ಬೆಂಗಳೂರು/ ಹೈದರಾಬಾದ್(ನ.  24)  ಪಶ್ಚಿಮ ಬಂಗಾಳದ ನಂತರ ಹೈದರಾಬಾದ್ ಗೆ ಭೇಟಿ ನೀಡಿದ್ದ ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ  ಟ್ವಿಟರ್ ನಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಹೈದರಾಬಾದ್ ನ್ನು ಭಾಗ್ಯನಗರ ಎಂದು ಕರೆದಿರುವುದು ಟೀಕೆಗೆ ಮೂಲ ಕಾರಣ. ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಸಂಬಂಧ ಪ್ರವಾಸ ಮಾಡಿದ್ದ ಸೂರ್ಯ ವಿವಿಧ ಕಡೆ ಸಭೆ ನಡೆಸಿದ್ದರು.   ಟ್ವೀಟ್ ಆರಂಭದಲ್ಲಿ ಭಾಗ್ಯನಗರ ಎಂದು ಕರೆದಿದ್ದಕ್ಕೆ ಟೀಕೆ ವ್ಯಕ್ತವಾಗಿದೆ.

'ಜಿನ್ನಾ ಮತ್ತೊಂದು ಅವತಾರ ಓವೈಸಿ'

ಹೈದರಾಬಾದ್ ಹೆಸರು ಬದಲಾಯಿಸುವ ಸೂರ್ಯ ಐಡಿಯಾ ಹಲವರ ತಿರಸ್ಕಾರಕ್ಕೆ ಗುರಿಯಾಗಿದೆ.  ಗೋ ಬ್ಯಾಕ್ ಎಂಬ ಘೊಷಣೆಗಳು ಮೊಳಗಿವೆ.

#ItIsHyderabadNotBhagyanagar ಎಂಬ ಹ್ಯಾಷ್ ಟ್ಯಾಗ್ ಸಹ ಟ್ರೆಂಡ್ ಆಗಿದೆ.  ಯೋಗಿ ಆದಿತ್ಯನಾಥ್ ಸಹ  2018  ರಲ್ಲಿ ಹೈದರಾವಾದ್ ನ್ನು ಭಾಗ್ಯನಗರ ಎಂದು ಬದಲಾಯಿಸಬೇಕು ಎಂದಿದ್ದರು.