ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮುಂಬೈನಲ್ಲಿ ಪ್ರೊಟೆಸ್ಟ್! ಭಯೋತ್ಪಾದಕ ಕೃತ್ಯ ಎಂದಿದ್ದೆ ತಪ್ಪಾ?
ಫ್ರಾನ್ಸ್ ನಲ್ಲಿ ಹಿಂಸಾತ್ಮಕ ಘಟನೆ/ ಭಯೋತ್ಪಾದಕರ ಕೃತ್ಯ ಎಂದಿದ್ದ ಫ್ರಾನ್ಸ್ ಅಧ್ಯಕ್ಷ/ ಮೋದಿ ಸಹ ವಿಷಾದ ವ್ಯಕ್ತಪಡಿಸಿದ್ದರು/ ಆದರೆ ಮುಂಬೈನಲ್ಲಿ ಫ್ರಾನ್ಸ್ ಅಧ್ಯಕ್ಷರ ವಿರುದ್ಧವೇ ಪ್ರತಿಭಟನೆ
ಮುಂಬೈ( ಅ 30) ಮುಂಬೈನ ಭೇಂಡಿ ಬಜಾರ್ ರಸ್ತೆಗಳ ತುಂಬಾ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಲ್ ಮಾಕ್ರೋನ್ ಪೋಸ್ಟರ್ ಗಳು. ಇದೊಂದು ಪ್ರತಿಭಟನೆ.
ಫ್ರಾನ್ಸ್ ನಲ್ಲಿ ನಡೆದ ಘಟನೆಯನ್ನು ಇಸ್ಲಾಮಿಕ್ ಟೆರರ್ ಅಟ್ಯಾಕ್ ಎಂದು ಫ್ರಾನ್ಸ್ ಅಧ್ಯಕ್ಷರು ಹೇಳಿದ್ದು ಅದಾದ ಮೇಲೆ ಪ್ರಧಾನಿ ನತರೇಂಧ್ರ ಮೋದಿ ವಿಷಾದ ವ್ಯಕ್ತಪಡಿಸಿದ ನಂತರ ಮುಂಬೈನಲ್ಲಿ ಪ್ರತಿಭಟನೆಯೊಂದು ನಡೆದಿದೆ.
ಮುಸ್ಲಿಮರು ಜಾಸ್ತಿ ಇರುವ ಪ್ರದೇಶ ಇದಾಗಿದ್ದು ನ ರಸ್ತೆ ತುಂಬಾ ಇಮ್ಯಾನುಲ್ ಮಾಕ್ರೋನ್ ಪೋಸ್ಟರ್ ಗಳನ್ನು ಹಾಕಿ ಅದರ ಮೇಲೆ ವಾಹನ ಚಲಾಯಿಸಲಾಗಿದೆ.
ಶಿಕ್ಷಕನ ತಲೆ ಕತ್ತರಿಸಿದ ಭಯೋತ್ಪಾದಕ
ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ, ಮಹಾರಾಷ್ಟ್ರದ ಉದ್ಧವ್ ಸರ್ಕಾರ ತಮ್ಮ ಜಾಗದಲ್ಲಿ ಫ್ರಾನ್ಸ್ ಅಧ್ಯಕ್ಷರಿಗೆ ಅವಮಾನವಾಗುತ್ತಿದ್ದರೂ ಸುಮ್ಮನೆ ಏಕೆ ಕುಳಿತಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ನೊಂದಿಗೆ ಭಾರತ ಇರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಪ್ರವಾದಿ ಪೈಗಂಬರ್ ಕ್ಯಾರಿಕೇಚರ್ ತೋರಿಸಿದ ಎಂಬ ಕಾರಣಕ್ಕೆ ಶಿಕ್ಷಕರೊಬ್ಬರನ್ನು ಫ್ರಾನ್ಸ್ ನಲ್ಲಿ ಹತ್ಯೆ ಮಾಡಲಾಗಿತ್ತು. ಇನ್ನೊಂದು ಕಡೆ ಅಮಾಯಕರ ಮೇಲೆ ಗುಂಡಿನ ದಾಳಿ ನಡೆದಿತ್ತು. ಫ್ರಾನ್ಸ್ ನಲ್ಲಿ ನಡೆದ ಹಿಂಸಾತ್ಮಕ ಘಟನೆಗೆ ಭಾರತ ವಿಷಾದ ವ್ಯಕ್ತಪಡಿಸಿದ ನಂತರ ಭಾರತದಲ್ಲಿಯೇ ಪ್ರತಿಭಟನೆ ನಡೆದಿದೆ.