ಚಾಮರಾಜನಗರ  (ಫೆ.14):  ಕೌಟುಂಬಿಕ ಕಲಹದಿಂದ ಬೇಸತ್ತು ದೇವರಿಗೆ ಭಕ್ತೆಯರಿಬ್ಬರು ಪತ್ರ ಬರೆದು ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ. 

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ನಾರಾಯಣಸ್ವಾಮಿ ದೇವಸ್ಥಾನದ ಹುಂಡಿಯನ್ನು ಒಡೆದು ಲೆಕ್ಕ ಮಾಡುವಾಗ ಗಂಡನಿಗಾಗಿ ಬರೆದ ಮಹಿಳೆಯರ ಪತ್ರ ದೊರಕಿದೆ. 

ಬಿಟ್ಟೋಗಿರುವ ಗಂಡ ಮನೆಗೆ ಬರುವಂತೆ ದೇವರಿಗೆ ಪ್ರತ್ಯೇಕವಾಗಿ ಇಬ್ಬರು ಮಹಿಳೆಯರು ಪತ್ರ ಬರೆದಿದ್ದಾರೆ.  ಸಂಸಾರದ ಕಲಹ ನಿವಾರಿಸುವಂತೆ ಪತ್ರದ ಮೂಲಕ ದೇವರ ಮೊರೆ ಹೋಗಿದ್ದಾರೆ. 

ನನ್ನ ಗಂಡ ಜಗಳವಾಡಿಕೊಂಡು ಬಿಟ್ಟು ಹೋಗಿದ್ದಾನೆ. ಅವನಿಗೆ ಒಳ್ಳೆ ಬುದ್ಧಿ ಕೊಟ್ಟು ನನ್ನ ಜೊತೆ ಸಂಸಾರ ಮಾಡಲು ಕಳುಹಿಸು ಎಂದು ಬರೆದಿದ್ದಾರೆ. 

ಹುಡುಗಿಯರ ಕಾಟಕ್ಕೆ ಬೇಸತ್ತು ವ್ಯಾಲಂಟೈನ್ಸ್ ಡೇಗೆ ರಜೆ ಬೇಕೆಂದು ಪ್ರಾಂಶುಪಾಲರಿಗೆ ಪತ್ರ ಬರೆದ ವಿದ್ಯಾರ್ಥಿ..!
 
ನಾನು ಹೇಳಿದಂತೆ ನನ್ನ ಗಂಡ ಕೇಳಬೇಕೆಂದು ಪತ್ರದಲ್ಲಿ ದೇಗುಲದ ಹುಂಡಿಯಲ್ಲಿ ಸಿಕ್ಕಿದ ಪತ್ರದಲ್ಲಿ ಪತ್ನಿಯೋರ್ವರು ಬರೆದಿದ್ದಾರೆ.  ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ ಮಹಿಳೆಯರು ಬರೆದ ಪತ್ರ ಇದೀಗ ಎಲ್ಲೆಡೆ ವೈರಲ್ ಆಗಿದೆ.  

ಈ ಹಿಂದೆಯೂ ಇದೇ ರೀತಿ ದೇವರಿಗೆ ಅನೇಕ ರೀತಿಯ ಪತ್ರ ಹಾಗೂ ವಿಚಿತ್ರ ಹರಕೆ ಮಾಡಿರುವುದು ವರದಿಯಾಗಿದ್ದು ಇದೀಗ ಮಹಿಳೆಯರ ಪತ್ರ ವೈರಲ್ ಆಗಿದೆ.