2023 ರ ತೆಲಂಗಾಣ ರಾಜ್ಯ ವಿಧಾನಸಭೆಯ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ 'ಡೀಪ್‌ಫೇಕ್' ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ದುರುಪಯೋಗ ಮಾಡಿದೆ ಎಂದು ಬಿಆರ್‌ಎಸ್‌ ಬುಧವಾರ ಪತ್ರ ಬರೆದಿದೆ. ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಈ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ.

ನವದೆಹಲಿ (ನವೆಂಬರ್ 30, 2023): ತೆಲಂಗಾಣ ವಿಧಾನಸಭೆ ಚುನಾವಣೆ 2023ರ ಮತದಾನ ಇಂದು ನಡೆಯುತ್ತಿದ್ದು, ಅಧಿಕಾರಕ್ಕೇರಲು ರಾಜಕೀಯ ಪಕ್ಷಗಳು ಆರೋಪ - ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಪಕ್ಷ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ‘ಡೀಪ್‌ಫೇಕ್’ ತಂತ್ರಜ್ಞಾನವನ್ನು ಕಾನೂನುಬಾಹಿರವಾಗಿ ಬಳಸಿರುವುದರ ವಿರುದ್ಧ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಪತ್ರ ಬರೆದಿದೆ.

2023 ರ ತೆಲಂಗಾಣ ರಾಜ್ಯ ವಿಧಾನಸಭೆಯ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ 'ಡೀಪ್‌ಫೇಕ್' ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ದುರುಪಯೋಗ ಮಾಡಿದೆ ಎಂದು ಬಿಆರ್‌ಎಸ್‌ ಬುಧವಾರ ಪತ್ರ ಬರೆದಿದೆ. ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಈ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ.

ಇದನ್ನು ಓದಿ: 50 ವರ್ಷ ದಾಟಿದೆ, ಒಂಟಿತನ ಕಾಡ್ತಿದೆ: ರಾಹುಲ್‌ ಗಾಂಧಿ ವಿರುದ್ಧ ಓವೈಸಿ ವ್ಯಂಗ್ಯ

ಮೂಲಗಳ ಪ್ರಕಾರ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯು (ಟಿಪಿಸಿಸಿ) ‘ಡೀಪ್‌ಫೇಕ್’ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ನಕಲಿ ಆಡಿಯೋ ಹಾಗೂ ವಿಡಿಯೋ ಕಂಟೆಂಟ್‌ಗಳ ಸೃಷ್ಟಿ ಮತ್ತು ಪ್ರಸಾರದಲ್ಲಿ ತೊಡಗಿಸಿಕೊಂಡಿದೆ ಎಂದು ಬಿಆರ್‌ಎಸ್‌ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಕಪೋಲಕಲ್ಪಿತ ವಿಷಯವು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಸೇರಿದಂತೆ ಪ್ರಮುಖ ನಾಯಕರನ್ನು ಗುರಿಯಾಗಿಸಿದೆ ಮತ್ತು ಐಟಿ ಸಚಿವ ಕೆ. ರಾಮರಾವ್, ಹಣಕಾಸು ಸಚಿವ ಹರೀಶ್ ರಾವ್, ತೆಲಂಗಾಣ ವಿಧಾನ ಪರಿಷತ್ ಸದಸ್ಯೆ ಕವಿತಾ ಕಲ್ವಕುಂಟ್ಲಾ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಇತರ ಸ್ಪರ್ಧಿಗಳನ್ನು ಟಾರ್ಗೆಟ್‌ ಮಾಡಿದೆ ಎಂದೂ ಆರೋಪಿಸಿದೆ. 

ತೆಲಂಗಾಣ ಕಾಂಗ್ರೆಸ್ ವಿರುದ್ಧ ಬಿಆರ್‌ಎಸ್ ಆರೋಪ 

ಕೃತಕ ಬುದ್ಧಿಮತ್ತೆಯ ಒಂದು ವಿಧವಾದ ಡೀಪ್‌ಫೇಕ್ ತಂತ್ರಜ್ಞಾನವು ಹೈಪರ್ - ರಿಯಲಿಸ್ಟಿಕ್ ವಿಡಿಯೋಗಳು ಅಥವಾ ಆಡಿಯೋ ರೆಕಾರ್ಡಿಂಗ್‌ಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ. ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಮತ್ತು ಹಾನಿಯುಂಟುಮಾಡುವ ಮನವೊಪ್ಪಿಸುವ ನಕಲಿ ವಿಷಯ ರಚಿಸಲು ಅಂತಹ ತಂತ್ರಜ್ಞಾನದ ಸಂಭಾವ್ಯ ಬಳಕೆಯ ಬಗ್ಗೆ ಇದು ಕಳವಳವನ್ನು ಹುಟ್ಟುಹಾಕುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇದನ್ನು ಓದಿ: ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್‌; ಬಿಜೆಪಿ ಲೇವಡಿ

ಚುನಾವಣಾ ಪ್ರಚಾರದಲ್ಲಿ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸುವುದರ ಗಾಂಭೀರ್ಯವನ್ನು ಪತ್ರವು ಒತ್ತಿಹೇಳಿದೆ. ಹಾಗೂ, ಇದು ಕಾನೂನುಬಾಹಿರ, ಸ್ವೀಕಾರಾರ್ಹವಲ್ಲ ಮತ್ತು ಅಪರಾಧದ ಸ್ವರೂಪವನ್ನು ಪರಿಗಣಿಸುತ್ತದೆ ಎಂದೂ ಹೇಳಿದೆ. ಇಂತಹ ಮೋಸಗೊಳಿಸುವ ಅಭ್ಯಾಸಗಳು ಚುನಾವಣೆಯ ಫಲಿತಾಂಶದ ಮೇಲೆ ಅನ್ಯಾಯವಾಗಿ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂದೂ ಬಿಆರ್‌ಎಸ್‌ ಗಮನಸೆಳೆದಿದೆ.

'ಡೀಪ್‌ಫೇಕ್' ಕಂಟೆಂಟ್‌ ಮತ್ತು ಇತರ ರೀತಿಯ ನಕಲಿ ಕಂಟೆಂಟ್‌ ನಡುವೆ ಯಾವುದೇ ಕಾನೂನು ವ್ಯತ್ಯಾಸವಿಲ್ಲ. ಎಲ್ಲಾ ರೀತಿಯ ನಕಲಿ ಕಂಟೆಂಟ್‌ ಅನ್ನು ಚುನಾವಣಾ ಪ್ರಚಾರದಲ್ಲಿ ಸಮಾನವಾಗಿ ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸಲಾಗುತ್ತದೆ, ಇದು ಭ್ರಷ್ಟ ಅಭ್ಯಾಸಗಳನ್ನು ರೂಪಿಸುತ್ತದೆ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.

ಛತ್ತೀಸ್‌ಗಢದಲ್ಲಿ ಮತಯಂತ್ರ ಸಾಗಿಸುತ್ತಿದ್ದ ವಾಹನ ಸ್ಪೋಟಿಸಿದ ನಕ್ಸಲರು; ಯೋಧ ಬಲಿ: 2 ರಾಜ್ಯಗಳಲ್ಲಿ ಉತ್ತಮ ಮತದಾನ