ವನಪರ್ತಿ ಜಿಲ್ಲೆಯ ಕೊನ್ನೂರಿನ ಕೋಳಿ ಫಾರಂಗಳಲ್ಲಿ ನಿಗೂಢ ರೋಗ ಕಾಣಿಸಿಕೊಂಡಿದ್ದು, ಮೂರು ದಿನಗಳಲ್ಲಿ ಸುಮಾರು 2,500 ಕೋಳಿಗಳು ಮೃತಪಟ್ಟಿವೆ. ಜಿಲ್ಲಾ ಪಶುಸಂಗೋಪನಾ ಅಧಿಕಾರಿ ರೋಗವನ್ನು ಖಚಿತಪಡಿಸಿದ್ದು, ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಮೃತ ಕೋಳಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಹಿಂದೆ ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿತ್ತು.
ವನಪರ್ತಿ ಜಿಲ್ಲೆಯ ಕೊನ್ನೂರು, ಮದನಪುರಂ ಮಂಡಲದ ಕೋಳಿ ಫಾರಂಗಳಲ್ಲಿ "ನಿಗೂಢ ರೋಗ" ಹರಡಿದ ಕಾರಣ ಮೂರು ದಿನಗಳಲ್ಲಿ ಸುಮಾರು 2,500 ಕೋಳಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ವನಪರ್ತಿಯ ಜಿಲ್ಲಾ ಪಶುಸಂಗೋಪನೆ ಮತ್ತು ಪ್ರಾಣಿ ಪರಿಪಾಲನಾ ಅಧಿಕಾರಿ ಕೆ. ವೆಂಕಟೇಶ್ವರ್ ಈ ರೋಗ ಹರಡಿರುವುದನ್ನು ಖಚಿತಪಡಿಸಿದ್ದಾರೆ. ರೋಗಕ್ಕೆ ಕಾರಣ ಏನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. "ವನಪರ್ತಿ ಜಿಲ್ಲೆ, ಮದನಪುರಂ ಮಂಡಲ, ಕೊನ್ನೂರಿನ ಕೋಳಿ ಫಾರಂಗಳಲ್ಲಿ ನಿಗೂಢ ರೋಗ ಕಾಣಿಸಿಕೊಂಡಿದೆ. ಇದರಿಂದ ಮೂರು ದಿನಗಳಲ್ಲಿ ಸುಮಾರು 2,500 ಕೋಳಿಗಳು ಸಾವನ್ನಪ್ಪಿವೆ" ಎಂದು ಅಧಿಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹಕ್ಕಿ ಜ್ವರ ಬಂದಾಗ ಕೋಳಿ ಮತ್ತು ಮೊಟ್ಟೆ ತಿನ್ನಬಹುದಾ? ಈ ವಿಚಾರ ತಿಳಿದಿರಲೇಬೇಕು
"2500 ಕೋಳಿಗಳು ಸಾವನ್ನಪ್ಪಿದ ನಂತರ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾಗಿದೆ," ಎಂದು ಅವರು ಹೇಳಿದರು. " ಮೂರು ದಿನಗಳಲ್ಲಿ ಮರಣ ಮೃದಂಗವೇ ಸಂಭವಿಸಿದವು ಫೆಬ್ರವರಿ 16 ರಂದು 117, 17 ರಂದು 300, ಉಳಿದವು 18 ರಂದು ಸಾವನ್ನಪ್ಪಿದವು. ಅದರ ನಂತರ ನಮಗೆ ತಿಳಿಸಲಾಯಿತು ಮತ್ತು 19 ರಂದು ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದೇವೆ. ಈ ಕೋಳಿಗಳು ಶಿವಕೇಶವುಲುಗೆ ಸೇರಿದ 5,500 ಸಾಮರ್ಥ್ಯದ ಪ್ರೀಮಿಯಂ ಫಾರ್ಮ್‌ನಲ್ಲಿ ಸಾವನ್ನಪ್ಪಿವೆ," ಎಂದು ಅಧಿಕಾರಿ ಹೇಳಿದರು.
ಇದಕ್ಕೂ ಮುನ್ನ ಕಳೆದವಾರ ಆಂಧ್ರಪ್ರದೇಶ ಸರ್ಕಾರ ಹಕ್ಕಿ ಜ್ವರ ಹರಡುವುದನ್ನು ತಡೆಯಲು ತೀವ್ರ ಪ್ರಯತ್ನಗಳನ್ನು ಕೈಗೊಂಡಿತು. ಮೂರು ಬಾಧಿತ ಜಿಲ್ಲೆಗಳಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪಶುಸಂಗೋಪನಾ ಹೆಚ್ಚುವರಿ ನಿರ್ದೇಶಕಿ ಡಾ. ಸತ್ಯಾ ಕುಮಾರಿ ಮಾತನಾಡಿ, "ಹಕ್ಕಿ ಜ್ವರ ಮೂರು ಜಿಲ್ಲೆಗಳು ಮತ್ತು ಐದು ಫಾರಂಗಳಿಗೆ ಮಾತ್ರ ಸೀಮಿತವಾಗಿದೆ. ಈ ರೋಗ ಹರಡಿದ ಕಾರಣ ಸುಮಾರು ಒಂದು ಲಕ್ಷ ಕೋಳಿಗಳನ್ನು ಕೊಲ್ಲಲಾಗಿದೆ'' ಎಂದರು.
ಕರಾಚಿ: ಹೆಚ್ಚಿದ ಉಸಿರಾಟದ ಕಾಯಿಲೆ, ಶೋಚನೀಯ ಸ್ಥಿತಿ ತಲುಪಿದ ಪಾಕಿಸ್ತಾನ ಆರೋಗ್ಯ ಇಲಾಖೆ
ಆಂಧ್ರ ಕೃಷಿ, ಸಹಕಾರ, ಮಾರುಕಟ್ಟೆ ಮತ್ತು ಪಶುಸಂಗೋಪನಾ ಸಚಿವ ಕಿಂಜರಾಪು ಅಚ್ಚನ್ನಾಯುಡು ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರು ಚಿಂತಿಸಬೇಕಾಗಿಲ್ಲ ಎಂದು ಭರವಸೆ ನೀಡಿದರು. ಏಕೆಂದರೆ ಸರ್ಕಾರ ಅದರ ಹರಡುವಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದರು.
