ಬಗ್ಗೆ ತಸ್ಲೀಮಾ ಆಘಾತ ವ್ಯಕ್ತಪಡಿಸಿದ್ದಾರೆ. ಶಿಕ್ಷಕನ ಶಿರಚ್ಛೇದ ಮಾಡಿದ ಘಟನೆಗೂ ವಿಷಾದ ಎಂದಿದ್ದಾರೆ.

ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮುಂಬೈನಲ್ಲಿ ಪ್ರತಿಭಟನೆ; ಎಲ್ಲಿಗೆ ಬಂತಲ್ಲ ಕಾಲ

ನನಗೆ ನಿಜಕ್ಕೂ ಆಘಾತವಾಗಿದೆ. ಇಸ್ಲಾಂನಲ್ಲಿ ಪುನರುಜ್ಜೀವನ ಆಗಬೇಕಿದೆ  ಧಾರ್ಮಿಕ ನಂಬಿಕೆ ಹೆಸರಿನಲ್ಲಿ ಮಕ್ಕಳಿಗೆ ಬೇರೆ ವಿಚಾರ ತುಂಬುವುದು ನಿಲ್ಲಬೇಕು. ಮನೆ , ಮಸೀದಿ ಮತ್ತುಮ ಮದರಸಾಗಳು ಬೇರೆ ಆಯಾಮದಲ್ಲಿ ಯೋಚನೆ ಮಾಡಬೇಕಿದೆ. ಮಕ್ಕಳಿಗೆ ಸರಿ ಮತ್ತು ತಪ್ಪು ಯಾವುದು ಎಂಬುದನ್ನು ತಿಳಿಸಿಕೊಡಬೇಕಿದೆ ಎಂದು ಲೇಖಕಿ ಹೇಳಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಇಸ್ಲಾಂ ಹೊಂದಾಣಿಕೆಯಾಗುತ್ತಿಲ್ಲ. ಮಹಿಳೆಯರ ಹಕ್ಕುಗಳು, ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ.