ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗಂಭೀರ ಭಯೋತ್ಪಾದಕ ದಾಳಿಯೊಂದು ನಡೆದಿದ್ದು, ಕಾಶ್ಮೀರದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ದಾಳಿಯಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 26 ಜನರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗಂಭೀರ ಭಯೋತ್ಪಾದಕ ದಾಳಿಯೊಂದು ನಡೆದಿದ್ದು, ಕಾಶ್ಮೀರದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ದಾಳಿಯಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 26 ಜನರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯ ಪರಿಣಾಮವಾಗಿ, ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅನೇಕ ಪ್ರವಾಸಿಗರು ತಮ್ಮ ರಜಾದಿನ ಯೋಜನೆಗಳನ್ನು ರದ್ದುಗೊಳಿಸಿ ಹಿಂತಿರುಗುತ್ತಿದ್ದಾರೆ. ಈ ಹಿನ್ನೆಲೆ ಕತ್ರಾ ರೈಲು ನಿಲ್ದಾಣದಲ್ಲಿ ಜನಸಂದಣಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ವಿಶೇಷ ರೈಲು ಘೋಷಣೆ
ಭಯೋತ್ಪಾದಕರ ದಾಳಿಯಿಂದಾಗಿ ಮಾತಾ ವೈಷ್ಣೋದೇವಿ ಯಾತ್ರೆಯ ಮೇಲೂ ಪರಿಣಾಮ ಬೀರಿದ್ದು, ಕತ್ರಾ ರೈಲು ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದೆ. ಹಲವು ಯಾತ್ರಿಕರು ಮತ್ತು ಪ್ರವಾಸಿಗರು ಹಿಂತಿರುಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಭಾರತೀಯ ರೈಲ್ವೆ ಇಂದು ರಾತ್ರಿ (ಏಪ್ರಿಲ್ 23, 2025) ಮಾತಾ ವೈಷ್ಣೋದೇವಿ ಕತ್ರಾದಿಂದ ನವದೆಹಲಿಗೆ ವಿಶೇಷ ಏಕಮುಖ ರೈಲು ಓಡಿಸಲಿದೆ. ಈ ರೈಲಿನಲ್ಲಿ 7 ಜನರಲ್ ಕೋಚ್‌ಗಳು, 8 ಸ್ಲೀಪರ್ ಕೋಚ್‌ಗಳು, 2 ಥರ್ಡ್ ಎಸಿ, 1 ಥರ್ಡ್ ಎಸಿ ಎಕಾನಮಿ ಕೋಚ್ ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಕೋಚ್‌ಗಳಿರುತ್ತವೆ.
ಇದನ್ನೂ ಓದಿ:'ಮಮ್ಮಿ ನನಗೆ ಏನೂ ಬೇಡ, ಪಪ್ಪ ಎಲ್ಲಿ..' ಪಹಲ್ಗಾಮ್ ದಾಳಿ ಎಷ್ಟು ಭೀಕರ ಈ ವಿಡಿಯೋ ನೋಡಿ!
ವೈಷ್ಣೋದೇವಿ ಯಾತ್ರಿಕರ ಸಂಖ್ಯೆಯ ಮೇಲೆ ಪರಿಣಾಮ
ಪ್ರತಿ ವರ್ಷ ಲಕ್ಷಾಂತರ ಭಕ್ತರು ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. 2024 ರಲ್ಲಿ 94.80 ಲಕ್ಷ ಮತ್ತು 2023 ರಲ್ಲಿ 95.22 ಲಕ್ಷ ಯಾತ್ರಿಕರು ದೇವಸ್ಥಾನಕ್ಕೆ ಆಗಮಿಸಿದ್ದರು. 2012 ರಲ್ಲಿ ದಾಖಲೆಯ 1.04 ಕೋಟಿ ಭಕ್ತರು ಭೇಟಿ ನೀಡಿದ್ದರು. ಆದರೆ, ಪಹಲ್ಗಾಮ್ ದಾಳಿಯಿಂದಾಗಿ ಈ ವರ್ಷ ಯಾತ್ರಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.
ದೇವಾಲಯದಲ್ಲಿ ಕಟ್ಟುನಿಟ್ಟಿನ ಭದ್ರತೆ
ಮಾತಾ ವೈಷ್ಣೋದೇವಿ ದೇವಸ್ಥಾನದ ಭದ್ರತೆಗಾಗಿ ಸ್ಥಳೀಯ ಪೊಲೀಸರು, ಸಿಆರ್‌ಪಿಎಫ್ ಜವಾನರು, ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯಿಂದ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್‌ಗಳ ಮೂಲಕ ಕಣ್ಗಾವಲು ಮತ್ತು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ.
ಇದನ್ನೂ ಓದಿ:'ಭಾರತಕ್ಕೆ ಈಗ ಒಳ್ಳೇಯ ಟೈಮ್ ಬಂದಿದೆ..' ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
ಪ್ರವಾಸೋದ್ಯಮಕ್ಕೆ ದೀರ್ಘಕಾಲೀನ ಪರಿಣಾಮ
ಬೇಸಿಗೆಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿರುತ್ತದೆ. ಆದರೆ, ಈ ದಾಳಿಯಿಂದಾಗಿ ಮುಂಬರುವ ದಿನಗಳಲ್ಲಿ ಪ್ರವಾಸಿಗರು ತಮ್ಮ ಯೋಜನೆಗಳನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಇದು ಕಾಶ್ಮೀರದ ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಹಿನ್ನಡೆಯಾಗಬಹುದು.
