ಬಾಯ್‌ಫ್ರೆಂಡ್ ಬರ್ತ್‌ಡೇ ಆಚರಿಸಲು ಸ್ವಂತ ಮನೆಯನ್ನೇ ದೋಚಿದ 18ರ ಹುಡುಗಿ

ಹರೆಯದ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಹುಟ್ಟುಹಬ್ಬ ಆಚರಿಸಲು ತನ್ನ ಸ್ವಂತ ಮನೆಯನ್ನೇ ದೋಚಿದ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.

teenage girl robbed her own house to celebrate her birthday with her boyfriend akb

ಮುಂಬೈ:  ಹರೆಯದ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಹುಟ್ಟುಹಬ್ಬ ಆಚರಿಸಲು ತನ್ನ ಸ್ವಂತ ಮನೆಯನ್ನೇ ದೋಚಿದ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.  ಪೊಲೀಸರ ಪ್ರಕಾರ, ಹೀಗೆ ಸ್ವಂತ ಮನೆಯನ್ನೇ ದೋಚಿದ ಹುಡುಗಿ ಹಾಗೂ ಆಕೆಯ ಗೆಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಇವರಿಬ್ಬರು ಬೇರೆಯದೇ ಕತೆ ಹೊಡೆದಿದ್ದಾರೆ.  ಈ ಹುಡುಗಿ ಹಾಗೂ ಗೆಳೆಯನನ್ನು ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಕೇಳಿದಾಗ ಅವರಿಬ್ಬರು ಹುಡುಗಿಯ ಮತ್ತೊಬ್ಬ ಸ್ನೇಹಿತ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. 

ಹುಟ್ಟುಹಬ್ಬವನ್ನು (Birthday) ಬಹಳ ಗ್ರ್ಯಾಂಡ್ ಆಗಿ ಆಚರಿಸುವುದು ಯುವಕ ಯುವತಿಯರ ಇತ್ತೀಚಿನ ಟ್ರೆಂಡ್. ದೊಡ್ಡವರು ಸಣ್ಣವರೆನ್ನದೇ ಎಲ್ಲರೂ ಇತ್ತೀಚೆಗೆ ಹುಟ್ಟುಹಬ್ಬವನ್ನು ಬಹಳ ಗ್ರಾಂಡ್ ಆಗಿ ಆಚರಿಸುತ್ತಾರೆ.  ಹೀಗೆ ಗೆಳೆಯನ ಹುಟ್ಟುಹಬ್ಬ ಆಚರಿಸಲು ಯುವತಿಯೊಬ್ಬಳು ತನ್ನ ಮನೆಯಲ್ಲಿದ್ದ ಕುಟುಂಬದ ಚಿನ್ನಾಭರಣವನ್ನು ತೆಗೆದುಕೊಂಡು ಬಂದು ಗೆಳೆಯನಿಗೆ ನೀಡಿ ಅದಕ್ಕೆ ಪ್ರತಿಯಾಗಿ ಹಣ ತೆಗೆದುಕೊಂಡು ಇಬ್ಬರು ಸೇರಿ ಗ್ರ್ಯಾಂಡ್ ಆಗಿ ಬರ್ತ್‌ಡೇ ಆಚರಿಸಿದ್ದಾರೆ.  ಸಹಾಯಕ ಪೊಲೀಸ್ ಅಧಿಕಾರಿ  ನಿಲೇಶ್ ಸೊನಾವಾನೆ (Nilesh Sonawane) ಅವರ ಪ್ರಕಾರ, ಬುಧವಾರ ಜನವರಿ11 ರಂದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್ ವಿಚಾರಣೆ ವೇಳೆ, ಈ ಖದೀಮ ಜೋಡಿ, ಹುಡುಗಿಯ ಮತ್ತೊಬ್ಬ ಗೆಳೆಯ ಇವರಿಬ್ಬರಿಗೆ ಬ್ಲಾಕ್‌ಮೇಲ್ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. 

ಸತ್ತ ನಂತರವೂ ಹಿಂಬಾಲಿಸ್ತಾಳಂತೆ ಪ್ರೇಯಸಿ, ಭಯಪಟ್ಟ ಪ್ರೇಮಿಯಿಂದ ಬಯಲಾಯ್ತು ಸಾವಿನ ರಹಸ್ಯ !

