ಹೆಂಡ್ತಿ, ಅತ್ತೆ ಕಾಟ: ಅಮ್ಮನ ದೂರ ಮಾಡಲಾಗದೇ ಸಾವಿಗೆ ಶರಣಾದ ಗಂಡ
ತೆಲಂಗಾಣದ ಹೈದರಾಬಾದ್‌ನಲ್ಲಿ ವಿವಾಹಿತ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದು, ಹೆಂಡತಿ ಹಾಗೂ ಅತ್ತೆ ಮನೆಯವರ ಕಾಟ ತಡೆಯಲಾರದೇ ಆತ ಸಾವಿಗೆ ಶರಣಾಗಿದ್ದಾನೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ವಿವಾಹಿತ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದು, ಹೆಂಡತಿ ಹಾಗೂ ಅತ್ತೆ ಮನೆಯವರ ಕಾಟ ತಡೆಯಲಾರದೇ ಆತ ಸಾವಿಗೆ ಶರಣಾಗಿದ್ದಾನೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. 38 ವರ್ಷದ ವೆಂಕಟ ರೆಡ್ಡಿ ಸಾವಿಗೆ ಶರಣಾದ ವ್ಯಕ್ತಿ, ಜುಲೈ 2 ರಂದು ಕೀಟ ನಾಶಕ ಸೇವಿಸಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದು, ನಂತರ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 5 ರಂದು ಅವರು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈತ ಹೈದರಾಬಾದ್‌ನ (Hyderabad) ಖುಷಿಗುಡ್ಡದ (Khushigudda) ನಿವಾಸಿಯಾಗಿದ್ದ, ಖುಷಿಗುಡ್ಡದಲ್ಲಿ ವಾಸಿಸ್ತಿದ್ರು ವೆಂಕಟರೆಡ್ಡಿ (venkatareddy) ಬದುಕಲ್ಲಿ ಖುಷಿಯೇ ಇರಲಿಲ್ಲ ಜುಲೈ 2 ರಂದು ಪತ್ನಿ ಹಾಗೂ ಅತ್ತೆ ಮನೆಯವರು ಈತನಿನ್ನು ತೀವ್ರವಾಗಿ ಅವಮಾನಿಸಿದ್ದು, ಇದನ್ನು ಸಹಿಸಲಾಗದೇ ಆತ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ವೆಂಕಟರೆಡ್ಡಿ ಹಾಗೂ ಪತ್ನಿ ಕಲ್ಯಾಣಿಗೆ (Kalyani) ಇಬ್ಬರು ಹೆಣ್ಣು ಮಕ್ಕಳಿದ್ದು, ಒಂದು ಮಗುವಿಗೆ 7 ಹಾಗೂ ಇನ್ನೊಂದು ಮಗುವಿಗೆ ಎರಡೂವರೆ ವರ್ಷ.
ಕೌಟುಂಬಿಕ ಹಿಂಸೆಯಿಂದ ಪುರುಷರ ಆತ್ಮಹತ್ಯೆ ತಡೆಗೆ ರಾಷ್ಟ್ರೀಯ ಪುರುಷರ ಆಯೋಗ?
ವೆಂಕಟರೆಡ್ಡಿ ಪತ್ನಿಗೆ ತನ್ನ ಅತ್ತೆಯ ಜೊತೆ ತುಂಬು ಸಂಸಾರದಲ್ಲಿ ವಾಸಿಸುವುದಕ್ಕೆ ಇಷ್ಟವಿರಲಿಲ್ಲ, ಹೀಗಾಗಿ ಅತ್ತೆಯನ್ನು ಬೇರೆಡೆ ಕಳುಹಿಸುವಂತೆ ದಿನವೂ ಪತಿಯೊಂದಿಗೆ ಜಗಳ ಕಲ್ಯಾಣಿ ಹಾಗೂ ಆಕೆಯ ಮನೆಯವರು ಜಗಳ ತೆಗೆಯುತ್ತಿದ್ದರು. ಇದರಿಂದ ವೆಂಕಟರೆಡ್ಡಿ ಇತ್ತ ಅಮ್ಮನನ್ನು ಬಿಡಲಾಗದೆ ಅತ್ತ ಹೆತ್ತತಾಯಿಯನ್ನು ದೂರ ಮಾಡಲಾಗದೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದರು. ಇದೇ ಕಾರಣಕ್ಕೆ ಕಲ್ಯಾಣಿ ಎರಡು ತಿಂಗಳ ಹಿಂದೆ ಗಂಡನೊಂದಿಗೆ ಜಗಳ ಮಾಡಿಕೊಂಡು ವಾರಂಗಲ್‌ನಲ್ಲಿರುವ (warangal)ತವರು ಮನೆ ಸೇರಿದ್ದಳು.
