Asianet Suvarna News Asianet Suvarna News

UP New CM ಯೋಗಿ ಪ್ರಮಾಣವಚನಕ್ಕೆ ಬರುವವರಿಗೆ ಪೂಜೆ,ಬಾವುಟ ಕಡ್ಡಾಯ!

  • ಬಿಜೆಪಿ ಕಾರ‍್ಯಕರ್ತರಿಗೆ ಮಹತ್ವದ ಸೂಚನೆ, ಪೂಜಾ ಕೈಂಕರ್ಯ ಕಡ್ಡಾಯ
  • ಪಕ್ಷದ ಧ್ವಜವನ್ನು ವಾಹನದ ಮೇಲೆ ಹಾರಿಸಿಕೊಂಡು ಬರಲು ಸೂಚನೆ
  • ಸಿಎಂ ಬಸವರಾಜ್ ಬೊಮ್ಮಾಯಿಗೆ ಆಹ್ವಾನ ನೀಡಿದ ಯೋಗಿ
Temple Puja Party flag must for Party Workers grand swearing in ceremony of Yogi Adityanath Uttar Pradesh ckm
Author
Bengaluru, First Published Mar 22, 2022, 4:54 AM IST | Last Updated Mar 22, 2022, 4:54 AM IST

ಲಖನೌ(ಮಾ.22): ಉತ್ತರ ಪ್ರದೇಶದಲ್ಲಿ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಯೋಗಿ ಆದಿತ್ಯನಾಥ್‌(Yogi Adityanath) ಮತ್ತು ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ‍್ಯಕ್ರಮಕ್ಕೆ ಭಾಗವಹಿಸಲು ಇಚ್ಛಿಸುವ ಬಿಜೆಪಿ ಕಾರ‍್ಯಕರ್ತರು(BJP Party Workers) ಸಮಾರಂಭಕ್ಕೂ ಮೊದಲು ದೇಗುಲಗಳಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಯೇ ಪಕ್ಷದ ಧ್ವಜವನ್ನು ವಾಹನದ ಮೇಲೆ ಹಾರಿಸಿಕೊಂಡು ಬರಲು ಸೂಚಿಸಲಾಗಿದೆ. ಪ್ರತಿ ಕ್ಷೇತ್ರಗಳಿಂದ ಇಬ್ಬರು ಕಾರ‍್ಯಕರ್ತರಿಗೆ ಆಹ್ವಾನ ನೀಡಲಾಗಿದೆ. 

ಅಲ್ಲದೆ ಲೇಖಕರು, ವೃತ್ತಿಪರರು, ವೈದ್ಯರು, ಸಂತರು, ಧಾರ್ಮಿಕ ಮುಖಂಡರನ್ನೂ ಕಾರ‍್ಯಕ್ರಮಕ್ಕೆ ಆಹ್ವಾನಿಸುವಂತೆ ಸ್ಥಳೀಯ ನಾಯಕರಿಗೆ ಪಕ್ಷ ಸೂಚಿಸಿದೆ. ಇದೇ ಶುಕ್ರವಾರ (ಮಾ.25)ದಂದು ಉತ್ತರ ಪ್ರದೇಶದ ಇಸ್ಕಾನ್‌ ಸ್ಟೇಡಿಯಂನಲ್ಲಿ ಅದ್ಧೂರಿ ಪ್ರಮಾಣ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಆಡಳಿತವಿರುವ ರಾಜ್ಯ ಮುಖ್ಯಮಂತ್ರಿಗಳು ಸೇರಿ ಹಲವು ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

ಮಾ.24ರಂದು ಉತ್ತರ ಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ಸಭೆ!

ಪ್ರಮಾಣವಚನ: ಬೊಮ್ಮಾಯಿಗೆ ಯೋಗಿ ಆಹ್ವಾನ 
ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೋಮವಾರ ಕರೆ ಮಾಡಿ 25ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಸವರಾಜ ಬೊಮ್ಮಾಯಿ ಅಂದು ಲಖನೌಗೆ ತೆರಳಲಿದ್ದಾರೆ ಎನ್ನಲಾಗಿದೆ.

