'ಗಣರಾಜ್ಯೋತ್ಸವ ಆಚರಣೆ ನಡೆಸಿ..' ಕೆಸಿಆರ್‌ ಸರ್ಕಾರಕ್ಕೆ ಖಡಕ್‌ ವಾರ್ನಿಂಗ್‌ ನೀಡಿದ ತೆಲಂಗಾಣ ಹೈಕೋರ್ಟ್‌!

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಗಣರಾಜ್ಯೋತ್ಸವ ಆಚರಣೆಗೆ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ ಪರೇಡ್ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

Telangana High Court Pulls Up KCR Govt Directs Party To Hold Ceremonial Republic Day Celebrations san

ಹೈದರಾಬಾದ್‌ (ಜ.25):  ಗಣರಾಜ್ಯೋತ್ಸವ ಪರೇಡ್‌ಅನ್ನು ಸರ್ಕಾರದ ವತಿಯಿಂದ ನಡೆಸೋದಿಲ್ಲ ಎಂದು ಉದ್ಧಟತನ ಮೆರೆದಿದ್ದ ತೆಲಂಗಾಣ ಸರ್ಕಾರಕ್ಕೆ ಸ್ಥಳೀಯ ಹೈಕೋರ್ಟ್‌ ಚಾಟಿ ಬೀಸಿದೆ. ದೇಶದ ಗಣರಾಜ್ಯ ಸಂಭ್ರಮವನ್ನು ವಿದ್ಯುಕ್ತವಾಗಿ ಆಚರಿಸಬೇಕು ಎಂದು ಭಾರತ್‌ ರಾಷ್ಟ್ರ ಸಮಿತಿ ಪಕ್ಷಕ್ಕೆ ತೆಲಂಗಾಣ ಹೈಕೋರ್ಟ್‌ ಆದೇಶ ನೀಡಿದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವದ ಪರೇಡ್‌ ಅನ್ನು ಆಯಾ ರಾಜ್ಯದ ರಾಜ್ಯಪಾಲರು ಮುನ್ನಡೆಸುತ್ತಾರೆ. ಇದೇ ಕಾರಣಕ್ಕಾಗಿ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ ಗಣರಾಜ್ಯೋತ್ಸವ ಆಚರಣೆಯನ್ನು ನಡೆಸದೇ ಇರುವ ತೀರ್ಮಾನ ಮಾಡಿತ್ತು. ಸರ್ಕಾರದ ಈ ತೀರ್ಮಾನದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಗಣರಾಜ್ಯೋತ್ಸವ ಆಚರಣೆಗೆ ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ ಪರೇಡ್ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಗಣರಾಜ್ಯದ ಆಚರಣೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಬಿಆರ್‌ಎಸ್‌ಗೆ ಸೂಚಿಸಲಾಗಿದೆ.

ಅರ್ಜಿದಾರರ ಪರ ವಕೀಲರು, "ಇಂದು ರಾಜ್ಯ ಸರ್ಕಾರವು ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುವಂತೆ ತೆಲಂಗಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ರಾಜಭವನದಲ್ಲಿ ವ್ಯವಸ್ಥೆ ಮಾಡಿದೆ ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲೇಖಿಸಿ ಪರೇಡ್ ಮೈದಾನದಲ್ಲಿ ಆಚರಿಸಲು ನಿರಾಕರಿಸಿದೆ' ಎಂದು ತಿಳಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್‌ ಗಣರಾಜ್ಯೋತ್ಸವವನ್ನು ಸೂಕ್ತ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಆಚರಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ’ ಎಂದು ಅವರು ಹೇಳಿದರು.

ಸಾಂಪ್ರದಾಯಿಕವಾಗಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಇಬ್ಬರೂ ಭಾಗವಹಿಸುವ ಪ್ರಮುಖ ಕಾರ್ಯಕ್ರಮವು ಪ್ರತಿ ವರ್ಷ ನಗರದ ಪರೇಡ್ ಮೈದಾನದಲ್ಲಿ ನಡೆಯುತ್ತಿತ್ತು. ಅಧಿಕೃತ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸದಿರಲು ನಿರ್ಧರಿಸಿದ ಸರ್ಕಾರ, ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸ್ವತಂತ್ರವಾಗಿ ನಡೆಸಲು ರಾಜಭವನಕ್ಕೆ ಹೇಳಿತ್ತು.

