ತೃತೀಯಲಿಂಗಿ ಪ್ರೇಮಪಾಶಕ್ಕೆ ಸಿಲುಕಿ ಪೋಷಕರ ವಿರೋಧ ಧಿಕ್ಕರಿಸಿ ಮದುವೆಯಾದ ಯುವಕ: ಪೊಲೀಸರ ಮೊರೆ ಹೋದ ದಂಪತಿ!

ಆಂಧ್ರಪ್ರದೇಶದ ನಂದಿಗಾಮ ಪಟ್ಟಣದ ಮೂಲದ ದೀಪು ಎಂಬ ತೃತೀಯಲಿಂಗಿ ಹೈದರಾಬಾದ್‌ನಲ್ಲಿ ಗಣೇಶ್‌ ಎಂಬುವರನ್ನು ವಿವಾಹವಾಗಿದ್ದಾರೆ. ವಾರದ ಹಿಂದೆಯಷ್ಟೇ ಇವರು ಮದುವೆಯಾಗಿದ್ದು, ಈಗ ಪೋಷಕರ ವಿರೋಧ ಹಿನ್ನೆಲೆ ರಕ್ಷಣೆಗೆ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. 

telangana man marries transgender woman couple seeks police protection after parents denial ash

ಹೈದರಾಬಾದ್‌ (ನವೆಂಬರ್ 7, 2023): ತೆಲಂಗಾಣದ ಖಮ್ಮಂ ನಗರದ ಮೂಲದ ಯುವಕ ಗಣೇಶ್‌ ಒಂದು ವರ್ಷದ ಹಿಂದೆ ಭೇಟಿಯಾದ ಮತ್ತು ಪ್ರೀತಿಸುತ್ತಿದ್ದ ತೃತೀಯಲಿಂಗಿ ಮಹಿಳೆಯನ್ನು ಮದುವೆಯಾಗಿದ್ದಾರೆ. ಈ ಮೂಲಕ ಸಮಾಜದ ನಿರೀಕ್ಷೆಗಳನ್ನು ಧಿಕ್ಕರಿಸಿ, ತಮ್ಮ ಪ್ರೀತಿಯನ್ನು ಔಪಚಾರಿಕಗೊಳಿಸಿದ್ದಾನೆ. 

ಆಂಧ್ರಪ್ರದೇಶದ ನಂದಿಗಾಮ ಪಟ್ಟಣದ ಮೂಲದ ದೀಪು ಎಂಬ ತೃತೀಯಲಿಂಗಿ ಹೈದರಾಬಾದ್‌ನಲ್ಲಿ ಗಣೇಶ್‌ ಎಂಬುವರನ್ನು ವಿವಾಹವಾಗಿದ್ದಾರೆ. ವಾರದ ಹಿಂದೆಯಷ್ಟೇ ಇವರು ಮದುವೆಯಾಗಿದ್ದು, ಈಗ ಪೋಷಕರ ವಿರೋಧ ಹಿನ್ನೆಲೆ ರಕ್ಷಣೆಗೆ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. 

ಇದನ್ನು ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್‌: ನಕಲಿ ವಿಡಿಯೋ ಗುರುತಿಸೋದು ಹೇಗೆ ತಿಳ್ಳೊಳ್ಳಿ..!

ಪತ್ರಕರ್ತೆಯೊಬ್ಬರು ಈ ಬಗ್ಗೆ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಈ ಬಗ್ಗೆ ವರದಿ ಮಾಡಿದಾಗ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಜನಿಕರ ಗಮನಕ್ಕೆ ಬಂದಿದೆ. ಇವರು ದಂಪತಿಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.  

