ಹಲವು ಭಾಷೆ ಭಾರತವನ್ನು ಒಡೆದಿಲ್ಲ, ಒಗ್ಗೂಡಿಸಿದೆ, ಗಣತಂತ್ರ ದಿನಾಚರಣೆಗೆ ರಾಷ್ಟ್ರಪತಿ ಸಂದೇಶ!
ಗಣರಾಜ್ಯೋತ್ಸವ ದಿನಾಚರಣೆ ಹಿನ್ನಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿ ಭಾಷಣ ಮಾಡಿದ್ದಾರೆ. ಗಣತಂತ್ರ ದಿನದ ಮಹತ್ವದ ಹಾಗೂ ಸ್ವಾತಂತ್ರ್ಯ ನಂತರ ಭಾರತ ಎದುರಿಸಿದ ಸವಾಲು ಹಾಗೂ ಸಾಧನೆ ಕುರಿತು ಮುರ್ಮು ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ. ದ್ರೌಪದಿ ಮುರ್ಮು ಭಾಷಣದ ವಿವರ ಇಲ್ಲಿದೆ.
ನವದೆಹಲಿ(ಜ.25) ಗಣರಾಜ್ಯೋತ್ಸವ ದಿನ ಪ್ರತಿಯೊಬ್ಬರ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯುತ್ತಾರೆ. ನಾವು ಗಣರಾಜ್ಯೋತ್ಸವ ದಿನಾಚರಣೆಯನ್ನು ಹಬ್ಬವಾಗಿ ಆಚರಿಸುತ್ತೇವೆ. ನಮ್ಮಲ್ಲಿರುವ ಹಲವು ಭಾಷಣೆ ನಮ್ಮನ್ನು ಒಡೆದಿಲ್ಲ ಬದಲಾಗಿ ಒಗ್ಗಟ್ಟಾಗಿಸಿದೆ ಎಂದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಯಲ್ಲಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಭಾರತದ ಸಾಧನೆ ಹಾಗೂ ಗಣತಂತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು.
ಸ್ವತಂತ್ರದ ಆರಂಭಿಕ ವರ್ಷದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಹಲವು ರಾಜ್ಯಗಳು, ಹಲವು ಭಾಷೆ, ಮತಗಳಿದ್ದರೂ ನಾವೆಲ್ಲರೂ ಒಂದೇ ಆಗಿದ್ದೇವೆ. ಇದು ಭಾರತದ ಸಾರವಾಗಿದೆ. ಇದರ ಸಾರ ಸಂವಿಧಾನದಲ್ಲಿದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಜೊತಗೆ ಭಾರತೀಯತೆಯನ್ನು ಮತ್ತೆ ಪುನರ್ ಸ್ಥಾಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿತ್ತು. ಇದನ್ನು ಗಣತಂತ್ರ ಮೂಲಕ ಭಾರತ ಒಗ್ಗಟ್ಟಾಗಿ ಮುನ್ನಡೆಯಿತು. ಸಂವಿಧಾನ ನಿರ್ಮಾಣದಲ್ಲಿ ಡಾ. ಬಿಆರ್ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ. ಸಂವಿಧಾನ ನಿರ್ಮಾಣದಲ್ಲಿ ಬಿಎನ್ ರಾವ್ ಅವರ ಕೊಡುಗೆಯನ್ನ ನಾವು ಇಂದು ಸ್ಮರಿಸಬೇಕು. ಸಂವಿಧಾನ ನಿರ್ಮಾಣದಲ್ಲಿ 15 ಮಹಿಳಾ ಸದಸ್ಯರು ಕೊಡುಗೆ ನೀಡಿದ್ದಾರೆ. ಸಂವಿಧಾನ ಆಶಯದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮಮೇಲಿದೆ. ಮಹಾತ್ಮಾ ಗಾಂಧಿ ಆದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆಯೋಣ. ಸ್ವಾತಂತ್ರ ಸಂದರ್ಭದಲ್ಲಿ ಶಿಕ್ಷಿತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಇದೀಗ ಭಾರತ ಶಿಕ್ಷಣ ಜೊತೆ ಅತೀ ದೊಡ್ಡ ಪ್ರಬಲ ರಾಷ್ಟ್ರವಾಗಿ ಬೆಳೆದುನಿಂತಿದೆ ಎಂದು ದ್ರೌಪದಿ ಮುರ್ಮು ಹೇಳಿದರು.
