ದೇವರಿಗೆ ಸಾವಿಲ್ಲ ಎಂಬುದು ಎಲ್ಲರ ನಂಬಿಕೆ| ದೇವರಿಗೂ ಸಾವಿದೆ ಎಂಬುದನ್ನು ಸಾಬೀತುಪಡಿಸುವ ಪ್ರಕರಣ| ದೇವರನ್ನೇ ಸಾಯಿಸಿ ದೇಗುಲದ ಆಸ್ತಿ ಲಪಟಾಯಿಸಿದರು!

ಲಖನೌ(ಫೆ.17): ದೇವರಿಗೆ ಸಾವಿಲ್ಲ ಎಂಬುದು ಎಲ್ಲರ ನಂಬಿಕೆ. ಆದರೆ ದೇವರಿಗೂ ಸಾವಿದೆ ಎಂಬುದನ್ನು ಸಾಬೀತುಪಡಿಸುವ ಪ್ರಕರಣವೊಂದು ಉತ್ತರಪ್ರದೇಶ ಲಖನೌ ಜಿಲ್ಲೆಯ ಮೋಹನ್‌ಲಾಲ್‌ ಗಂಜಿ ನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ 100 ವರ್ಷಗಳ ಇತಿಹಾಸ ಇರುವ ಕೃಷ್ಣ-ರಾಮ ದೇಗುಲದ ಹೆಸರಿನಲ್ಲಿ ಜಮೀನು ಇತ್ತು. ಕೆಲ ದಶಕಗಳ ಹಿಂದೆ ‘ಕೃಷ್ಣರಾಮ್‌’ ಸತ್ತಿದ್ದಾರೆ ಎಂದು ಉಲ್ಲೇಖಿಸಿ ಗಯಾ ಪ್ರಸಾದ್‌ ಎಂಬವರಿಗೆ ಆ ಜಮೀನು ವರ್ಗಾವಣೆಯಾಗಿದೆ. ಗಯಾಪ್ರಸಾದ್‌ ಮರಣದ ನಂತರ ಆ ಭೂಮಿ ಅವರ ಇಬ್ಬರು ಸಹೋದರರಿಗೆ ಹಂಚಿಕೆಯಾಗಿದೆ.

ಗಂಡ ಬೇಕು ಎಂದು ದೇವರಿಗೆ ಬರೆದ ಪತ್ರ ವೈರಲ್

ಇತ್ತೀಚೆಗೆ ದೇವಸ್ಥಾನದ ಟ್ರಸ್ಟಿಗಳ ದೂರಿನ ಅನ್ವಯ ತನಿಖೆ ನಡೆಸಿದಾಗ ಕೃಷ್ಣ-ರಾಮ ಎಂಬ ದೇವರ ಹೆಸರನ್ನು ಮನುಷ್ಯರ ಹೆಸರೆಂದು ಬಿಂಬಿಸಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದ ಅಚ್ಚರಿಯ ವಿಷಯ ಬಯಲಾಗಿದೆ.