ಜುಲೈ 2 ರಂದು ತನ್ನ ಪೋಷಕರೊಂದಿಗೆ ಮರಳಿ ಬಂದ ಆಕೆ ಗಂಡನೊಂದಿಗೆ ಮತ್ತೆ ಜಗಳ ಶುರು ಮಾಡಿದ್ದರು. ಆತನ ಹೆಸರಿನಲ್ಲಿದ್ದ ಆಸ್ತಿಯನ್ನು(property) ಮಕ್ಕಳ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸಿದ ಕಲ್ಯಾಣಿ ಮನೆಯವರು, ವೆಂಕಟರೆಡ್ಡಿ ತನ್ನ ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸಬೇಕೆಂದು ಬಯಸಿದ್ದರು. ಇದಕ್ಕಾಗಿ ದೊಡ್ಡಸ್ವರದಲ್ಲಿ ಜಗಳ ಮಾಡುತ್ತಿದ್ದ ಪತ್ನಿ ಹಾಗೂ ಅತ್ತೆಮನೆಯವರಿಗೆ ವೆಂಕಟರೆಡ್ಡಿ, ಹೊರಗಿನವರಿಗೆಲ್ಲಾ ವಿಚಾರ ಗೊತ್ತಾದರೆ ಕೆಟ್ಟ ಹೆಸರು ಬರುತ್ತದೆ ಸ್ವಲ್ಪ ಧ್ವನಿ ತಗ್ಗಿಸಿ ಮಾತನಾಡುವಂತೆ ಹೇಳಿದ್ದಾನೆ. ಆದರೆ ಆತನ ಮಾತು ಕೇಳಲು ಸಿದ್ಧರಿಲ್ಲದ ಪತ್ನಿ ಹಾಗೂ ಮನೆಯವರು ಜಗಳ ಮುಂದುವರೆಸಿದ್ದಾರೆ.
ಕೌಟುಂಬಿಕ ಹಿಂಸೆಗೆ ಆತ್ಮಹತ್ಯೆ: ‘ಪುರುಷರ ರಾಷ್ಟ್ರೀಯ ಆಯೋಗ’ ಸ್ಥಾಪಿಸಬೇಕೆಂಬ ಪಿಐಎಲ್ ತಿರಸ್ಕರಿಸಿದ ಸುಪ್ರೀಂಕೋರ್ಟ್
ಹೀಗೆ ಜಗಳ ಮುಂದುವರೆಸಿದರೆ ತಾನು ಜೀವನ ಅಂತ್ಯಗೊಳಿಸುವುದಾಗಿ ಆಗಲೇ ವೆಂಕಟರೆಡ್ಡಿ ಪತ್ನಿ ಹಾಗೂ ಆಕೆಯ ಮನೆಯವರಿಗೆ ಹೇಳಿದ್ದಾನೆ. ಈ ವೇಳೆ ಪತ್ನಿ ಮನೆಯವರು ಅಂತಹ ಕೆಲಸ ನಿನಿಂದ ಸಾಧ್ಯವಿಲ್ಲ ಹೇಡಿ ಎಂದು ನಿಂದಿಸಿದ್ದಾರೆ. ಇದರಿಂದ ಅವಮಾನಿತನಾದ ವೆಂಕಟರೆಡ್ಡಿ ಅದೇ ದಿನ ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾನೆ. ಮೃತ ವೆಂಕಟರೆಡ್ಡಿಯ ಸಹೋದರಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.