Republic Day: ಪರೇಡ್ ಎಷ್ಟು ಗಂಟೆಗೆ ಆರಂಭ, ಈ ಬಾರಿಯ ವಿಶೇಷತೆ ಏನು, ಇಲ್ಲಿದೆ ಸಂಪೂರ್ಣ ಮಾಹಿತಿ
ಹಿಂದಿನ ವರ್ಷ ಭಾರತ ವಿಶ್ವದಲ್ಲಿ 5ನೇ ಆರ್ಥಿಕೆಯಾಗಿ ಹೊರಹೊಮ್ಮಿದೆ. ಹಲವು ದೇಶಗಳು ಆರ್ಥಿಕತೆ ಸಮಸ್ಯೆ ಎದುರಿಸುತ್ತಿದೆ. ಕೊರೋನಾ ನಡುವೆಯೂ ಭಾರತ ದಿಟ್ಟ ಹೆಜ್ಜೆ ಇಟ್ಟಿತು. ಆತ್ಮ ನಿರ್ಭರ್ ಭಾರತ ಯೋಜನೆ ಮೂಲಕ ಹೊಸ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಗಿದೆ ಎಂದರು. ಕೊರೋನಾ ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಹಲವು ದೇಶಗಳ ಆರ್ಥಿಕ ಸಿತ್ಥಿ ಪಾತಾಳಕ್ಕೆ ತಲುಪಿದೆ. ಆದರೆ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಸಮರ್ಥವಾಗಿ ಕೊರೋನಾವನ್ನು ಎದುರಿ, ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ ಬೆಳೆಯುತ್ತಿದೆ ಎಂದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನೋ ಯೋಜನೆ ಮೂಲಕ ಕೊರೋನಾ ಸಮಯದಲ್ಲಿ ಬಡವರಿಗೆ ಆಹಾರ ನೀಡುವ ಯೋಜನೆಯನ್ನು ಮುಂದುವರಿಸಿಕೊಂಡು ಬರಲಾಗುತ್ತದೆ. ಇದರಿಂದ ದೇಶದ ಜನರು ಲಾಭ ಪಡೆಯುತ್ತಿದ್ದಾರೆ. ಯಾರೂ ಕೂಡ ಹಸಿವಿನಿಂದ ಇರಬಾರದು ಅನ್ನೋ ಉದ್ದೇಶದಿಂದ ಜಾರಿಗೊಂಡ ಯೋಜನೆ ಹಲವು ಬಾರಿ ವಿಸ್ತರಣೆಗೊಂಡಿದೆ ಎಂದು ಮುರ್ಮು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಆರ್ಥಿಕ, ಸಾಮಾಜಿಕ ಸಶಕ್ತಿಕರಣದ ಜೊತಗೆ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ನಮ್ಮ ವಿದ್ಯಾರ್ಥಿಗಳ ಜ್ಞಾನ, ಹಾಗೂ ಶಿಕ್ಷಣ ಪ್ರಕ್ರಿಯೆಯನ್ನು ಪರಿಣಾಕಾರಿಯಾಗಿ ಮಾಡಲಾಗಿದೆ. ಡಿಜಿಟಲ್ ಇಂಡಿಯಾ ಮಿಷನ್ ಮೂಲಕ ಪ್ರತಿ ಹಳ್ಳಿ ಹಳ್ಳಿಯಲ್ಲಿ ಕ್ರಾಂತಿ ಸೃಷ್ಟಿಸಲಾಗಿದೆ. ಹಳ್ಳಿ ಹಳ್ಳಿಯ ಇಂಟರ್ನೆಟ್ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಲಾಭ ಜನರಿಗೆ ಆಗುತ್ತಿದೆ ಎಂದರು.
Republic Day: ಟೈಗರ್ ಕ್ಯಾಟ್ ಮಿಸೈಲ್, ರಫೇಲ್, ಪ್ರಚಂಡ.. ಗಣರಾಜ್ಯೋತ್ಸವದಲ್ಲಿರಲಿದೆ ಭಾರತದ ಸೇನಾಶಕ್ತಿ!
ಗಗನಯಾನ ಕಾರ್ಯಕ್ರಮ, ಮಂಗಲ್ ಮಿಷನ್ ಸೇರಿದಂತೆ ಅಂತರಿಕ್ಷ ಯಾನ ಹಾಗೂ ಅಧ್ಯಯನ, ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರಿಗೆ ಮತ್ತಷ್ಟು ವಿಫುಲ ಅವಕಾಗಳನ್ನು ಸೃಷ್ಟಿಸಲಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.
