Asianet Suvarna News Asianet Suvarna News

ವಿಶೇಷ ಭೋಜನ ಕೊಡಿಸಿಲ್ಲ ಎಂದು ಬ್ರೇಕ್ ಅಪ್ ಮಾಡ್ಕೊಂಡ ಯುವತಿ

ಇಲ್ಲೊಂದು ಕಡೆ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಕುಟುಂಬ ಹಾಗೂ ತನ್ನ ಕುಟುಂಬದ ಮೊದಲ ಭೇಟಿ ವೇಳೆ ಉತ್ತಮ ಭೋಜನ ಸಿದ್ಧಪಡಿಸಿಲ್ಲ ಎಂದು ಬ್ರೇಕ್ ಅಪ್ ಮಾಡಿಕೊಂಡಿದ್ದಾಳಂತೆ. ಚೀನಾದಿಂದ ಈ ವಿಚಿತ್ರ ಪ್ರಕರಣ ವರದಿಯಾಗಿದೆ. 

A young woman broke up because she was not given a special dinner from his boyfriend family in china akb
Author
First Published Jan 10, 2023, 10:34 PM IST

ಅಬ್ಬಾ ಈ ಪ್ರಪಂಚದಲ್ಲಿ ಎಂಥೆಂತಾ ಸಣ್ಣಪುಟ್ಟ ಕಾರಣಗಳಿಗೆಲ್ಲಾ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ ಎಂದು ಹೇಳಲಾಗದು. ಅದೇ ರೀತಿ ಇಲ್ಲೊಂದು ಕಡೆ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಕುಟುಂಬ ಹಾಗೂ ತನ್ನ ಕುಟುಂಬದ ಮೊದಲ ಭೇಟಿ ವೇಳೆ ಉತ್ತಮ ಭೋಜನ ಸಿದ್ಧಪಡಿಸಿಲ್ಲ ಎಂದು ಬ್ರೇಕ್ ಅಪ್ ಮಾಡಿಕೊಂಡಿದ್ದಾಳಂತೆ. ಚೀನಾದಿಂದ ಈ ವಿಚಿತ್ರ ಪ್ರಕರಣ ವರದಿಯಾಗಿದೆ. 

ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮನೆಯವರಿಗೆ ವಿಚಾರ ತಿಳಿಸಿದ್ದು, ನಂತರ ಕುಟುಂಬದವರು ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ, ಯುವತಿ ಮನೆಯವರು ಯುವಕನ ಮನೆಗೆ ಬಂದಿದ್ದಾರೆ. ಆದರೆ ಈ ವೇಳೆ ಚೆನ್ನಾಗಿ ಸತ್ಕಾರ ಮಾಡಿಲ್ಲ, ತನ್ನ ಬಾಯ್‌ಫ್ರೆಂಡ್‌ನ ಕುಟುಂಬದವರು ತನ್ನ ಕುಟುಂಬಕ್ಕಾಗಿ ಉತ್ತಮವಾದ ವಿಶೇಷ ಭೋಜನವನ್ನು ಸಿದ್ಧಪಡಿಸಿಲ್ಲ ಎಂದು ಕುಪಿತಗೊಂಡ ಯುವತಿ ಯುವಕನೊಂದಿಗೆ ಸಂಬಂಧ ಮುರಿದುಕೊಂಡಿದ್ದಾಳೆ.

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ (Sichuan province) ಈ ವಿಚಿತ್ರ ಘಟನೆ ನಡೆದಿದೆ.  ಅಂದಹಾಗೆ ಈಕೆಯ ಬಾಯ್‌ಫ್ರೆಂಡ್ ಮನೆಯವರು ಈಕೆಯ ಕುಟುಂಬಕ್ಕಾಗಿ ಹುರಿದ ಮೊಟ್ಟೆಯನ್ನು ಒಳಗೊಂಡ ನೂಡಲ್ಸ್, ಕುಂಬಳಕಾಯಿ ಗಂಜಿ,  ಹಾಗೂ ತರಹೇವಾರಿ ತಣ್ಣನೆಯ ಭಕ್ಷ್ಯಗಳನ್ನು ಬಡಿಸಿದ ನಂತರ ಮಹಿಳೆ ನಿರಾಶೆಗೊಂಡಿದ್ದಾರೆ.  ಯುವಕನ ಮನೆಯವರು ತಯಾರಿಸಿದ ಆಹಾರದ ಫೋಟೋದೊಂದಿಗೆ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ 20ರ ಹರೆಯದ ಯುವತಿಯೇ ಹೀಗೆ ಕ್ಷುಲ್ಲಕ ಕಾರಣಕ್ಕೆ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಾಕೆ. 

