Viral Video: ಸೀಲ್ ಆಗಿರೋ ಬಿಯರ್ ಬಾಟಲಿಯಲ್ಲಿ ಫಂಗಸ್, ಕಾಂಗ್ರೆಸ್ ಸರ್ಕಾರವೇ ಕಾರಣ ಎಂದ ಎಣ್ಣೆಪ್ರಿಯರು!
ಅಚ್ಚರಿಯ ಘಟನೆಯಲ್ಲಿ ಸೀಲ್ ಆಗಿರುವ ಪ್ರತಿಷ್ಠಿತ ಕಂಪನಿಯ ಬಿಯರ್ ಬಾಟಲಿಯ ಒಳಗೆ ಫಂಗಸ್ ಪತ್ತೆಯಾಗಿದೆ. ಇದು ತಿಳಿಯುತ್ತಿದ್ದಂತೆ ಮದ್ಯಪ್ರಿಯರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹೈದರಾಬಾದ್ (ಆ.1): ಶಾಕಿಂಗ್ ಘಟನೆಯೊಂದರಲ್ಲಿ ಮದ್ಯಪ್ರಿಯರು ಒಬ್ಬರು ಖರೀದಿ ಮಾಡಿದ ಬಿಯರ್ ಬಾಟಲಿಯ ಒಳಗೆ ಫಂಗಸ್ ಪತ್ತೆಯಾಗಿದೆ. ತೆಲಂಗಾಣದ ಹನಮ್‌ಕೊಂಡಾದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಇದರಲ್ಲಿ ಪ್ರಖ್ಯಾತ ಕಿಂಗ್‌ಫಿಶರ್ ಬಿಯರ್ ಬಾಟಲಿಯನ್ನು ತೋರಿಸುತ್ತಾ ಇದರ ಒಳಗೆ ಫಂಗನ್ ಇರೋದನ್ನು ವಿಡಿಯೋ ಮಾಡಿದ್ದಾರೆ. ಫಂಗಸ್ ಇರುವುದು ಪತ್ತೆಯಾದ ಬೆನ್ನಲ್ಲಿಯೇ ಖರೀದಿ ಮಾಡಿದ ವ್ಯಕ್ತಿ, ವೈನ್ ಶಾಪ್ ಮಾಲೀಕನ ಬಳಿ ಹೋಗಿ ಫಂಗಸ್ ಇರುವ ಬಾಟಲಿಯನ್ನು ಕೊಟ್ಟು ಬೇರೆ ಬಿಯರ್ ಕೊಡುವಂತೆ ಒತ್ತಾಯ ಮಾಡಿದ್ದಾರೆ. ಅದರೊಂದಿಗೆ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ವ್ಯಕ್ತಿ ಕಿಡಿಕಾರಿದ್ದಾನೆ. ಸ್ಥಳೀಯ ವೈನ್‌ಶಾಪ್‌ನಲ್ಲಿ ಕಿಂಗ್‌ಫಿಶರ್ ಲೈಟ್ ಬಿಯರ್‌ಅನ್ನು ಖರೀದಿಸಿದ ಬಳಿಕ ಅದರಲ್ಲಿ ಫಂಗಸ್ ಇರುವುದನ್ನು ವ್ಯಕ್ತಿ ಗಮನಿಸಿದ್ದಾರೆ. ಇನ್ನೇನು ಬಾಟಲಿಯನ್ನು ಓಪನ್ ಮಾಡಿ ಮದ್ಯ ಸೇವಿಸಬೇಕು ಎಂದಾಗ, ಬಾಟಲಿಯ ಒಳಗೆ ಬಿಳಿಯ ರೀತಿಯ ವಸ್ತು ಕಂಡಿದ್ದಾರೆ.