ರಾಷ್ಟ್ರವಾದಕ್ಕೆ ಸಿಕ್ಕಿದ ಗೆಲವು: ಪೂಂಜ
ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲವನ್ನು ಕಂಡಿರುವುದು ಇದು ರಾಷ್ಟ್ರವಾದಕ್ಕೆ ಸಿಕ್ಕಿದ ಗೆಲವು ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅಭಿಪ್ರಾಯಪಟ್ಟಿದ್ದಾರೆ.ರಾಷ್ಟ್ರೀಯ ವಿಚಾರಧಾರೆಯನ್ನು ಇಟ್ಟುಕೊಂಡು ಬಿಜೆಪಿ ಮಾಡಿದ ಕೆಲಸ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಜನ ಬಿಜೆಪಿಗೆ ಗೆಲವು ಕೊಟ್ಟಿದ್ದಾರೆ. ಗೋವಾದಲ್ಲಿ ಮನೋಹರ್‌ ಪರಿಕ್ಕರ್‌ ಬಳಿಕ ಸಾವಂತ್‌ ಉತ್ತಮ ಕೆಲಸ ನಿರ್ವಹಿಸಿದ ಪರಿಣಾಮ ಗೋವಾದಲ್ಲಿ ಸ್ಪಷ್ಟಬಹುಮತ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅಭಿವೃದ್ಧಿ ಮತ್ತು ಜನಪರ ಕಾಳಜಿಗೆ ಜನ ಎರಡನೇ ಬಾರಿ ಅಧಿಕಾರವನ್ನು ಕೊಟ್ಟಿದ್ದಾರೆ. ಮಣಿಪುರ ಅನೇಕ ಮಿತ್ರಪಕ್ಷಗಳನ್ನೊಳಗೊಂಡು ಆಡಳಿತ ನಡೆಸಿ ಅಭಿವೃದ್ಧಿ ಮಾಡಿದ ಫಲ ಈ ಬಾರಿ ಬಿಜೆಪಿಗೆ ಸ್ಪಷ್ಟಬಹುಮತ ನೀಡಿದೆ. ಉತ್ತರಾಖಂಡದಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರವನ್ನು ಮತದಾರರು ನೀಡಿದ್ದಾರೆ. ಈ ಜಯ ರಾಷ್ಟ್ರದ ವಿಶ್ವ ನಾಯಕರಾದಂತಹ ನರೇಂದ್ರ ಮೋದಿ ಅವರ ಅಭಿವೃದ್ಧಿ ಮತ್ತು ಅವರ ಜನಪರ ನಾಯಕತ್ವಕ್ಕೆ ಸಿಕ್ಕಿದ ಗೆಲವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುಪಿ ಸಿಎಂ ಆಗಿ ಯೋಗಿ ಮಾರ್ಚ್ 25ಕ್ಕೆ ಪ್ರಮಾಣವಚನ: 200 ವಿಐಪಿಗಳು, 45 ಸಾವಿರ ಜನ ಭಾಗಿ ನಿರೀಕ್ಷೆ!

ಮ್ಯಾಜಿಕ್‌ ಮಾಡಿದ ಮೋದಿ ಚರಿಷ್ಮಾ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸಾಕಷ್ಟುಜನಪ್ರಿಯರು. ಆದರೂ ಪ್ರಧಾನಿ ಮೋದಿಯನ್ನೇ ಬಿಜೆಪಿ ಈ ಚುನಾವಣೆಯ ಮುಖವನ್ನಾಗಿಸಿತ್ತು. 198 ಕ್ಷೇತ್ರಗಳಲ್ಲಿ ಸ್ವತಃ ಮೋದಿ ಪ್ರಚಾರ ಮಾಡಿದ್ದರು. ಚುನಾವಣಾ ಪ್ರಣಾಳಿಕೆಯಿಂದ ಹಿಡಿದು ಪೋಸ್ಟರ್‌ಗಳವರೆಗೆ ಎಲ್ಲೆಡೆ ಮೋದಿ ಫೋಟೋ ದೊಡ್ಡದಾಗಿರುತ್ತಿತ್ತು. ಹೀಗಾಗಿ ಯೋಗಿ ಆಡಳಿತದ ವಿರುದ್ಧ ಇದ್ದ ಕೆಲ ವಿರೋಧಿ ಅಲೆಗಳು ಮೋದಿ ಅಲೆಯಲ್ಲಿ ಕೊಚ್ಚಿಹೋದವು.

ಮೋದಿ ಮತ್ತು ಅಮಿತ್‌ ಶಾ ಜೋಡಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೆ ಪ್ರತಿಯೊಂದು ಚುನಾವಣೆಯನ್ನೂ ಬಹಳ ಗಂಭೀರವಾಗಿ ಪರಿಗಣಿಸುತ್ತಾ ಬಂದಿದೆ. ಇದು 2014ರ ನಂತರ ಬಿಜೆಪಿಯು ಒಂದು ಪಕ್ಷವಾಗಿ ಚುನಾವಣೆಗಳನ್ನು ಎದುರಿಸುವ ವಿಧಾನವನ್ನೇ ಬದಲಿಸಿದೆ. ಈ ಅಂಶ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದ ಚುನಾವಣೆಗಳಲ್ಲೂ ಪ್ರಮುಖವಾಗಿ ಕೆಲಸ ಮಾಡಿದೆ.

Latest Videos
Follow Us:
Download App:
  • android
  • ios