ಮಾ. 25ರಂದು ಯೋಗಿ ಆದಿತ್ಯನಾಥ್ ಪ್ರಮಾಣವಚನ ಮಾ. 24ರಂದು ಸಿಎಂ ಔಪಚಾರಿಕೆ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ಲಕ್ನೋ(ಮಾ.21): ಮಾ.25ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೂ ಒಂದು ದಿನ ಮುಂಚೆ ಮಾ. 24ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಅಂದು ಯೋಗಿ ಅವರನ್ನು ಮುಖ್ಯಮಂತ್ರಿ ಎಂದು ಔಪಚಾರಿಕವಾಯಿ ಚುನಾಯಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮಾ. 25ರಂದು 2ನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಪ್ರಮಾಣವಚನ ಸ್ವೀಕರಿಸುತ್ತಿದ್ದು ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಜೆ.ಪಿ. ನಡ್ಡಾ ಸೇರಿದಂತೆ 200ಕ್ಕೂ ಅಧಿಕ ಮಂದಿ ವಿಐಪಿಗಳು ಭಾಗವಹಿಸುವ ಸಾಧ್ಯತೆಯಿದೆ. ಕಾರ್ಯಕ್ರಮವು ಅಟಲ್‌ ಬಿಹಾರಿ ವಾಜಪೇಯಿ ಎಕ್‌ನಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 403 ಸ್ಥಾನಗಳ ಪೈಕಿ 255 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿದೆ. ಈ ಮೂಲಕ ಸತತ 2ನೇ ಬಾರಿಗೆ ಅಧಿಕಾರ ಉಳಿಸಿಕೊಂಡು ಹೊಸ ಇತಿಹಾಸ ರಚಿಸಿದೆ.

ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

ಯೋಗಿ ಗೆಲುವಿನ ಬಳಿಕ ಯುಪಿಯಲ್ಲಿ ಬುಲ್ಡೋಜರ್‌ ಟ್ಯಾಟೋ ಕಾವು ಜೋರು!
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಗೆಲುವಿನ ಬಳಿಕ ರಾಜ್ಯದಾದ್ಯಂತ ಬುಲ್ಡೋಜರ್‌ ಟ್ಯಾಟೋ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಬಾರಿ ಆದಿತ್ಯನಾಥ್‌ ಮಾಫಿಯಾ ಮತ್ತು ಕ್ರಿಮಿನಲ್‌ಗಳ ಆಸ್ತಿಗಳನ್ನು ಕೆಡವಲು ಬುಲ್ಡೋಜರ್‌ ಅನ್ನು ಬಳಸಿದ್ದರು ಈ ಹಿನ್ನೆಲೆಯಲ್ಲಿ ಯೋಗಿ ಅವರನ್ನು ‘ಬುಲ್ಡೋಜರ್‌ ಬಾಬಾ’ ಎಂದು ಕರೆಯುತ್ತಿದ್ದರು. ಈ ಬಗ್ಗೆ ಸಮಾಜವಾದಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ನಾವು ಈ ಹಿಂದೆ ಅವರನ್ನು ‘ಬಾಬಾ ಮುಖ್ಯಮಂತ್ರಿ’ ಎಂದು ಕರೆಯುತ್ತಿದೆವು ಆದರೆ ಈಗ ಪ್ರತಿಷ್ಠಿತ ಆಂಗ್ಲ ಪತ್ರಿಕೆಯೊಂದು ಅವರನ್ನು ‘ಬುಲ್ಡೋಜರ್‌ ಬಾಬಾ’ ಎಂದು ಕರೆದಿದೆ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿದ್ದರು. ಹೀಗಾಗಿ ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ರಾಜ್ಯದ ಹಲವೆಡೆ ಬಿಜೆಪಿ ನಾಯಕರು ಬುಲ್ಡೋಜರ್‌ ಬಳಸಿ ರಾರ‍ಯಲಿ ನಡೆಸಿದ್ದರು. ಅದರ ಬೆನ್ನಲ್ಲೇ ಇದೀಗ ಕೈಮೇಲೆ ಬುಲ್ಡೋಜರ್‌ ಟ್ಯಾಟೂ ಹಾಕಿಸಿಕೊಳ್ಳುವ ಕಾವು ಹೆಚ್ಚಿದೆ.

ಯೋಗಿ ಪ್ರಮಾಣವಚನ, 45 ಸಾವಿರ ಮಂದಿಗೆ ಆಮಂತ್ರಣ: ರಾಗಾ, ಸೋನಿಯಾ, ಅಖಿಲೇಶ್‌ಗೂ ಆಹ್ವಾನ!

ಮೋದಿ, ನಡ್ಡಾ, ಶಾ ಭೇಟಿ ಮಾಡಿದ ಯೋಗಿ 
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾನುವಾರ ದೆಹಲಿಗೆ ಭೇಟಿ ನೀಡಿದರು. ಒಂದು ದಿನದ ಈ ಭೇಟಿಯ ವೇಳೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡಿದರು. ಈ ವೇಳೆ ಪಕ್ಷದ ಗೆಲುವು, ಸಂಪುಟ ರಚನೆ ಬಗ್ಗೆ ಯೋಗಿ ಸಮಾಲೋಚನೆ ನಡೆಸಿದರು. ಜೊತೆಗೆ ಶೀಘ್ರವೇ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆಯೂ ಯೋಗಿ ಆಹ್ವಾನ ನೀಡಿದರು ಎನ್ನಲಾಗಿದೆ.

ಯೋಗಿ ಆದಿತ್ಯನಾಥ್‌ ಭವಿಷ್ಯ ಪ್ರಧಾನಿ:
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಭಾವಿ ರಾಜಕಾರಣಿ ಆಗಿರುವುದಷ್ಟೇ ಅಲ್ಲ, ಸಂತ ಕುಲಕ್ಕೆ ಭೂಷಣ ಎನಿಸಿದ್ದಾರೆ. ಅವರು ಮುಂದೊಂದು ದಿನ ದೇಶದ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಆ ಸಾಮರ್ಥ್ಯ ಅವರಲ್ಲಿದೆ. ಅವರ ನೇರ, ನಿಷ್ಠುರ ರಾಜಕಾರಣ ಇತರರಿಗೆ ಮಾದರಿಯಾಗಿದೆ ಎಂದರು.ಮಾ.13ರಂದು ಗೋ ಲೋಕದಲ್ಲಿರುವ ಗೋವರ್ಧನ ಗಿರಿಧಾರಿ ದೇವಸ್ಥಾನ ವರ್ಧಂತ್ಯುತ್ಸವ ನಡೆಯಲಿದೆ. ಸಾಮೂಹಿಕ ವಿಷ್ಣು ಪಾರಾಯಣ ಸಮರ್ಪಣೆ, ರಜತ ಕವಚ, ಛತ್ರ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಧರ್ಮಸಭೆ ಹಮ್ಮಿಕೊಳ್ಳಲಾಗಿದೆ. ಭಕ್ತರು, ಗಣ್ಯರು, ವಿವಿಧ ಸಚಿವರು ಭಾಗಿಯಾಗಲಿದ್ದಾರೆ ಎಂದರು.