ವಿಶ್ವ ಸಮುದಾಯ ಭಾರತವನ್ನು ಆಶಾಭಾವನೆಯಿಂದ ನೋಡುತ್ತಿದೆ. ಭಾರತ ಎಲ್ಲಾ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತಿದೆ. ಈ ವರ್ಷ ಭಾರತ ಜಿ20 ಅಧ್ಯಕ್ಷತೆಯನ್ನು ವಹಿಸಿದೆ. ಜಿ20 ಅಧ್ಯಕ್ಷತೆ ಮೂಲಕ ಅತ್ಯುತ್ತಮ ವಿಶ್ವ ನಿರ್ಮಾಣದಲ್ಲಿ ಭಾರತ ಮಹತ್ವದ ಭೂಮಿಕೆ ನಿರ್ವಹಿಸಲಿದೆ. ಭಾರತದ ನೇತೃತ್ವದಲ್ಲಿ ನ್ಯಾಯಯುತವಾಗಿ ಎಲ್ಲರ ಎಳಿಗೆಗಾಗಿ ಪ್ರಯತ್ನಿಸಲಿದೆ ಅನ್ನೋ ವಿಶ್ವಾಸ ನನಗಿದೆ ಎಂದು ಮುರ್ಮು ಹೇಳಿದರು.
ಜಾಗತಿಕ ತಾಪಮಾನ, ಪ್ರವಾಹ ಸೇರಿದಂತೆ ಹಲವು ಸಮಸ್ಯೆಗಳು ನಮ್ಮ ಮುಂದಿದೆ. ಇದಕ್ಕೆ ಜಿ20 ಅಧ್ಯಕ್ಷತೆಯಲ್ಲಿ ಭಾರತ ವಿಶ್ವದ ಜೊತೆ ಚರ್ಚಿಸಿ ಉತ್ತಮ ಪರಿಹಾರ ನೀಡುವಲ್ಲಿ ಸಫಲವಾಗಲಿದೆ. ಇದರ ಜೊತೆಗೆ ಭಾರತ ಎಲೆಕ್ಟ್ರಿಕ್ ವಾಹನಗಳತ್ತೆ ಹೆಚ್ಚಿನ ಒತ್ತು ನೀಡುತ್ತಿದ. ಈ ಮೂಲಕ ಕಾರ್ಬನ್ ಹಾಗೂ ತಾಪಮಾನ ಕಡಿಮೆ ಮಾಡಲು ಒತ್ತು ನೀಡುತ್ತಿದೆ. ವಿಕಾಸ ಹಾಗೂ ಅಭಿವೃದ್ಧಿ ನಡುವೆ ನಮ್ಮ ಪ್ರಾಚೀನ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಮುರ್ಮು ಹೇಳಿದರು.
ಮಹಾತ್ಮಾಗಾಂಧಿ ಅಧುನಿಕ ಭವಿಷ್ಯದ ಕುರಿತು ಸ್ಪಷ್ಟ ಕಲ್ಪನೆ ಹೊಂದಿದ್ದರು. ನಮ್ಮ ಮಕ್ಕಳು ಈ ಭೂಮಿಯಲ್ಲಿ ಸುಖಮಯವಾಗಿ ಕಳೆಯಲು ನಾವು ಅನುವುಮಾಡಿಕೊಡಬೇಕು. ಗಣತಂತ್ರದ ಈ ಶುಭಸಂದರ್ಭದಲ್ಲಿ ನಾವಿದ್ದೇವೆ. ಕಳೆದೆರಡು ವರ್ಷ ಕೊರೋನಾದಿಂದ ನಾವು ಹೈರಾಣಾಗಿದ್ದೇವು. ವೈರಸ್ ಮತ್ತೆ ಹರಡುವ ಸಾಧ್ಯತೆ ಇದೆ. ಆದರೆ ನಾವು ಆತಂಕ ಪಡಬೇಕಿಲ್ಲ. ನಮ್ಮ ಆರೋಗ್ಯ ಕ್ಷೇತ್ರ, ನಮ್ಮಲ್ಲಿರುವ ಸೌಕರ್ಯ, ಲಸಿಕೆ ಸಶಕ್ತವಾಗಿದೆ ಎಂದರು.
ರೈತರು, ಎಂಜಿನೀಯರ್ ಸೇರಿದಂತೆ ಎಲ್ಲಾ ವರ್ಗದವರು ಭಾರತದ ಪ್ರಗತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ನನ್ನ ನಮನಗಳು, ಪೊಲೀಸರು ಸೇರಿದಂತೆ ಎಲ್ಲಾ ಭದ್ರತಾ ಸಿಬ್ಬಂದಿಗಳಿಗೆ ಗಣರಾಜ್ಯೋತ್ಸವ ಶುಭಸಂದರ್ಭದಲ್ಲಿ ಎಲ್ಲರಿಗೂ ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ.