ಹೈದರಾಬಾದ್‌(ನ.24): ಡಿ.1ರಂದು ನಡೆಯಲಿರುವ ಹೈದ್ರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಬಿಜೆಪಿ ಸಂಸದ ಮತ್ತು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸೋಮವಾರ ಇಲ್ಲಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಪಕ್ಷದ ಪರ ಚುನಾವಣಾ ಕಹಳೆ ಮೊಳಗಿಸಿದ್ದಾರೆ.

ಸೋಮವಾರ ‘ಚೇಂಜ್‌ ಹೈದರಾಬಾದ್‌’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ತೇಜಸ್ವಿ, ‘ತೆಲಂಗಾಣ ಮತ್ತು ಹೈದರಾಬಾದ್‌ನಲ್ಲಿ ಸರ್ಕಾರ ಮತ್ತು ಪಕ್ಷಗಳು ಕುಟುಂಬದ, ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ ಎಂಬಂತೆ ಕಾರ್ಯ ನಿರ್ವಹಿಸುತ್ತಿವೆ. ಅಸಾದುದ್ದೀನ್‌ ಓವೈಸಿ ಭಾರತದ ವಿಭಜಕ ಮೊಹಮ್ಮದ್‌ ಅಲಿ ಜಿನ್ನಾರ ಹೊಸ ಅವತಾರ ಇದ್ದಂತೆ ಎಂದು ಸೂರ್ಯ ಕಿಡಿಕಾರಿದರು. ಬಿಜೆಪಿಯಲ್ಲಿ ನನ್ನಂಥ ಓರ್ವ ಸಾಮಾನ್ಯ ಕಾರ್ಯಕರ್ತ ಸಹ ರಾಷ್ಟ್ರೀಯ ನಾಯಕನಾಗಬಹುದು. ಇತರೆ ಪಕ್ಷಗಳಲ್ಲಿ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.

ಪಶ್ಚಿಮ ಬಂಗಾಳ ಪೊಲೀಸರ ವಿರುದ್ಧ ತೇಜಸ್ವಿ ಹಕ್ಕುಚ್ಯುತಿ!

ಇನ್ನು ಸಿಎಂ ಕೆಸಿಆರ್‌ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ, ಹೈದರಾಬಾದ್‌ ಅಭಿವೃದ್ಧಿಗೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿದ್ದ ಹಣ ಏನಾಯಿತು ಎಂದು ತೆಲಂಗಾಣ ಸರ್ಕಾರಕ್ಕೆ ಒತ್ತಾಯಿಸುವಂತೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಿಗೆ ಕರೆ ನೀಡಿದರು.