Asianet Suvarna News Asianet Suvarna News

ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ತಂತ್ರಜ್ಞಾನ ಕೆಲಸ: ಸಚಿವ ರಾಜೀವ್‌ ಚಂದ್ರಶೇಖರ್‌

ತಂತ್ರಜ್ಞಾನ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಪರಿವರ್ತಿಸಲು ಮತ್ತು ರೂಪುಗೊಂಡಿವೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

technology work for what democracy wants Minister of State for Electronics and IT Rajeev Chandrasekhar said akb
Author
First Published Feb 14, 2023, 6:44 AM IST

ಲಖನೌ: ತಂತ್ರಜ್ಞಾನ ಕೇವಲ ನಾವೀನ್ಯತೆ, ಯಶಸ್ಸು ಮತ್ತು ಯುನಿಕಾರ್ನ್‌ಗಳಿಗೆ ಮಾತ್ರವಲ್ಲ, ಜನರ ಜೀವನ, ಆಡಳಿತ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಪರಿವರ್ತಿಸಲು ಮತ್ತು ರೂಪುಗೊಂಡಿವೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajiv Chandrasekhar) ಅವರು ಹೇಳಿದರು.

ಇಲ್ಲಿ ನಡೆದ ಜಿ 20 ರಾಷ್ಟ್ರಗಳ ವರ್ಕಿಂಗ್‌ ಗ್ರೂಪ್‌ (G20 working group) ಸಭೆಯ ಉದ್ಘಾಟನೆಯಲ್ಲಿ ಮಾತನಾಡಿದ ಅವರು, 2015 ರಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮ (Digital India program) ಪ್ರಾರಂಭಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು 3 ಗುರಿಗಳನ್ನು ಹಾಕಿದ್ದರು. ತಂತ್ರಜ್ಞಾನ ಜನರನ್ನು ಸಬಲೀಕರಣಗೊಳಿಸಬೇಕು, ಡಿಜಿಟಲ್ ಆರ್ಥಿಕತೆಯೊಳಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕು ಮತ್ತು ಐತಿಹಾಸಿಕವಾಗಿ ತಂತ್ರಜ್ಞಾನದ ಮೂಲವಲ್ಲದ ದೇಶಗಳಿಗೆ ಲಭ್ಯವಿರಬೇಕು ಎಂದು ಪ್ರಧಾನಿ ಹೇಳಿದ್ದರು. ತಂತ್ರಜ್ಞಾನವು ಪ್ರಬಲ ಆಡಳಿತ ತರುತ್ತದೆ ಮತ್ತು ನಾಗರಿಕರು ಹಾಗೂ ಸರ್ಕಾರದ ನಡುವೆ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಅವರು ನಂಬಿದ್ದರು. ಹಾಗಾಗಿಯೇ ಈ ಸಭೆಯನ್ನು ಫೆ.13ರಿಂದ 15ರವರೆಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ಸಚಿವಾಲಯ ಆಯೋಜಿಸಿದೆ. ಇಲ್ಲಿ ಡಿಜಿಟಲ್‌ ಸಾರ್ವಜನಿಕ ಮೂಲಸೌಕರ್ಯ ಮತ್ತು ಡಿಜಿಟಲ್‌ ಆರ್ಥಿಕತೆಗೆ ಸೈಬರ್‌ ಸುರಕ್ಷತೆಯನ್ನು(cyber security) ಅಭಿವೃದ್ಧಿ ಪಡಿಸುವ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಹೇಳಿದರು.

ಆರ್ಥಿಕ ಚೇತರಿಕೆ to ತೆರಿಗೆ ವಿನಾಯಿತಿ, ನವ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್; ರಾಜೀವ್ ಚಂದ್ರಶೇಖರ್!

ಜಿ20ರ ಡಿಜಿಟಲ್‌ ಎಕಾನಮಿ ವರ್ಕಿಂಗ್‌ ಗ್ರೂಪ್‌, ಜರ್ಮನಿ ಅಧ್ಯಕ್ಷತೆಯ (German Presidency) ಭಾಗವಾಗಿದ್ದು, ಸುರಕ್ಷಿತ, ಅಂತರ್ಸಂಪರ್ಕಿತ ಮತ್ತು ಅಂತರ್ಗತ ಡಿಜಿಟಲ್ ಆರ್ಥಿಕತೆಯ ಅನುಷ್ಠಾನವನ್ನು ಉತ್ತೇಜಿಸುವ ಉದ್ದೇಶದಿಂದ 2017 ರಲ್ಲಿ ರಚಿಸಲಾಗಿತ್ತು. ಜಾಗತಿಕ ಡಿಜಿಟಲ್ ಆರ್ಥಿಕತೆಯು 11 ಟ್ರಿಲಿಯನ್‌ ಡಾಲರ್‌ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಇದು 2025ರ ವೇಳೆಗೆ 23 ಟ್ರಿಲಿಯನ್‌ ತಲುಪುವ ಸಾಧ್ಯತೆ ಇದೆ.

ಪ್ರಧಾನಿ ಮೋದಿಯಿಂದ ಯುವಕರಿಗೆ ಹೊಸ ಅವಕಾಶ: ರಾಜೀವ್ ಚಂದ್ರಶೇಖರ್

Follow Us:
Download App:
  • android
  • ios