ತಕ್ಷಣವೇ ಆ ಬಾಟಲಿಯನ್ನು ಹಿಡಿದುಕೊಂಡು ವೈನ್‌ಶಾಪ್‌ಗೆ ತೆರಲಿ ಅಲ್ಲಿನ ಮಾಲೀಕರಿಗೆ ತೋರಿಸಿದ್ದಾರೆ. ಬಿಯರ್ ಬದಲಾಯಿಸಿಕೊಡುವಂತೆ ವೈನ್ ಶಾಪ್ ಮಾಲೀಕನನ್ನು ಕೇಳಿದಾಗ, ಮಾಲೀಕ ಅಸಭ್ಯವಾಗಿ ಉತ್ತರ ನೀಡಿದ್ದು ಮಾತ್ರವಲ್ಲದೆ ವ್ಯಕ್ತಿಗೆ ಬೈದಿದ್ದಾನೆ. ಬಿಯರ್ ಬಾಟಲಿಯನ್ನು ಬದಲಾಯಿಸಿ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ವೈನ್ ಶಾಪ್ ಬಳಿಯಿದ್ದ ಇತರ ವ್ಯಕ್ತಿಗಳು ಮಾಲೀಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವುದು ಮಾತ್ರವಲ್ಲದೆ, ಮರ್ಯಾದೆಯಿಂದ ಬಿಯರ್ ಬಾಟಲಿಯನ್ನು ತೆಗೆದುಕೊಂಡು ಬೇರೆ ಬಿಯರ್ ನೀಡುವಂತೆ ತಿಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಾಲೀಕನಿಗೆ ಬಾಟಲಿಯನ್ನು ತೋರಿಸುತ್ತಿರುವ ವ್ಯಕ್ತಿ, 'ಬಿಯರ್ ಬಾಟಲಿಯಲ್ಲಿ ಮೀನು ಸ್ವಿಮ್ಮಿಂಗ್ ಮಾಡ್ತಾ ಇದೆ. ಜನರ ಜೀವನಕ್ಕೆ ಅಪಾಯವಿದೆ. ನೀವೇನು ಜನರನ್ನು ಸಾಯಿಸಬೇಕೆಂದು ಬಯಸಿದ್ದೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಅದಲ್ಲದೆ, ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಕಾಂಗ್ರೆಸ್ ಸರ್ಕಾರವನ್ನು ಜಾಡಿಸಿರುವ ವ್ಯಕ್ತಿ, ಕಾಂಗ್ರೆಸ್ ಸರ್ಕಾರ ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತೆಲಂಗಾಣದ ರಾಜ್ಯ ಸರ್ಕಾರಿ ಸ್ವಾಮ್ಯದ ವೈನ್ ಶಾಪ್‌ಗಳಲ್ಲಿ ನೀಡಲಾಗುತ್ತಿರುವ ಮದ್ಯದ ಗುಣಮಟ್ಟದ ಬಗ್ಗೆ ಈ ಘಟನೆ ಆತಂಕ ಮೂಡಿಸಿದೆ. ರಾಜ್ಯದ ಜನರಿಗೆ ನೀಡುತ್ತಿರುವ ಮದ್ಯದ ಗುಣಮಟ್ಟವನ್ನು ಪರಿಶೀಲಿಸಲು ತೆಲಂಗಾಣದಲ್ಲಿ ರಾಜ್ಯ ಸರ್ಕಾರವು ತೆಲಂಗಾಣ ರಾಜ್ಯ ಪಾನೀಯಗಳ ಕಾರ್ಪೊರೇಷನ್ ಲಿಮಿಟೆಡ್ (TSBCL) ವೈನ್ ಶಾಪ್‌ಗಳನ್ನು ನಡೆಸುತ್ತಿದೆ. ಆದರೆ, ಈ ಘಟನೆಯು ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲೆಯೇ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೆಂಡ್ತಿ ಖುಷಿಗಾಗಿ ಬಾಲ್ಯದ ಪ್ರೇಮಿ ಜೊತೆ ಪತ್ನಿ ಮದುವೆ ಮಾಡಿಸಿದ ಪತಿ! ಮಗು ಕಸ್ಟಡಿ ತನ್ನದೆಂದ ಗಂಡ!
ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಅನೇಕ ವ್ಯಕ್ತಿಗಳು, ಇದು ಸ್ಥಳೀಯ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡುತ್ತಿರುವ ಆರ್ಗಾನಿಕ್ ಬಿಯರ್ ಎಂದು ಲೇವಡಿ ಮಾಡಿದ್ದಾರೆ. ಫಂಗಸ್ ಆಗಿದ್ರೆ ಅದನ್ನು ರಿಟರ್ನ್ ತಗೊಂಡು ಬೇರೆ ಬಿಯರ್ ನೀಡಿದ್ರೆ ಆಗಿರೋದು. ಇಷ್ಟು ವೈರಲ್ ಕೂಡ ಆಗ್ತಾ ಇರ್ಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ 'ನಾಗಿಣಿ'ಯಾಗಿ ಪತ್ತೆ; ವಿಡಿಯೋ ನೋಡಿ