ಫ್ರೀ ಬಸ್ ಹತ್ತಿ 33 ತಾಸು ಬಾಲಕಿ ಓಡಾಟ; ಹಾಸ್ಟೆಲ್‌ಗೆ ತೆರಳಲು ಬೇಸತ್ತು ಸಂಚಾರ
ಬಾಲಕಿ ತಪ್ಪಿಸಿಕೊಂಡಿರುವುದಾಗಿ ನೀಡಲಾದ ದೂರನ್ನು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಬಾಲಕಿಯನ್ನು ಹೈದರಾಬಾದ್‌ನ ಜ್ಯೂಬಿಲಿ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಪೋಷಕರ ವಶಕ್ಕೆ ನೀಡಿದ್ದಾರೆ.
ಹೈದರಾಬಾದ್ (ಡಿಸೆಂಬರ್ 31, 2023): ಹಾಸ್ಟೆಲ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 12 ವರ್ಷದ ಬಾಲಕಿಯೊಬ್ಬಳು ಉಚಿತ ಬಸ್ ಸೇವೆಯನ್ನು ಬಳಸಿಕೊಂಡು 33 ಗಂಟೆಗಳ ಕಾಲ ಪ್ರಯಾಣ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಬಾಲಕಿ ತಪ್ಪಿಸಿಕೊಂಡಿರುವುದಾಗಿ ನೀಡಲಾದ ದೂರನ್ನು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಬಾಲಕಿಯನ್ನು ಹೈದರಾಬಾದ್‌ನ ಜ್ಯೂಬಿಲಿ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಪೋಷಕರ ವಶಕ್ಕೆ ನೀಡಿದ್ದಾರೆ. ವಿದ್ಯಾರಣ್ಯಪುರಿಯ ನಿವಾಸಿಯಾದ ಬಾಲಕಿ ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿದ್ದುಕೊಂಡು 8ನೇ ತರಗತಿಯಲ್ಲಿ ಓದುತ್ತಿದ್ದು, ಕ್ರಿಸ್ಮಸ್ ರಜೆಗಾಗಿ ಪೆದ್ದಪಳ್ಳಿಯಲ್ಲಿರುವ ತಾತನ ಮನೆಗೆ ತೆರಳಿದ್ದಳು.
ಇದನ್ನು ಓದಿ: ರೇವಂತ್ ರೆಡ್ಡಿ ಸರ್ಕಾರ ರಚನೆಯಾಗ್ತಿದ್ದಂತೆ ಕಡತ ಹರಿದು ಹಾಕಿದ ಮಾಜಿ ಸಚಿವರ ಸಹಾಯಕ; ಕಳ್ಳತನಕ್ಕೂ ಯತ್ನ!
ರಜೆಯ ಬಳಿಕ ತಾತನ ಮನೆಯಿಂದ ಹೊರಟ ಬಾಲಕಿ ಹಾಸ್ಟೆಲ್‌ಗೆ ಹೋಗಲು ಇಷ್ಟವಿಲ್ಲದೇ ಒಂದಾದ ಮೇಲೋಂದು ಬಸ್ ಬದಲಾಯಿಸುತ್ತಾ ಸುಮಾರು 33 ಗಂಟೆ ಪ್ರಯಾಣ ಮಾಡಿದ್ದಾಳೆ.
ಬಸ್ ಹತ್ತಿಸಿದ ಬಳಿಕ ಬಾಲಕಿ ಊರು ತಲುಪಿಲ್ಲ ಎಂಬುದರಿಂದ ಆತಂಕಗೊಂಡ ಆಕೆಯ ತಾತ ದೂರು ನೀಡಿದ್ದು, ಬಳಿಕ ಪೊಲೀಸರು ಪತ್ತೆ ಆರಂಭಿಸಿದ್ದಾರೆ.
ತೆಲಂಗಾಣದಲ್ಲಿ ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ ಚಾಲನೆ, 10 ಲಕ್ಷದ ಆರೋಗ್ಯ ವಿಮೆ