Asianet Suvarna News Asianet Suvarna News

ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್‌ ಸಸ್ಪೆಂಡ್..!

* ಮೊಹಮ್ಮದ್ ಅಜರುದ್ದೀನ್‌ ಮೇಲೆ ದುರ್ನಡತೆಯ ಆರೋಪ

* ಮೊಹಮ್ಮದ್ ಅಜರುದ್ದೀನ್‌ಗೆ ಶೋಕಾಸ್ ನೋಟಿಸ್ ಜಾರಿ

 

Hyderabad Cricket Association apex council issues showcause notice to president Mohammad Azharuddin kvn
Author
Hyderabad, First Published Jun 18, 2021, 5:56 PM IST

ಹೈದರಾಬಾದ್‌(ಜೂ.18): ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಪೆಕ್ಸ್ ಕೌನ್ಸಿಲ್‌ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದು, ಶೋಕಾಸ್ ನೋಟಿಸ್ ನೀಡಿದೆ.

ಮೊಹಮ್ಮದ್ ಅಜರುದ್ದೀನ್ ಅವರ ಮೇಲೆ ದುರ್ನಡತೆಯ ಆರೋಪ ಕೇಳಿ ಬಂದಿದ್ದು, ಹೈದರಾಬಾದ್‌ ಕ್ರಿಕೆಟ್ ಸಂಸ್ಥೆಯ ಸದಸ್ಯತ್ವವನ್ನು ತನಿಖೆ ಮುಗಿಯುವವರೆಗೆ ರದ್ದು ಮಾಡಲಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌ ದುಬೈನಲ್ಲಿ ನಾರ್ಥರ್ನ್‌ ವಾರಿಯರ್ಸ್‌ ಎನ್ನುವ ಖಾಸಗಿ ಕ್ರಿಕೆಟ್ ಕ್ಲಬ್ ಹೊಂದಿದ್ದಾರೆ. ಈ ತಂಡವು ಟಿ10 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳುತ್ತದೆ. ಈ ಟೂರ್ನಿಗೆ ಬಿಸಿಸಿಐ ಅನುಮತಿಸಿಲ್ಲ. ಹೀಗಾಗಿ ಅಜರುದ್ದೀನ್ ಮೇಲೆ ದುರ್ನಡತೆಯ ಆರೋಪ ಕೇಳಿ ಬಂದಿದೆ.

3 ಮಾದರಿಯ ವಿಶ್ವಕಪ್‌ ಫೈನಲ್‌ ಆಡಲಿರುವ ಮೊದಲ ತಂಡ ಭಾರತ..!

ನೀವು ದುಬೈನಲ್ಲಿ ಖಾಸಗಿ ಕ್ರಿಕೆಟ್ ತಂಡ ಹೊಂದಿರುವ ಕುರಿತಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಬಳಿಯಾಗಲಿ ಹಾಗೂ ಬಿಸಿಸಿಐ ಜತೆಗಾಗಲಿ ಯಾವುದೇ ಮಾತುಕತೆಯನ್ನು ನಡೆಸಿಲ್ಲ. ಹೀಗಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದೀರ ಎಂದು ಪ್ರಶ್ನಿಸಿ ಅಜರ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ನೀವು ಸಾಕಷ್ಟು ಶಿಷ್ಟಾಚಾರವನ್ನು ಉಲ್ಲಂಘಿಸಿದ್ದೀರ. ಹೀಗಾಗಿ ನಿಮಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಇನ್ನು 7 ದಿನಗಳೊಳಗಾಗಿ ಈ ನೋಟಿಸ್‌ಗೆ ಉತ್ತರಿಸಬೇಕು ಎಂದು ಅಜರ್‌ಗೆ ತಿಳಿಸಲಾಗಿದೆ. 

Follow Us:
Download App:
  • android
  • ios