Asianet Suvarna News Asianet Suvarna News

ವಿದ್ಯುತ್‌ ಇಲ್ಲದೇ ಓಡುವ ಮರದ ಥ್ರೆಡ್‌ಮಿಲ್‌ ನಿರ್ಮಿಸಿದ ವ್ಯಕ್ತಿ: ವಿಡಿಯೋ ನೋಡಿ

  • ಮರದ ಥ್ರೆಡ್‌ಮಿಲ್ ತಯಾರಿಸಿದ ತೆಲಂಗಾಣದ ವ್ಯಕ್ತಿ
  • ವಿದ್ಯುತ್ ಇಲ್ಲದೇ ಕಾರ್ಯನಿರ್ವಹಿಸುವ ಮರದ ಥ್ರೆಡ್‌ಮಿಲ್‌
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
telangana Man wins praise online for his wooden treadmill akb
Author
Bangalore, First Published Mar 24, 2022, 10:19 AM IST

ಹೈದರಾಬಾದ್‌(ಮಾ.24): ತೆಲಂಗಾಣದ ವ್ಯಕ್ತಿಯೊಬ್ಬರು ವಿದ್ಯುತ್ ಇಲ್ಲದೇ ಕಾರ್ಯ ನಿರ್ವಹಿಸುವ ಮರದ ಥ್ರೆಡ್‌ಮಿಲ್ ತಯಾರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ತೆಲಂಗಾಣದ ಮಾಹಿತಿ ತಂತ್ರಜ್ಞಾನ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ ಟಿ ರಾಮ ರಾವ್ (KT Rama Rao) ಅವರ ಗಮನವನ್ನು ಸೆಳೆದಿದೆ. ಅವರು ಈ ಹೊಸ ಥ್ರೆಡ್‌ಮಿಲ್‌ (treadmill) ಕಾರ್ಯನಿರ್ವಹಿಸುವ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಅಪ್‌ಲೋಡ್ ಮಾಡುವ ಮೂಲಕ ಈತನಿಗೆ ಸಹಾಯ ಮಾಡುವಂತೆ ಕೇಳಿದ್ದಾರೆ.

ಸಧೃಡತೆ ಹೊಂದಿ ಶಕ್ತಿಶಾಲಿ ಎನಿಸುವುದು ಅನೇಕರ ಗುರಿ. ಹೀಗಾಗಿ ಬೇಕಾದಷ್ಟು ಹಣ ಇರುವ ಅನೇಕರು ಮನೆಯಲ್ಲೇ ವ್ಯಾಯಾಮ ಉಪಕರಣವಾದ ಥ್ರೆಡ್‌ಮಿಲ್‌ನ್ನು ಕೊಂಡು ಇಟ್ಟುಕೊಂಡು ವ್ಯಾಯಾಮ ಮಾಡುತ್ತಾರೆ. ಆದರೆ ಬಡವರ ಪಾಲಿಗೆ ಇದು ಕೈಗೆಟುಕದ ಕುಸುಮ. ಆದರೆ ತೆಲಂಗಾಣದ (Telangana) ವ್ಯಕ್ತಿಯೊಬ್ಬರು ಮನೆಯಲ್ಲೇ ಮರದ ಥ್ರೆಡ್‌ಮಿಲ್‌ನ್ನು ತಯಾರಿಸಿದ್ದಾರೆ. ಇದು ಪರಿಸರ ಸ್ನೇಹಿ ಕೂಡ ಆಗಿದ್ದು, ವಿದ್ಯುತ್ ಇಲ್ಲದೇ ಕಾರ್ಯನಿರ್ವಹಿಸುತ್ತದೆ. ಈ ಆವಿಷ್ಕಾರದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

ನೆಟ್ಟಿಗರು ವ್ಯಕ್ತಿಯ ಈ ಹೊಸ ಆವಿಷ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿಯ ವಿಡಿಯೋವನ್ನು ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್‌ ರಿಟ್ವಿಟ್‌ ಮಾಡಿದ್ದು, ವ್ಯಕ್ತಿಯ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂತಹದೇ ಅನೇಕ ಥ್ರೆಡ್‌ಮಿಲ್‌ಗಳನ್ನು ತಯಾರಿಸಲು ಆತನಿಗೆ ನೆರವಾಗುವಂತೆ ಕೋರಿದ್ದಾರೆ. 

World Record: ನಿಂಬೆ ಹಣ್ಣುಗಳನ್ನು ಬಳಸಿ ಬ್ಯಾಟರಿಯನ್ನೇ ತಯಾರಿಸಿದ್ರು.,!