ಹೀಗೆ ಆಗ್ತಿದ್ಯಾ? ಬ್ರೇಕ್ ಅಪ್ ಮಾಡಿಕೊಳ್ಳುವುದೇ ಬೆಸ್ಟ್ ನೋಡಿ!

ಈಕೆ ಪ್ರಿಯಕರನ (Lover) ಕುಟುಂಬವನ್ನು ಭೇಟಿಯಾಗಲು ತನ್ನ ಕುಟುಂಬದೊಂದಿಗೆ ಹೋಗಿದ್ದಾಳೆ. ಈ ಘಟನೆಯಿಂದ ಆಕೆ ಚಿಂತೆಗೀಡಾಗಿದ್ದು, ಮುಂದಿನ ಭೇಟಿಗೆ ಕಾಯುತ್ತಿರುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ.  ಮೊದಲ ಭೇಟಿಯ ವೇಳೆ ಆಕೆ ಭೂರಿ ಭೋಜನದ ನಿರೀಕ್ಷೆಯಲ್ಲಿದ್ದಳು.  ಆದರೆ ಹುಡುಗನ ಮನೆಯವರು ಹುರಿದ ಮೊಟ್ಟೆಯಿಂದ ಕೂಡಿದ ನೂಡಲ್ಸ್ , ಕುಂಬಳಕಾಯಿ ಗಂಜಿ (pumpkin porridge) ಬಳಸಿದ ಬಳಿಕ ಅವಳು ಅಸಮಾಧಾನಗೊಂಡಿದ್ದಾಳೆ.  ನಾನು ನೂಡಲ್ಸ್ ಇಷ್ಟಪಡಲ್ಲ ಎಂದು ಅವನಿಗೆ ತಿಳಿದಿತ್ತು. ಆದರೂ ನೂಡಲ್ಸ್ ಕೊಟ್ಟರು ಎಂದು ಯುವತಿ ದೂರಿದ್ದಾಳಂತೆ. ಅಲ್ಲದೇ ಅಲ್ಲಿ ನೀಡಿದ ಆಹಾರ (Food) ದೈನಂದಿನ ದಿನಗಳಲ್ಲಿ ಬಹುತೇಕರು ಬಳಸುವ ಸಾಮಾನ್ಯ ಆಹಾರ ಎಂದು ಆಕೆ ಹೇಳಿದ್ದಾಳೆ. 

ಹೀಗಾಗಿ ಎರಡು ದಿನಗಳ ಬಳಿಕ ಈ ಕುಟುಂಬದೊಂದಿಗೆ ಜೀವನ ಪೂರ್ತಿ ಇರಲು ಸಾಧ್ಯವಿಲ್ಲ ಎನಿಸಿದ್ದು, ಬ್ಯಾಗ್ ಪ್ಯಾಕ್ ಮಾಡಿ ಬಾಯ್‌ಫ್ರೆಂಡ್‌ಗೆ ಬಾಯ್ ಬಾಯ್ ಹೇಳಿದ್ದಾಳೆ.  ಈ ವಿಚಾರವನ್ನು ಚೀನಾದ ಸೋಶಿಯಲ್ ಮೀಡಿಯಾ (social Media) ಸೈಟ್‌ನಲ್ಲಿ ವಿಡಿಯೋ ಮಾಡಿ ಮಹಿಳೆ ಹೇಳಿಕೊಂಡಿದ್ದಾಳೆ. ಈ ವಿಡಿಯೋವನ್ನು 7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.  ಅಲ್ಲದೇ ಅನೇಕರು ಆಕೆಯನ್ನು ಬೆಂಬಲಿಸಿದ್ದಾರಂತೆ, ಮದುವೆಯಾಗುವ ಮೊದಲೇ ಎಲ್ಲಾ ವಿಚಾರ ತಿಳಿದಿದ್ದಕ್ಕೆ ಆಕೆ ಕೃತಜ್ಞಳಾಗಿದ್ದಾಳೆ ಎಂದು ಆಕೆ ಹೇಳಿಕೊಂಡಿದ್ದಾಳೆ. 

Break Up: ತಲೆ ಕೆಡಿಸಿಕೊಂಡರೆ ಸಾಗದು ಜೀವನ ಮುಂದೆ, ಹೀಗ್ ಮಾಡಿ ನೋವು ದೂರ ಮಾಡಿಕೊಳ್ಳಿ!

Follow Us:
Download App:
  • android
  • ios