ಇದಕ್ಕೂ ಮೊದಲು ಜನವರಿ 7 ರಂದು ಹುಡುಗಿ ಕಪುರ್ಬ್ವಾಡಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ತನ್ನ ಬಾಯ್‌ಫ್ರಂಡ್ ನನ್ನ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ನನಗೆ ಹಣಕ್ಕಾಗಿ ಬೆದರಿಕೆಯೊಡ್ಡುತ್ತಿದ್ದಾನೆ. ಈ ಕಾರಣಕ್ಕೆ ತಾನು ತನ್ನದೇ ಮನೆಯಿಂದ ಚಿನ್ನಾಭರಣ ಕದ್ದು ಅವನಿಗೆ ನೀಡಿದೆ.  ಈ ವೇಳೆ ಹುಡುಗನನ್ನು ವಿಚಾರಿಸಿದಾಗ ಆತ ಆಕೆ ನೀಡಿದ ಜ್ಯುವೆಲ್ಲರಿಯನ್ನು ಪೊಲೀಸರಿಗೆ ನೀಡಿದ್ದಾಗಿ ಹೇಳಿದ್ದಾನೆ. 

ಆದರೆ, ಪೊಲೀಸರು ತನಿಖೆ ನಡೆಸಿದಾಗ ಅಂತಹ ಯಾವುದೇ ಆಭರಣ ಮಾರಾಟ ನಡೆದಿಲ್ಲ ಎಂದು ತಿಳಿದು ಬಂದಿದೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ (CCTV footage) ಬಾಲಕನ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದು ತಿಳಿದು ಬಂದಿದೆ. ಹೀಗಾಗಿ ಹುಡುಗಿಯನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ, ಹುಡುಗಿ ನಿಜವಾಗಿ ಹುಟ್ಟುಹಬ್ಬದ ವೆಚ್ಚಕ್ಕಾಗಿ ಬೇರೆ ಗೆಳೆಯನಿಗೆ ಆಭರಣವನ್ನು ನೀಡಿದ್ದಳು ಮತ್ತು ಅವನನ್ನು ರಕ್ಷಿಸಲು ಬ್ಲ್ಯಾಕ್‌ಮೇಲ್ ಕತೆ ಕಟ್ಟಿದ್ದಳು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. 

ವಿಶೇಷ ಭೋಜನ ಕೊಡಿಸಿಲ್ಲ ಎಂದು ಬ್ರೇಕ್ ಅಪ್ ಮಾಡ್ಕೊಂಡ ಯುವತಿ

ಅವರು 18 ವರ್ಷ ವಯಸ್ಸಿನ ತನ್ನ ಗೆಳೆಯನೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದು ಅವರು ತಮ್ಮ ಈ ಸಂಭ್ರಮಾಚರಣೆಗಾಗಿ 53,000 ರೂಪಾಯಿಗಳಿಗೆ ಆಭರಣಗಳನ್ನು ಮಾನ್ಪಾಡದ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದಾರೆ. ಚಿನ್ನಾಭರಣಗಳು ಕದ್ದ ವಸ್ತುಗಳು ಎಂದು ತಿಳಿದಿದ್ದರೂ ಖರೀದಿಸಿದ ಆಭರಣ ವ್ಯಾಪಾರಿಯನ್ನು ಕೂಡ  ಪೊಲೀಸರು ಬಂಧಿಸಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 380 ರ ಅಡಿ( ಸ್ವಂತ ಮನೆಯಲ್ಲೇ ಕಳ್ಳತನ)  ಹಾಗೂ ಸೆಕ್ಷನ್ 411( ಕದ್ದ ಮಾಲನ್ನು ಖರೀದಿಸಿದ್ದ ಆರೋಪ) ದಡಿ  ಪ್ರಕರಣ ದಾಖಲಾಗಿದೆ ಎಂದು ಕಪುರ್ವಾಡಿ ಪೊಲೀಸ್ ಠಾಣೆಯ (Kapurbawdi police station) ಹಿರಿಯ ಇನ್ಸ್‌ಪೆಕ್ಟರ್  ಉತ್ತಮ್ ಸೊನಾವಾಣೆ (Uttam Sonavane) ಹೇಳಿದ್ದಾರೆ. 

Latest Videos
Follow Us:
Download App:
  • android
  • ios