ಕೌಟುಂಬಿಕ ಹಿಂಸೆಯಿಂದ ಪುರುಷರ ಆತ್ಮಹತ್ಯೆ ತಡೆಗೆ ರಾಷ್ಟ್ರೀಯ ಪುರುಷರ ಆಯೋಗ?
ಮದುವೆಯಾದ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೌಟುಂಬಿಕ ಹಿಂಸೆಯ ಅಡಿಯಲ್ಲಿ ಪರಿಗಣಿಸಬೇಕು ಮತ್ತು ಇವುಗಳನ್ನು ತಡೆಗಟ್ಟಲು ‘ರಾಷ್ಟ್ರೀಯ ಪುರುಷರ ಆಯೋಗ’ವನ್ನು ರಚನೆ ಮಾಡಬೇಕು ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜು.3ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ನವದೆಹಲಿ: ಮದುವೆಯಾದ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೌಟುಂಬಿಕ ಹಿಂಸೆಯ ಅಡಿಯಲ್ಲಿ ಪರಿಗಣಿಸಬೇಕು ಮತ್ತು ಇವುಗಳನ್ನು ತಡೆಗಟ್ಟಲು ‘ರಾಷ್ಟ್ರೀಯ ಪುರುಷರ ಆಯೋಗ’ವನ್ನು ರಚನೆ ಮಾಡಬೇಕು ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜು.3ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ. ಕೋರ್ಟ್‌ನ ವೆಬ್‌ಸೈಟ್‌ನ ಪ್ರಕಾರ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ದೀಪಾಂಕರ್ ದತ್ತಾ ಅವರು ಈ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.
ಈ ಅರ್ಜಿಯನ್ನು ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಈ ಕುರಿತ ಅರ್ಜಿ ಸಲ್ಲಿಸಿದ್ದು, 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡ 1.64 ಲಕ್ಷ ಮಂದಿಯಲ್ಲಿ 81 ಸಾವಿರ ಮಂದಿ ವಿವಾಹವಾದ ಪುರುಷರಾಗಿದ್ದಾರೆ. ಹಾಗಾಗಿ ಇವರ ರಕ್ಷಣೆಗಾಗಿ ಆಯೋಗ ರಚನೆ ಮಾಡಬೇಕು ಎಂದು ಕೋರಿದ್ದಾರೆ. ‘ಶೇ.33.2ರಷ್ಟು ಪುರುಷರು ಕೌಟುಂಬಿಕ ಸಮಸ್ಯೆಯಿಂದ (domestic violence) ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೇ.4.8ರಷ್ಟುಮಂದಿ ಮದುವೆಗೆ ಸಂಬಂಧಿಸಿದ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪತ್ನಿ ಪೀಡಿತ ಪುರುಷರನ್ನು ರಕ್ಷಿಸಲು ಪುರುಷರ ಆಯೋಗ?
ಅಲ್ಲದೇ ಕೌಟುಂಬಿಕ ಹಿಂಸೆಗೆ ಒಳಗಾದ ಪುರುಷರು ನೀಡುವ ದೂರನ್ನು ಸ್ವೀಕರಿಸಲು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಸಹ ಅರ್ಜಿಯಲ್ಲಿ ಕೋರಲಾಗಿದೆ.