ತೆಲಂಗಾಣದಲ್ಲಿ ಬಿಆರ್‌ಎಸ್‌ ಸರ್ಕಾರ ಹಾಗೂ ರಾಜಭವನದ ಸಂಬಂಧ ಉತ್ತಮ ಸ್ಥಿತಿಯಲ್ಲಿಲ್ಲ. ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ತಮ್ಮ ಕಚೇರಿಗೆ ಸಂಬಂಧಿಸಿದಂತೆ ಪ್ರೋಟೋಕಾಲ್ ಅನ್ನು ಸರ್ಕಾರ ಅನುಸರಿಸುತ್ತಿಲ್ಲ ಎಂದು ದೂರಿದ್ದರೆ,  ಆದರೆ ಕೆಸಿಆರ್ ಸರ್ಕಾರವು ರಾಜ್ಯಪಾಲರ ಬಳಿ ಬಾಕಿ ಇರುವ ಕೆಲವು ಮಸೂದೆಗಳ ವಿಚಾರದಲ್ಲಿ ಮತ್ತು ಅವರ ಕಾರ್ಯನಿರ್ವಹಣೆಯ ಬಗ್ಗೆ ದೂರುಗಳನ್ನು ಹೊಂದಿದೆ. ಜನವರಿ 19 ರಂದು ಸೌಂದರರಾಜನ್ ಅವರು ಪ್ರೋಟೋಕಾಲ್ ಅನ್ನು ಪಾಲಿಸುತ್ತಿಲ್ಲ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸರ್ಕಾರದಿಂದ ಯಾವುದೇ ಸಂವಹನವನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಿದರು.

ಹಲವು ಭಾಷೆ ಭಾರತವನ್ನು ಒಡೆದಿಲ್ಲ, ಒಗ್ಗೂಡಿಸಿದೆ, ಗಣತಂತ್ರ ದಿನಾಚರಣೆಗೆ ರಾಷ್ಟ್ರಪತಿ ಸಂದೇಶ!

ಏತನ್ಮಧ್ಯೆ, ತೆಲಂಗಾಣ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಔಪಚಾರಿಕ ಗಣರಾಜ್ಯೋತ್ಸವವನ್ನು ನಡೆಸದಿದ್ದಕ್ಕಾಗಿ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಬಣ್ಣಿಸಿದ ಸಂಜಯ್, ಇದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದಂತೆ ಎಂದು ಹೇಳಿದರು. ಇದು ರಾಜ್ಯಪಾಲರ ಸಾಂವಿಧಾನಿಕ ಜವಾಬ್ದಾರಿಗಳನ್ನು ಮೊಟಕುಗೊಳಿಸುವ ಷಡ್ಯಂತ್ರದ ಸ್ಪಷ್ಟ ಪ್ರಕರಣವಾಗಿದೆ ಎಂದು ಅವರು ಹೇಳಿದರು.

Republic Day: ಪರೇಡ್‌ ಎಷ್ಟು ಗಂಟೆಗೆ ಆರಂಭ, ಈ ಬಾರಿಯ ವಿಶೇಷತೆ ಏನು, ಇಲ್ಲಿದೆ ಸಂಪೂರ್ಣ ಮಾಹಿತಿ

"ಕೆಸಿಆರ್ ಮಹಿಳೆಯರ ಬಗ್ಗೆ ಸಂಪೂರ್ಣ ತಿರಸ್ಕಾರ ಹೊಂದಿದ್ದಾರೆ. ಆದ್ದರಿಂದಲೇ ಅವರು ಮಹಿಳಾ ರಾಜ್ಯಪಾಲರನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ, ರಾಜ್ಯದಲ್ಲಿ ಅತ್ಯುನ್ನತ ಸಾಂವಿಧಾನಿಕ ಸ್ಥಾನದಲ್ಲಿರುವ ಮಹಿಳೆಯನ್ನು ಗೌರವಿಸಲು ಸಾಧ್ಯವಾಗದ ಮುಖ್ಯಮಂತ್ರಿಗಳು, ಮಹಿಳೆಯರಿಗೆ 35 ರಷ್ಟು ಮೀಸಲಾತಿಯನ್ನು ಹೇಗೆ ಜಾರಿಗೊಳಿಸುತ್ತಾರೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು' ಅವರು ಹೇಳಿದರು.
 

Latest Videos
Follow Us:
Download App:
  • android
  • ios