ನವದೆಹಲಿ(ಆ.06): ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕಾಯುತ್ತಿದ್ದ ಕೋಟ್ಯಾಂತರ ಭಾರತೀಯರ ಸಂಭ್ರಮ ಇಮ್ಮಡಿಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮ ಮಂದಿರದ ಶಿಲನ್ಯಾಸ ನೆರವೇರಿಸುತ್ತಿದ್ದಂತೆ ಇಡೀ ದೇಶವೆ ಸಂತಸದಲ್ಲಿ ತೇಲಾಡಿದೆ. 3 ವರ್ಷದಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಿ ನಿಲ್ಲಲಿದೆ. ಆದರೆ ಭೂಮಿ ಪೂಜೆ ನಡೆದ ಮರುದಿನವೇ ಮುಸ್ಲಿಂ ಮೌಲ್ವಿಯೊಬ್ಬರು ಮಂದಿರ ಕೆಡವಿ ಮತ್ತೆ ಬಾಬ್ರಿ ಮಸೀದಿ ನಿರ್ಮಿಸುವುದಾಗಿ ಎಚ್ಚರಿಸಿದ್ದಾರೆ.

ರಾಮ ಭಕ್ತ ಮುಸ್ಲಿಮರು: ಅಯೋಧ್ಯೆ ಮಂದಿರಕ್ಕಾಗಿ ನಡೆಸಿದ್ದರು ಹೋರಾಟ!

ಆಲ್ ಇಂಡಿಯಾ ಇಮಾಮ್ ಸಂಸ್ಥೆ ಅಧ್ಯಕ್ಷರಾದ ಮೌಲ್ವಿ ಸಾಜಿದ್ ರಶೀದಿ ಇದೀಗ ವಿವಾದ ಸೃಷ್ಟಿಸಿದ್ದಾರೆ. ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿಲ್ಲ. ಖಾಲಿ ಪ್ರದೇಶದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿದೆ. ಆದರೆ ಸುಖಾಸುಮ್ಮನೆ ರಾಮನ ಜನ್ಮಸ್ಥಳ ಎಂದು ಬಾಬ್ರಿ ಮಸೀದಿ ಕಡವಲಾಗಿದೆ. ಇಸ್ಲಾಂನಲ್ಲಿ ಮಸೀದಿ ಯಾವತ್ತು ಮಸೀದಿಯೇ. ಹೀಗಾಗಿ  ಈ ಜಾಗದಲ್ಲಿ ನಿರ್ಮಾಣವಾಗುವ ಮಂದಿರ ಕೆಡವಿ ಮಸೀದಿ ನಿರ್ಮಿಸುತ್ತೇವೆ ಎಂದು ಸಾಜಿದ್ ರಶೀದಿ ಹೇಳಿದ್ದಾರೆ.

 

ಅಯೋಧ್ಯೆಯಲ್ಲಿ ನೆಲೆಸಿದೆ ಕಲಿಯುಗ ರಾಮನ 5 ಕುಟುಂಬಗಳು..!.

ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ನಿಯಮ ಉಲ್ಲಂಘಿಸಿ ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಮಸೀದಿಯನ್ನು ಕಡೆವಿ ಬೆರೇಡೆ ನಿರ್ಮಿಸಲು ಸಾಧ್ಯವಿಲ್ಲ. ಎಲ್ಲಿ ಮಸೀದಿ ಇತ್ತೋ ಅಲ್ಲೆ ಕಟ್ಟಬೇಕು. ಮಸೀದಿಯನ್ನು ಧ್ವಂಸ ಮಾಡುವ ಪರಿಪಾಠ ಇಸ್ಲಾಂನಲ್ಲಿ ಇಲ್ಲ ಎಂದು ಸಾಜಿದ್ ರಶೀದ್ ಹೇಳಿದ್ದಾರೆ.

2019ರ ನವೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಾಮ ಜನ್ಮ ಭೂಮಿ ವಿವಾದಕ್ಕೆ ಅಂತ್ಯ ಹಾಡಿತ್ತು. ಎಲ್ಲಾ ಆಧಾರಗಳ ಪರಿಶೀಲಿಸಿದ ಬಳಿಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ವಿವಾದಿತ ಶ್ರೀ ರಾಮ ಜನ್ಮ ಸ್ಥಳವಿರುವ 2.7 ಏಕರೆ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.