ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ ಉದ್ಘಾಟನೆಗೆ ಹೈದರಾಬಾದ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಗೈರು ಹಾಜರಾಗಿದ್ದಾರೆ. ಕೆಸಿಆರ್‌ ಅವರು ಶಿಷ್ಟಾಚಾರ ಪಾಲಿಸದೇ ಇರುವುದು ಅನೇಕರ ಹುಬ್ಬೇರಿಸಿದೆ.

ಹೈದರಾಬಾದ್‌ (ಫೆ.06): ರಾಮಾನುಜಾಚಾರ್ಯರ (Sri Ramanujacharya) ‘ಸಮಾನತೆಯ ಪ್ರತಿಮೆ’ ಉದ್ಘಾಟನೆಗೆ ಹೈದರಾಬಾದ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಸ್ವಾಗತದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (K Chandrashekar Rao) ಗೈರು ಹಾಜರಾಗಿದ್ದಾರೆ. ಕೆಸಿಆರ್‌ ಅವರು ಶಿಷ್ಟಾಚಾರ ಪಾಲಿಸದೇ ಇರುವುದು ಅನೇಕರ ಹುಬ್ಬೇರಿಸಿದೆ.

ರಾವ್‌ ಶೀಘ್ರದಲ್ಲೇ ಮಮತಾ ಬ್ಯಾನರ್ಜಿ (Mamata Banerjee), ಇನ್ನಿತರ ಪ್ರಬಲ ಪ್ರಾದೇಶಿಕ ಪಕ್ಷದ ನಾಯಕರೊಂದಿಗೆ ಮೋದಿ ವಿರುದ್ಧ ಒಗ್ಗೂಡುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಮೋದಿ ಅವರನ್ನು ಇತ್ತೀಚೆಗೆ ಟೀಕಿಸಿದ್ದರು. ಹೀಗಾಗಿ ಇವರ ಮುಂದಿನ ನಡೆ ಕುತೂಹಲ ಸೃಷ್ಟಿಸಿದೆ. ರಾವ್‌ ಅನಾರೋಗ್ಯ ಕಾರಣ ನೀಡಿ ಮೋದಿ ಸ್ವಾಗತಕ್ಕೆ ಹೋಗದಿದ್ದರೂ, ಸಮಾನತೆಯ ಪ್ರತಿಮೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅವರ ಪರವಾಗಿ ಸಚಿವ ತಲಸಾನಿ ಶ್ರೀನಿವಾಸ್‌ (Talasani Srinivas) ಅವರು ಮೋದಿ ಅವರನ್ನು ಸ್ವಾಗತಿಸಿದರು. ಆದರೆ ಕೆಸಿಆರ್‌ ನಡೆಯಿಂದ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಬಿಜೆಪಿ (BJP) ಕಿಡಿಕಾರಿದೆ.

40,000 ಕೋಟಿ ಸಾಲವಿದ್ದರೂ, ಅಧಿಕಾರಿಗಳಿಗೆ 32 ಐಷಾರಾಮಿ ಕಾರು ಖರೀದಿಸಿದ ರಾಜ್ಯ!

ಭಾರತದಲ್ಲಿ ಬದಲಾವಣೆ ಬರಬೇಕಾದರೆ ಸಂವಿಧಾನ ಬದಲಾಗಬೇಕು: ಹಿಂದೊಮ್ಮೆ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಆಡಿದ ಯಾವುದೋ ಮಾತಿನಲ್ಲಿ ಸಂವಿಧಾನಕ್ಕೆ ಬದಲಾವಣೆ ತರುತ್ತೇವೆ ಎನ್ನುವ ಸಾರಾಂಶ ಇದ್ದ ಕಾರಣಕ್ಕಾಗಿ ಇಡೀ ದೇಶದಲ್ಲಿ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಅವರ ಪ್ರತಿಕೃತಿ ದಹನ, ದಲಿತ ಸಂಘಟನೆಗಳ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದು ಮಾತ್ರವಲ್ಲದೆ ಅವರ ಮಾತುಗಳ ಬಗ್ಗೆ ಸಂಸತ್ತಿನಲ್ಲೂ ಚರ್ಚೆಯಾಗಿತ್ತು. 

ಆದರೆ, ದೇಶದ ಸಂವಿಧಾನ ಬಳಸಿಕೊಂಡೇ ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ವ್ಯಕ್ತಿ ನೇರವಾಗಿ ಪತ್ರಿಕಾಗೋಷ್ಠಿಯಲ್ಲಿಯೇ ಭಾರತದ ಸಂವಿಧಾನ ಬದಲಾಗಬೇಕು ಎನ್ನುವ ಮಾತನಾಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಭಟನೆಯಾಗಲಿ, ರಾಷ್ಟ್ರನಾಯಕರ ಖಂಡನೆಯಾಗಲಿ ಈವರೆಗೂ ವ್ಯಕ್ತವಾಗಿಲ್ಲ. ಫೆಬ್ರವರಿ 1 ರಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್, ಭಾರತವು ಜನರ ನಿರೀಕ್ಷೆಗಳನ್ನು ಪೂರೈಸಲು ಮತ್ತು ದೇಶವು ತನ್ನ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಗತಿ ಸಾಧಿಸಲು ತನ್ನ ಸಂವಿಧಾನವನ್ನು ಪುನಃ ಬರೆಯುವ ಅಗತ್ಯವಿದೆ ಎಂದು ಹೇಳಿದರು. 

ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ದಯನೀಯವಾಗಿ ವಿಫಲವಾಗಿವೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಗುಣಾತ್ಮಕ ಬದಲಾವಣೆಗೆ ಕರೆ ನೀಡಿದರು ಮತ್ತು ಬದಲಾವಣೆಯನ್ನು ತರಲು ಸಾಧ್ಯವಿರುವ ರೀತಿಯಲ್ಲಿ ಕೊಡುಗೆ ನೀಡುವುದಾಗಿ ಘೋಷಿಸಿದರು.

ಪುತ್ರನಿಗೆ ಸಿಎಂ ಪಟ್ಟ ಕಟ್ಟಿ ಕೆಸಿಆರ್‌ ರಾಷ್ಟ್ರ ರಾಜಕೀಯಕ್ಕೆ?

750 ಮೃತ ರೈತರಿಗೆ ಕೆಸಿಆರ್‌ 3 ಲಕ್ಷ ಪರಿಹಾರ: ರೈತ ವಿರೋಧಿ ಎನ್ನಲಾದ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ರೈತರು ನಡೆಸಿದ ನಿರಂತರ ಹೋರಾಟದಲ್ಲಿ ಸಾವನ್ನಪ್ಪಿದ 750ಕ್ಕೂ ಹೆಚ್ಚು ರೈತರಿಗೆ ತಲಾ 3 ಲಕ್ಷ ರು. ಪರಿಹಾರ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಘೋಷಿಸಿದ್ದಾರೆ. ಅಲ್ಲದೆ ಈ ಹೋರಾಟದಲ್ಲಿ ಮಡಿದ ರೈತರ ಪ್ರತಿ ಕುಟುಂಬಗಳಿಗೆ ಕೇಂದ್ರ ಸರ್ಕಾರ 25 ಲಕ್ಷ ರು. ಪರಿಹಾರ ನೀಡಬೇಕು. ಜತೆಗೆ ಅವರ ವಿರುದ್ಧ ದಾಖಲಾದ ಎಲ್ಲಾ ಕೇಸ್‌ಗಳನ್ನು ಬೇಷರತ್‌ ಆಗಿ ಹಿಂಪಡೆಯಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.