ಪ್ರೀತಿಗೆ ಯಾವುದೇ ಲಿಂಗ ಅಥವಾ ಪ್ರದೇಶವಿಲ್ಲ: ನವವಿವಾಹಿತ ದಂಪತಿ ತೆಲಂಗಾಣದ ಖಮ್ಮಂನ ಗಣೇಶ್‌ ಮತ್ತು ಆಂಧ್ರ ಪ್ರದೇಶದ ನಂದಿಗಾಮದ ತೃತೀಯ ಲಿಂಗಿ ದೀಪು ಹೈದರಾಬಾದ್‌ನಲ್ಲಿ ಭೇಟಿಯಾದರು ಮತ್ತು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಅವರು ಒಂದು ವಾರದ ಹಿಂದೆ ವಿವಾಹವಾದರು ಮತ್ತು ಕುಟುಂಬಗಳು ವಿರೋಧಿಸಿದ್ದರಿಂದ ರಕ್ಷಣೆಗಾಗಿ ಪೊಲೀಸ್‌ ಠಾಣೆಗೆ ಬಂದರು ಎಂದೂ ಪತ್ರಕರ್ತೆ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಕೊಟ್ಟ ಬೊಕ್ಕೆಯಲ್ಲಿ ಹೂವೇ ನಾಪತ್ತೆ: ಇಲ್ಲೂ ಕಾಂಗ್ರೆಸ್‌ ಹಗರಣವೆಂದು ಕಾಲೆಳೆದ ಬಿಜೆಪಿ!

ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತೃತೀಯಲಿಂಗಿ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿರುವುದು ಇದೇ ಮೊದಲಲ್ಲ. ಜೂನ್ 2023 ರಲ್ಲಿ, ತೆಲಂಗಾಣದ ಮತ್ತೊಂದು ಜೋಡಿಯ ಕತೆ ಬೆಳಕಿಗೆ ಬಂದಿತ್ತು. ಹೈದರಾಬಾದ್‌ನ 23 ವರ್ಷದ ಶ್ರೀನಿವಾಸ್ 22 ವರ್ಷದ ತೃತೀಯಲಿಂಗಿ ಮಹಿಳೆ ಪಿಂಕಿಯನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಪ್ರೀತಿಸತೊಡಗಿದರು. ದಂಪತಿ ಐದು ವರ್ಷಗಳ ಕಾಲ ಹೈದರಾಬಾದ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಇದಾದ ನಂತರ ಇಬ್ಬರೂ ಮದುವೆಯಾಗಿದ್ದಾರೆ.

 ಇದಕ್ಕೂ ಮೊದಲು, ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ತೃತೀಯಲಿಂಗಿ ಮಹಿಳೆಯ ನಡುವೆ ವಿವಾಹ ಸಮಾರಂಭ ಆಯೋಜಿಸಿದರು. ಕಲಹಂಡಿಯ ನರ್ಲಾ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ದೇಪುರ್ ಗ್ರಾಮದ ಸಂಗೀತಾ ಎಂಬ ತೃತೀಯಲಿಂಗಿ ಮಹಿಳೆ, ಪಕ್ಕದ ಧುರ್ಕುಟಿ ಗ್ರಾಮದ ಫಕೀರ್ ನಿಯಾಲ್ ಅವರೊಂದಿಗೆ ವೈವಾಹಿಕ ಸಂಬಂಧ ಪ್ರವೇಶಿಸಿದ್ದಾರೆ. 

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವನ್ನು ಸಂಭ್ರಮಿಸಿದ ನವ ದಂಪತಿ: ಮದುವೆ ವೇದಿಕೆಯಲ್ಲಿ ಡಬಲ್‌ ಸಂಭ್ರಮ!

ಫಕೀರ್‌ಗೆ ಮದುವೆಯಾಗಿ ಐದು ವರ್ಷಗಳಾಗಿದ್ದು, ಪತ್ನಿಗೆ ಎರಡು ವರ್ಷದ ಮಗುವಿತ್ತು. ಆದರೂ, 2021 ರಲ್ಲಿ, ಅವರು ತಮ್ಮ ಸುತ್ತಮುತ್ತಲಿನ LGBTQ+ ಸಮುದಾಯದ ಭಾಗವಾಗಿದ್ದ ಸಂಗೀತಾ ಅವರೊಂದಿಗೆ ಸಂಬಂಧ ಬೆಳೆಸಿಕೊಂಡರು. ಇದನ್ನು ಕಂಡುಕೊಂಡ ಪತ್ನಿ ವಿರೋಧ ವ್ಯಕ್ತಪಡಿಸದೆ ಮದುವೆ ಮಾಡಿದ್ದರು.

Latest Videos
Follow Us:
Download App:
  • android
  • ios