ಹಕ್ಕಿ ಜ್ವರ ಬಂದಾಗ ಕೋಳಿ ಮತ್ತು ಮೊಟ್ಟೆ ತಿನ್ನಬಹುದಾ? ಈ ವಿಚಾರ ತಿಳಿದಿರಲೇಬೇಕು
ಬರ್ಡ್ ಫ್ಲೂ ಸೀಸನ್‌ನಲ್ಲಿ ಕೋಳಿ, ಮೊಟ್ಟೆ ತಿನ್ನಬಹುದೇ? ತಿಂದರೆ ಏನಾಗುತ್ತದೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ.

ಈಗ ಬರ್ಡ್ ಫ್ಲೂ ಬಗ್ಗೆ ಗೊತ್ತಿಲ್ಲದವರ್ಯಾರೂ ಇಲ್ಲ. ಇದು ಪಕ್ಷಿಗಳಿಂದ ಬರೋ ವೈರಸ್. ಬರ್ಡ್ ಫ್ಲೂ ಬಂದಾಗಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕೋಳಿ ತಿನ್ನಬಾರದು ಅಂತ ಪೋಸ್ಟ್‌ಗಳು ಬರ್ತಿರ್ತಾವೆ. ಆದ್ರೆ... ಸರ್ಕಾರ ಹೇಳಿದ್ರೂ... ವ್ಯಾಪಾರಿಗಳು ಮಾರ್ತಾರೆ... ಜನ ಖರೀದಿ ಮಾಡಿ ತಿಂತಾರೆ. ಬರ್ಡ್ ಫ್ಲೂ ಇದ್ದಾಗ ನಿಜವಾಗ್ಲೂ ಕೋಳಿ ತಿನ್ನಬಾರದಾ? ಮೊಟ್ಟೆ ತಿನ್ನೋದೂ ಬೇಡ್ವಾ? ತಿಂದ್ರೆ ಏನಾಗುತ್ತೆ? ತಜ್ಞರು ಏನ್ ಹೇಳ್ತಾರೆ ನೋಡೋಣ...
ಏವಿಯನ್ ಇನ್ಫ್ಲುಯೆನ್ಜ ಅಂತ ಕರೆಯೋ ಬರ್ಡ್ ಫ್ಲೂ, ಪಕ್ಷಿಗಳಿಗೆ ಬರೋ ಸಾಂಕ್ರಾಮಿಕ ವೈರಲ್ ಸೋಂಕು. ಕೆಲವು ಬಗೆಯ ಬರ್ಡ್ ಫ್ಲೂ ವೈರಸ್ ಮನುಷ್ಯರಿಗೂ ಮತ್ತು ಇತರ ಪ್ರಾಣಿಗಳಿಗೂ ಹರಡಬಹುದು. ಕೆಲವೊಮ್ಮೆ ತೀವ್ರ ಅನಾರೋಗ್ಯ ಮತ್ತು ಸಾವಿಗೂ ಕಾರಣವಾಗಬಹುದು. ಮನುಷ್ಯರಿಗೆ ಬರ್ಡ್ ಫ್ಲೂ ಬಂದಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ-

ಜ್ವರ, ಕೆಮ್ಮು, ಗಂಟಲು ನೋವು, ಮೈಕೈ ನೋವು, ಆಯಾಸ, ಉಸಿರಾಟದ ತೊಂದರೆ. ತೀವ್ರ ಸಂದರ್ಭಗಳಲ್ಲಿ, ನ್ಯುಮೋನಿಯಾ, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಮತ್ತು ಸಾವಿಗೂ ಕಾರಣವಾಗಬಹುದು.
ಬರ್ಡ್ ಫ್ಲೂ ಸೀಸನ್‌ನಲ್ಲಿ ಕೋಳಿ ಮಾಂಸದಿಂದ ದೂರ ಇರೋದೇ ಒಳ್ಳೆಯದು. ತಿನ್ನಬೇಕು ಅಂತ ಅಂದ್ರೆ... ಚೆನ್ನಾಗಿ ಬೇಯಿಸಿ ತಿನ್ನಿ. ಮೊಟ್ಟೆಯನ್ನೂ ಬೇಯಿಸಿ ತಿನ್ನಿ. ಕೋಳಿ ಮತ್ತು ಮೊಟ್ಟೆ ಬೇಯಿಸುವಾಗ ಒಳಗಿನ ಉಷ್ಣತೆ ೧೬೫ ಡಿಗ್ರಿ ಫ್ಯಾರನ್‌ಹೀಟ್ ಇರೋ ಹಾಗೆ ನೋಡ್ಕೊಳಿ,
ಸಿಡಿಸಿ ಪ್ರಕಾರ, ಇದು ಬರ್ಡ್ ಫ್ಲೂ ವೈರಸ್ ಸೇರಿದಂತೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶ ಮಾಡುತ್ತದೆ.

ಕಚ್ಚಾ ಕೋಳಿಯನ್ನ ಬೇಯಿಸಿದ ಆಹಾರದಿಂದ ದೂರ ಇಡಬೇಕು. ಕಚ್ಚಾ ಕೋಳಿಯನ್ನ ಬೇರೆ ಪಾತ್ರೆಯಲ್ಲಿ ಅಥವಾ ಚೀಲದಲ್ಲಿ ಇಡಬೇಕು. ಹಾಗಿದ್ರೆ ರಸ ಇತರ ಆಹಾರದ ಮೇಲೆ ಬೀಳುವುದಿಲ್ಲ. ಕಚ್ಚಾ ಕೋಳಿ ಮುಟ್ಟಿದ ನಂತರ ಸೋಪಿನಿಂದ ಕೈ ತೊಳೆಯಿರಿ.
ಬರ್ಡ್ ಫ್ಲೂ ಸೀಸನ್‌ನಲ್ಲಿ ಮೊಟ್ಟೆ ತಿನ್ನುವಾಗಲೂ ಎಚ್ಚರವಿರಲಿ. ಕಚ್ಚಾ ತಿನ್ನಬಾರದು, ಆಮ್ಲೆಟ್ ರೀತಿ ಬೇಯಿಸಿ ತಿನ್ನಿ. ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗ ಎರಡೂ ಚೆನ್ನಾಗಿ ಬೆಂದ ಮೇಲೆ ತಿನ್ನಿ.