45 ಸೆಕೆಂಡುಗಳ ಈ ವಿಡಿಯೋ ಈ ವ್ಯಕ್ತಿ ಹೇಗೆ ಥ್ರೆಡ್‌ಮಿಲ್‌ (treadmill) ತಯಾರಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. ಮರದ ಸಣ್ಣ ಸಣ್ಣ ತುಂಡುಗಳನ್ನು ಜೋಡಿಸಿ ಥ್ರೆಡ್‌ಮಿಲ್‌ ತಯಾರಿಸುವ ಅವರು ಮಾಮೂಲಿ ಕಬ್ಬಿಣದ ಥ್ರೆಡ್‌ಮಿಲ್‌ನಲ್ಲಿ ಹೇಗೆ ವ್ಯಾಯಾಮ ಮಾಡುತ್ತಾರೋ ಹಾಗೆ ಮಾಡುವುದನ್ನು ಅವರು ಮಾಡಿ ತೋರಿಸುತ್ತಾರೆ. ಈ ವಿಡಿಯೋವನ್ನು 1,36,500 ಜನರು ವೀಕ್ಷಿಸಿದ್ದಾರೆ. ಅರುಣ್ ಭಗವತುಲಾ (Arunn Bhagavathula) ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದ್ಭುತವಾದ ಥ್ರೆಡ್ಮಿಲ್ ವರ್ಕ್ ಎಂದು ಅವರು ಹೇಳಿದ್ದಾರೆ. 

Drone Technology : ಆವಿಷ್ಕಾರಕ್ಕೆ ಕೊನೆ ಎಲ್ಲಿ.. ಡ್ರೋಣ್ ಮೂಲಕ ಬ್ಲಡ್ ಸ್ಯಾಂಪಲ್ !
ಕೆಲ ದಿನಗಳ ಹಿಂದೆ ಕೇರಳದ ವಿದ್ಯಾರ್ಥಿನಿಯರು ಕಾಫಿಯ ಮಾತ್ರೆಯನ್ನು ತಯಾರಿಸಿದ್ದರು. ಕೇರಳದ ಎರ್ನಾಕುಲಂನ ಸರ್ಕಾರಿ ಬಾಲಕಿಯರ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ಈ ಫಿಲ್ಟರ್ ಕಾಫಿ ಮಾತ್ರೆ ಆವಿಷ್ಕರಿಸಿದ್ದಾರೆ. ಒಂದೇ ಸೆಕೆಂಡ್‌ನಲ್ಲಿ ನಿಮ್ಮಿಷ್ಟದ ಕಾಫಿ ಸವಿಯಲು ಕ್ಯಾಪ್ಶೂಲ್ ಕಾಫಿ ಮಾರುಕಟ್ಟೆಗೆ ಬಂದಿದೆ. ಈ ಕಾಫಿ ಮಾತ್ರೆಯ ವಿಶೇಷ ಅಂದರೆ ಈ ಕಾಫಿ ಮಾತ್ರೆ ಸಂಪೂರ್ಣ ಆರ್ಗಾನಿಕ್. ಯಾವ ರಾಸಾಯನಿಕ ಮಿಶ್ರಣ ಇದಕ್ಕಿಲ್ಲ. ಹೊರಗೆ ಮರಗೆಣಸಿನ ಲೇಪನ, ಒಳಗೆ ಫಿಲ್ಟರ್ ಕಾಫಿ ಪುಡಿ. ಇದನ್ನು ಬಿಸಿ ನೀರಿಗೆ ಅಥವಾ ಹಾಲಿಗೆ ಹಾಕಿದರೆ ಕಾಫಿ ರೆಡಿ.  ಲಕ್ಷ್ಮಿ, ಎಲಿಶಾ ಏನೋರಿ ಕುಡುತೋಸ್, ಡಿಂಪಲ್ ಹಾಗೂ ಶಿವನಂದನ ಈ ಹೊಸ ಫಿಲ್ಟರ್ ಕಾಫಿ ಮಾತ್ರೆ ಹಿಂದಿನ ರೂವಾರಿಗಳು.

ಪ್ರಯಾಣದಲ್ಲಿ ಕಾಫಿ ಕುಡಿಯಲು ಇಚ್ಚಿಸುವ ಹಲವರಿಗೆ ನೂತನ ಫಿಲ್ಟರ್ ಕಾಫಿ ಕ್ಯಾಪ್ಶೂಲ್ ವರದಾನವಾಗಿದೆ. ಸಣ್ಣ ಸಣ್ಣ ಗುಳಿಗೆಯಾಗಿರುವುದರಿಂದ ಇದನ್ನು ಪ್ರಯಾಣದ ವೇಳೆ ತೆಗೆದುಕೊಂಡು ಹೋಗುವುದು ಸುಲಭ. ಪರ್ಸ್‌ನೊಳಗೆ, ಸಣ್ಣ ಬಾಟಲಿಯೊಳಗೆ, ಪ್ಯಾಕೆಟ್ ಒಳಗೆ ಇದನ್ನು ಇಟ್ಟುಕೊಳ್ಳಬಹುದು.
 

Follow Us:
Download App:
  • android
  • ios